newsics.com/ನ್ಯೂಸಿಕ್ಸ್
ಹಬ್ಬದ ಸೀಸನ್ ಬಂತಂದ್ರೆ ಸಾಕು, ತತ್ಕಾಲ್ ಟಿಕೆಟ್‌ಗಾಗಿ IRCTC ಸೈಟ್ ಓಪನ್ ಮಾಡಿದ 1 ನಿಮಿಷದಲ್ಲೇ “Regret” ಬೋರ್ಡ್ ಕಾಣಿಸಿಕೊಳ್ಳುತ್ತೆ. ಬೆಳಗ್ಗೆ 10 ಗಂಟೆಗೆ AC ಕ್ಲಾಸ್, 11 ಗಂಟೆಗೆ ಸ್ಲೀಪರ್ ಕ್ಲಾಸ್ ಬುಕಿಂಗ್ ಶುರುವಾದ ತಕ್ಷಣ ಸರ್ವರ್ ಡೌನ್, ಪೇಮೆಂಟ್ ಫೇಲ್, ಸೀಟ್ ಖಾಲಿ ಇಲ್ಲ ಎಂಬ ಮೆಸೇಜ್.
ಕೊನೆ ಕ್ಷಣದ ಪ್ರಯಾಣಕ್ಕೆ ತತ್ಕಾಲ್ ಟಿಕೆಟ್ ಸಿಗೋದು ಅದೃಷ್ಟದ ಆಟ ಅನ್ಕೊಂಡಿದ್ದೀರಾ? ಆದರೆ ರೈಲ್ವೆ TTE ಒಬ್ಬರು ಹೇಳುವ ಪ್ರಕಾರ ಕೆಲವು ಸಣ್ಣ ಟ್ರಿಕ್ಸ್ ಫಾಲೋ ಮಾಡಿದ್ರೆ ರೈಲ್ವೆ ತತ್ಕಾಲ್ ಬುಕಿಂಗ್ (Railway Tatkal Booking) ಸಕ್ಸಸ್ ರೇಟ್ 80% ಹೆಚ್ಚಿಸಬಹುದು.
ತತ್ಕಾಲ್ ಟಿಕೆಟ್ ಬುಕ್ ಮಾಡಲು ಬಹುತೇಕರು 5 ರಿಂದ 10 ನಿಮಿಷ ಮೊದಲೇ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಲಾಗಿನ್ ಆಗುತ್ತಾರೆ. ಮೊದಲೇ ಲಾಗಿನ್ ಆದರೆ ಟಿಕೆಟ್ ಬೇಗ ಸಿಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದು ದೊಡ್ಡ ತಪ್ಪು ಎಂದು ಟಿಟಿಇ ಹೇಳುತ್ತಾರೆ. ಸಿಸ್ಟಮ್ ದೀರ್ಘ ಸಮಯ ಲಾಗಿನ್ ಆಗಿದ್ದರೆ ಸ್ವಯಂಚಾಲಿತವಾಗಿ ಲಾಗ್ ಔಟ್ ಮಾಡುತ್ತದೆ. ಬುಕಿಂಗ್ ಶುರುವಾಗುವ ಹೊತ್ತಿಗೆ ಮತ್ತೆ ಲಾಗಿನ್ ಆಗಲು ಸಮಯ ವ್ಯರ್ಥವಾಗುತ್ತದೆ. ಅಷ್ಟರಲ್ಲಿ ಸೀಟುಗಳು ಭರ್ತಿಯಾಗಿರುತ್ತವೆ. ಹೀಗಾಗಿ ತತ್ಕಾಲ್ ಬುಕಿಂಗ್ ತೆರೆಯುವ ಕೇವಲ 2 ರಿಂದ 3 ನಿಮಿಷಗಳ ಮೊದಲು ಲಾಗಿನ್ ಆಗಿ. ಇದು ಸಮಯ ಉಳಿಸುತ್ತದೆ.
ಮಾಸ್ಟರ್ ಲಿಸ್ಟ್ ಬಳಸಿ ಸಮಯ ಉಳಿಸಿ:
ಟಿಕೆಟ್ ಬುಕ್ ಮಾಡುವಾಗ ಹೆಚ್ಚಿನ ಸಮಯ ಪ್ರಯಾಣಿಕರ ಹೆಸರು, ವಯಸ್ಸು, ಆಧಾರ್ ವಿವರ ತುಂಬುವುದರಲ್ಲೇ ಹೋಗುತ್ತದೆ. ಇದರಿಂದಾಗಿ ಸೀಟು ಕೈತಪ್ಪುತ್ತದೆ. ಇದನ್ನು ತಪ್ಪಿಸಲು IRCTCಯ ಮಾಸ್ಟರ್ ಲಿಸ್ಟ್ ವೈಶಿಷ್ಟ್ಯ ಬಳಸಿ ಎಂದು ಟಿಟಿಇ ಸಲಹೆ ನೀಡುತ್ತಾರೆ. ಆಗಾಗ ಪ್ರಯಾಣಿಸುವ ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಎಲ್ಲ ಮಾಹಿತಿಯನ್ನು ಮೊದಲೇ ಮಾಸ್ಟರ್ ಲಿಸ್ಟ್‌ನಲ್ಲಿ ಸೇರಿಸಿಡಿ. ಬುಕಿಂಗ್ ವೇಳೆ ಕೇವಲ ಆಯ್ಕೆ ಮಾಡಿದರೆ ಸಾಕು. ಮತ್ತೆ ಮತ್ತೆ ಟೈಪ್ ಮಾಡುವ ಅಗತ್ಯವಿಲ್ಲ. ಇದರಿಂದ 30 ರಿಂದ 40 ಸೆಕೆಂಡ್ ಉಳಿತಾಯವಾಗುತ್ತದೆ ಮತ್ತು ಟಿಕೆಟ್ ಸಿಗುವ ಅವಕಾಶ ಹೆಚ್ಚುತ್ತದೆ.
ಪೇಮೆಂಟ್ಗೆ ರೈಲ್ವೆ ವ್ಯಾಲೆಟ್ ಅತ್ಯುತ್ತಮ:
ಸೀಟು ಆಯ್ಕೆಯಾದ ನಂತರ ಪೇಮೆಂಟ್ ವಿಳಂಬವಾದರೂ ಟಿಕೆಟ್ ತಪ್ಪಿಹೋಗಬಹುದು. ಯುಪಿಐ ಮತ್ತು ಇತರ ಆನ್‌ಲೈನ್ ಪಾವತಿ ಆಯ್ಕೆಗಳು ವೇಗವಾಗಿದ್ದರೂ, ತತ್ಕಾಲ್ ಬುಕಿಂಗ್‌ಗೆ ರೈಲ್ವೆ ವ್ಯಾಲೆಟ್ ಹೆಚ್ಚು ಉಪಯುಕ್ತ ಎಂದು ಟಿಟಿಇ ತಿಳಿಸಿದ್ದಾರೆ. ಮೊದಲೇ ವ್ಯಾಲೆಟ್‌ನಲ್ಲಿ ಹಣ ಹಾಕಿಟ್ಟರೆ ಪೇಮೆಂಟ್ ಕ್ಷಣಾರ್ಧದಲ್ಲಿ ಆಗುತ್ತದೆ. ಒಟಿಪಿ ಅಥವಾ ಬ್ಯಾಂಕ್ ಪೇಜ್ ಓಪನ್ ಆಗುವ ವಿಳಂಬ ಇರುವುದಿಲ್ಲ. ಇದರಿಂದ ಕನ್ಫರ್ಮ್ ಟಿಕೆಟ್ ಸಿಗುವ ಚಾನ್ಸ್ ಜಾಸ್ತಿ.
ಟಿಕೆಟ್ ಸಿಗದಿದ್ದರೆ ಏನು ಮಾಡಬೇಕು?
ಎಲ್ಲ ಪ್ರಯತ್ನದ ಬಳಿಕವೂ ತತ್ಕಾಲ್ ಟಿಕೆಟ್ ವೇಟಿಂಗ್ ಲಿಸ್ಟ್‌ನಲ್ಲಿ ಉಳಿದರೆ ಮರುದಿನ ಮತ್ತೆ ಪ್ರಯತ್ನಿಸಿ. ಪ್ರಯಾಣ ಅತ್ಯಗತ್ಯವಿದ್ದರೆ ರೈಲಿನಲ್ಲಿ ಟಿಟಿಇ ಅವರನ್ನು ಭೇಟಿ ಮಾಡಿ ಖಾಲಿ ಇರುವ ಸೀಟಿನ ಬಗ್ಗೆ ವಿಚಾರಿಸಬಹುದು. ನಿಯಮದ ಪ್ರಕಾರ ದಂಡ ಪಾವತಿಸಿ ಪ್ರಯಾಣಿಸಬಹುದು. ಆದರೆ ಇದು ಸಂಪೂರ್ಣವಾಗಿ ಸೀಟು ಲಭ್ಯತೆ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಮೊದಲೇ ಟಿಕೆಟ್ ಬುಕ್ ಮಾಡುವುದೇ ಸುರಕ್ಷಿತ.!
ಒಟ್ಟಾರೆಯಾಗಿ, ಈ ಸರಳ ಸಲಹೆಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿವೆ. ಅನೇಕ ಪ್ರಯಾಣಿಕರು ಈ ತಂತ್ರಗಳ ಬಗ್ಗೆ ಮೊದಲು ಗೊತ್ತಿರಲಿಲ್ಲ ಎಂದಿದ್ದಾರೆ. ಕೆಲವರು ಈ ವಿಧಾನ ಅನುಸರಿಸಿ ಸುಲಭವಾಗಿ ತತ್ಕಾಲ್ ಟಿಕೆಟ್ ಪಡೆದ ಅನುಭವ ಹಂಚಿಕೊಂಡಿದ್ದಾರೆ. ಹಾಗಾಗಿ, ನೀವು ಕೂಡ ಮುಂದಿನ ಬಾರಿ ಈ ಟಿಪ್ಸ್ ಟ್ರೈ ಮಾಡಿ.
https://www.instagram.com/reel/DYR4GCmTJIn/?igsh=aDBlcmIxM2Npajdo