newsics.com/ನ್ಯೂಸಿಕ್ಸ್
ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿಯ ಮುದ್ದಿನ ಮಗಳು ಸಾನ್ವಿ ಸುದೀಪ್ ಅವರ ಮದುವೆ ವಿಚಾರ ಸದ್ಯ ಭಾರೀ ಸದ್ದು ಮಾಡುತ್ತಿದೆ.
ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜಯ್ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ‘ಮ್ಯಾಂಗೋ ಪಚ್ಚಿ’ ಸಿನಿಮಾವನ್ನು ಪ್ರಿಯಾ ಸುದೀಪ್ ಅವರೇ ಸ್ವತಃ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ವಿಶೇಷ ಸಂದರ್ಶನವೊಂದರಲ್ಲಿ ಪ್ರಿಯಾ ಅವರು ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಸಾನ್ವಿ ಮದುವೆಯಾಗುವ ಹುಡುಗ ಹೇಗಿರಬೇಕು ಎಂದೂ ರಿವೀಲ್ ಮಾಡಿದ್ದಾರೆ.
ನಾನು ಮಗಳಿಗೆ ಮದುವೆ ಮಾಡಿ ಬೇರೆ ಮನೆಗೆ ಕಳಿಸುವುದಿಲ್ಲ. ಒಂದು ವೇಳೆ ಮದುವೆ ಮಾಡಿದರೂ, ಮದುವೆಯಾಗುವ ಹುಡುಗನನ್ನೇ ಮನೆ ಅಳಿಯನಾಗಿ ಕರೆಸಿಕೊಳ್ಳುತ್ತೇನೆ” ಎಂದು ನಗುತ್ತಲೇ ಹೇಳಿದ್ದಾರೆ.ಆದರೆ ಈ ಮಾತಿನ ಹಿಂದೆ ಮಗಳ ಮೇಲಿನ ಅಪಾರ ಪ್ರೀತಿ ಅಡಗಿದೆ. “ಅವಳು ಎಲ್ಲೇ ಇದ್ದರೂ ಖುಷಿಯಾಗಿರಬೇಕು. ಅವಳ ಸಂತೋಷ ಮತ್ತು ನೆಮ್ಮದಿಯೇ ನಮಗೆ ಮುಖ್ಯ. ಅವಳು ಚೆನ್ನಾಗಿದ್ದರೆ ಸಾಕು” ಎಂದು ಪ್ರಿಯಾ ಭಾವುಕರಾಗಿ ಹೇಳಿದ್ದಾರೆ.
ಸುದೀಪ್ ಮತ್ತು ಸಾನ್ವಿ ನಡುವಿನ ಆತ್ಮೀಯ ಸಂಬಂಧದ ಬಗ್ಗೆ ಮಾತನಾಡಿದ ಪ್ರಿಯಾ, ಅಪ್ಪ-ಮಗಳು ಇಬ್ಬರೂ ಸೇರಿ ನನ್ನನ್ನು ಚುಡಾಯಿಸುತ್ತಿರುತ್ತಾರೆ. ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಂತೆ ಇರುತ್ತಾರೆ. ಸಾನ್ವಿ ಯಾವಾಗಲೂ ನನಗೆ ಬೆಂಬಲವಾಗಿ ನಿಂತುಕೊಳ್ಳುತ್ತಾಳೆ. ಅವಳು ನೀಡುವ ಧೈರ್ಯ ಮತ್ತು ಸಪೋರ್ಟ್ ಅಮೂಲ್ಯ ಎಂದು ತಿಳಿಸಿದ್ದಾರೆ.
ಸ್ಟಾರ್ ಕಿಡ್ ಎಂಬ ಹಣೆಪಟ್ಟಿಗೆ ಸೀಮಿತವಾಗದೆ, ಸಾನ್ವಿ ತಮ್ಮದೇ ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿದ್ದಾರೆ. ‘ಮಾರ್ಕ್ಸ್’ ಚಿತ್ರದ ಜನಪ್ರಿಯ ‘ಮಸ್ತ್ ಮಲೈಕಾ’ ಹಾಡಿನ ಮೂಲಕ ಗಾಯನ ಕ್ಷೇತ್ರಕ್ಕೆ ಕಾಲಿಟ್ಟಿರುವ ಸಾನ್ವಿ, ತಮ್ಮ ಸಂಗೀತ ಪ್ರತಿಭೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ