Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

Share
2 Min Read
SHARE

newsics.com / ನ್ಯೂಸಿಕ್ಸ್

ನಾಗ್ಪುರ: ಭಾರತೀಯ ವಾಯುಸೇನೆಯ (IAF) ಅಧಿಕಾರಿಯೊಬ್ಬರ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದಲ್ಲದೆ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

24 ವರ್ಷದ ಸಂತ್ರಸ್ತ ಮಹಿಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಆಕೆಯ ಹಳೆಯ ಸಹಪಾಠಿ ಅಯಾಜ್ ತಾಜ್ ಮದಾರೆ (26) ಎಂಬಾತ ಆಸ್ತಿ ವ್ಯವಹಾರದ ನೆಪದಲ್ಲಿ ವರ್ಧಾ ರಸ್ತೆಯ ಹೋಟೆಲ್‌ಗೆ ಕರೆಸಿಕೊಂಡಿದ್ದನು. ಅಲ್ಲಿ ಮಹಿಳೆಗೆ ಅಮಲು ಪದಾರ್ಥ ಬೆರೆಸಿದ ಜ್ಯೂಸ್ ನೀಡಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಆ ಸಂದರ್ಭದ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿ ಅಯಾಜ್ ಈ ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಮಹಿಳೆಯನ್ನು ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದು, ಹಲವು ಬಾರಿ ಲೈಂಗಿಕ ಶೋಷಣೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ ಆಕೆಯಿಂದ ಬರೋಬ್ಬರಿ 3.09 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾನೆ.

ಮೇ 2025 ರಲ್ಲಿ ಆರೋಪಿಯು ಮಹಿಳೆಯನ್ನು ಕಲ್ಮೇಶ್ವರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ತನ್ನ ಸಹಚರರಾದ ಅಮೀನ್ ಶೇಖ್ ಮತ್ತು ಹಜರತ್ ಮೌಲಾನಾ ಎಂಬುವವರ ಜೊತೆ ಸೇರಿ ಬಲವಂತದ ಧರ್ಮಾಂತರದ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯು ‘ನನ್ನನ್ನು ಬಿಟ್ಟುಬಿಡಿ’ ಎಂದು ಗೋಗರೆಯುತ್ತಿದ್ದರೂ, ಆರೋಪಿಯು ಆಕೆಯ ಕೈಗಳನ್ನು ಬಲವಂತವಾಗಿ ಹಿಡಿದು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಿರುವುದು ಕಂಡುಬಂದಿದೆ.

ಇತ್ತೀಚೆಗೆ ಕರ್ತವ್ಯ ಮುಗಿಸಿ ಮನೆಗೆ ಮರಳಿದ ತನ್ನ ಪತಿಗೆ ಮಹಿಳೆ ಈ ಎಲ್ಲಾ ವಿಷಯಗಳನ್ನು ತಿಳಿಸಿದ್ದು, ತಕ್ಷಣವೇ ಸೋನೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಅತ್ಯಾಚಾರ, ಸುಲಿಗೆ, ಬಲವಂತದ ಧರ್ಮಾಂತರ ಹಾಗೂ ಮಹಾರಾಷ್ಟ್ರದ ಬ್ಲ್ಯಾಕ್ ಮ್ಯಾಜಿಕ್ (ಮಾಟಮಂತ್ರ ನಿಷೇಧ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ಆರೋಪಿ ಅಯಾಜ್ ಮದಾರೆ ಮತ್ತು ಅಮೀನ್ ಶೇಖ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಮೂರನೇ ಆರೋಪಿ ಹಜರತ್ ಮೌಲಾನಾ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಅಗಸ್ಟ್​​ 7 ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ!

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

 

TAGGED:IAF officer's wife druggedrapedtried to convert to Islam
Share This Article
Facebook Twitter Copy Link Print
Previous Article ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ
Next Article ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

Popular Posts

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

You Might Also Like

ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read
ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?