Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌
ಕರ್ನಾಟಕಪ್ರಮುಖಮನರಂಜನೆ

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

Share
3 Min Read
SHARE

newsics.com/ನ್ಯೂಸಿಕ್ಸ್

ಕಲರ್ಸ್ ಕನ್ನಡ ವಾಹಿನಿಯಿಂದ ‘ಬಿಗ್ ಬಾಸ್’ ಬಗ್ಗೆ ಬಿಗ್ ಅಪ್‌ಡೇಟ್ ರಿವೀಲ್ ಆಗಿದೆ. ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಆರಂಭದ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸ್ಪರ್ಧಿಗಳ ಸಂಭಾವನೀಯ ಪಟ್ಟಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೆಯೇ ‘ಬಿಗ್ ಬಾಸ್ ಕನ್ನಡ 13’ ರಲ್ಲಿ ಸ್ಪರ್ಧಿಸಲು ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ನಟ, ನಟಿಯರಿಗೆ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ.

ಹಾಗಾದ್ರೆ ಯಾರಿಗೆಲ್ಲಾ ‘ಬಿಗ್ ಬಾಸ್’ ಆಫರ್ ಕೊಟ್ಟಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ. ಆದ್ರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಾಗಿದೆ. ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.

1.  ಸುಷ್ಮಾ ಕೆ.ರಾವ್‌

ಸುಷ್ಮಾ ಕೆ ರಾವ್‌ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ಮುಖ್ಯಪಾತ್ರದಲ್ಲಿ ನಟಿಸಿದ್ದ ಭಾಗ್ಯಲಕ್ಷ್ಮೀ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಸದ್ಯ ಕ್ವಾಟ್ಲೆ ಕಿಚನ್‌ ರಿಯಾಲಿಟಿ ಶೋದಲ್ಲಿ ನಿರೂಪಕಿ ಆಗಿದ್ದಾರೆ. ಬಿಗ್‌ಬಾಸ್‌ ಆರಂಭವಾಗುತ್ತಿದ್ದಂತೆ ಕ್ವಾಟ್ಲೆ ಕಿಚನ್‌ ಕೂಡ ಮುಕ್ತಾಯಗೊಳ್ಳಲಿದ್ದು, ಸುಷ್ಮಾ ಬಿಗ್‌ ಬಾಸ್‌ಗೆ ಹೋಗುತ್ತಾರೆ ಎನ್ನಲಾಗಿದೆ.

 

2. ನಿಶಾ ಯೋಗೇಶ್ವರ್

ಹಿರಿಯ ರಾಜಕಾರಣಿ ಸಿ.ಪಿ.ಯೋಗೇಶ್ವರ್‌ ಅವರ ಪುತ್ರಿ. ಅಂದರೆ ಯೋಗೇಶ್ವರ್‌ ಅವರ ಹಿರಿಯ ಪತ್ನಿಯ ಮಗಳು. ನಿಶಾ ತಮ್ಮ ತಂದೆಯ ವಿರುದ್ದವೇ ತಿರುಗಿಬಿದ್ದವರು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಖತ್‌ ಸುದ್ದಿಯಲ್ಲಿ ಇರ್ತಾರೆ. ಅವರು ಈ ಸಲ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ.

 

3. ರಿತ್ವಿಕ್‌ ಕೃಪಾಕರ್‌

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಮಾಚಾರಿ ಧಾರವಾಹಿಯಲ್ಲಿ ನಟಿಸಿ, ಹೆಸರು ಮಾಡಿದವರು. ಧಾರಾವಾಹಿ ಮುಗಿದ ಬಳಿಕ ಇನ್ಯಾವುದೇ ಕಿರುತೆರೆ ಧಾರಾವಾಹಿ, ಶೋಗಳಲ್ಲಿ ಮಾಡಿಲ್ಲ. ಈ ಸಲ ಬಿಗ್‌ಬಾಸ್‌ಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

4. ಸಮೀಕ್ಷಾ..

ನಟಿ ಸಮೀಕ್ಷಾ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಝೀ ಕನ್ನಡದಲ್ಲಿ ಪ್ರಸಾರವಾಗಿದ್ದ ಸುಬ್ಬಲಕ್ಷ್ಮೀ ಸಂಸಾರ ಧಾರಾವಾಹಿಯಲ್ಲಿ ವಿಲನ್‌ ಪಾತ್ರದ ಮೂಲಕ ಸಾಕಷ್ಟು ಹೆಸರು ಮಾಡಿದ್ದರು.

 

5. ರಾಘವೇಂದ್ರ

‘ಮಜಾಭಾರತ’, ‘ಮಜಾ ಟಾಕೀಸ್’, ‘ಗಿಚ್ಚಿ ಗಿಲಿಗಿಲಿ ಮತ್ತಿತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ರಾಘವೇಂದ್ರ ಅವರು ಸೋಷಿಯಲ್‌ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್‌. ಇವರು ಹೆಣ್ಣು ಪಾತ್ರ ಹಾಕಿಯೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಅವರು ಈ ಸಲ ಬಿಗ್‌ಬಾಸ್‌ ಮನೆಗೆ ಹೋಗ್ತಾರಂತೆ.

 

6. ನಿತ್ಯಾಶ್ರೀ

ಹೂವಿನ ಬಾಣದಂತೆ ಎಂಬ ಹಾಡಿನ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದ ನಿತ್ಯಾಶ್ರೀ ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋಕ್ಕೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಅವರು ಈ ಸಲ ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಅರ್ಜಿಯನ್ನೂ ಸಲ್ಲಿಸಿದ್ದಾರೆ.

 

7. ಕಿಪ್ಪಿ ಕೀರ್ತಿ

ಕಿಪ್ಪಿ ಕೀರ್ತಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಟ್ರೋಲ್‌ ಆಗುತ್ತಾರೆ. ಲವ್‌ ವಿಷಯಕ್ಕೆ ಇತ್ತೀಚೆಗಂತೂ ಭಾರಿ ಸುದ್ದಿಯಾಗಿದ್ದರು. ಅವರೂ ಕೂಡ ಬಿಗ್‌ಬಾಸ್‌ ಮನೆಯಲ್ಲಿ ಇರ್ತಾರೆ ಎಂದು ಹೇಳಲಾಗುತ್ತಿದೆ.

 

8. ಭರತ್‌ ಬೋಪಣ್ಣ

ಬ್ರಹ್ಮಗಂಟು ಧಾರಾವಾಹಿ ನಟ ಭರತ್‌ ಬೋಪಣ್ಣ ಅವರೂ ಕೂಡ ಬಿಗ್‌ಬಾಸ್‌ ಕನ್ನಡ ಸೀಸನ್‌ 13ಕ್ಕೆ ಬರ್ತಾರೆ ಎಂದು ಹೇಳಲಾಗುತ್ತಿದೆ. ಅವರ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

 

9. ನಿರ್ದೇಶಕ ಓಂ ಪ್ರಕಾಶ್‌ ರಾವ್

ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಓಂ ಪ್ರಕಾಶ್‌ ರಾವ್‌ ಅವರು ಈ ಬಾರಿ ಬಿಗ್‌ಬಾಸ್‌ ಮನೆಗೆ ಹೋಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಆದರೆ ಅವರು ಈಗಾಗಲೇ ಬಿಗ್‌ಬಾಸ್‌ ಕನ್ನಡ ಸೀಸನ್‌ 4ಕ್ಕೆ ಹೋಗಿದ್ದರು. ಆದರೂ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.

ಊಟ, ವಸತಿ ವ್ಯವಸ್ಥೆ ಸರಿಯಿಲ್ಲವೆಂದು ಪಿಜಿ ಮಾಲೀಕರ ವಿರುದ್ಧ ರಾತ್ರೋರಾತ್ರಿ ರಸ್ತೆಗಿಳಿದ ಯುವತಿಯರು

TAGGED:Bigg Boss 13 list of potential contestants? Names go viral
Share This Article
Facebook Twitter Copy Link Print
Previous Article ಊಟ, ವಸತಿ ವ್ಯವಸ್ಥೆ ಸರಿಯಿಲ್ಲವೆಂದು ಪಿಜಿ ಮಾಲೀಕರ ವಿರುದ್ಧ ರಾತ್ರೋರಾತ್ರಿ ರಸ್ತೆಗಿಳಿದ ಯುವತಿಯರು
Next Article Jaspal Rana ಪ್ರಸಿದ್ದ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಇನ್ನಿಲ್ಲ

Popular Posts

ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು ಮೋಟಾರ್ ಅಪಘಾತವಲ್ಲ : ಸುಪ್ರೀಂ ಕೋರ್ಟ್ ತೀರ್ಪು

1 Min Read

ಶಿಗೆಲ್ಲೋಸಿಸ್ ಸೋಂಕಿನ ಭೀತಿ: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೈಅಲರ್ಟ್

1 Min Read

ಅದೃಷ್ಟದ ಬಾಗಿಲು ತೆರೆದ ಲಾಟರಿ : ₹1,000 ಸಾಲ ಕೊಟ್ಟ ಸ್ನೇಹಿತನಿಗೆ ₹1 ಕೋಟಿ ಉಡುಗೊರೆ

2 Min Read

ವರ್ಕ್ ಫ್ರಮ್ ಹೋಮ್’ ಓಕೆ, ಆದರೆ ಮನೆಯಲ್ಲಿ ಕೂತು ಕೆಲಸ ಮಾಡುವಂತಿಲ್ಲ ‘ಜಿಪಿಎಸ್ ನಿಯಮ’ಕ್ಕೆ ಉದ್ಯೋಗಿಗಳು ಶಾಕ್!

2 Min Read

You Might Also Like

ದೇಶಪ್ರಮುಖ

Jaspal Rana ಪ್ರಸಿದ್ದ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖ

ಊಟ, ವಸತಿ ವ್ಯವಸ್ಥೆ ಸರಿಯಿಲ್ಲವೆಂದು ಪಿಜಿ ಮಾಲೀಕರ ವಿರುದ್ಧ ರಾತ್ರೋರಾತ್ರಿ ರಸ್ತೆಗಿಳಿದ ಯುವತಿಯರು

2 Min Read
ಕರ್ನಾಟಕದೇಶಪ್ರಮುಖ

ಪೆಟ್ರೋಲ್ ಬಂಕ್‌ಗಳಲ್ಲಿ ಕೈಗಾರಿಕೆಗಳ ಬಲ್ಕ್ ಖರೀದಿಗೆ ಹೊಸ ನಿಯಮ ಜಾರಿ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?