Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ದೀದಿ ಕೋಟೆಯಲ್ಲಿ ಬಿರುಕು :ಕಾಂಗ್ರೆಸ್‌ ಜೊತೆ ಟಿಎಂಸಿ ವಿಲೀನ?ದೀದಿಗೆ ಉಪಾಧ್ಯಕ್ಷ ಪಟ್ಟ?
ದೇಶಪ್ರಮುಖ

ದೀದಿ ಕೋಟೆಯಲ್ಲಿ ಬಿರುಕು :ಕಾಂಗ್ರೆಸ್‌ ಜೊತೆ ಟಿಎಂಸಿ ವಿಲೀನ?ದೀದಿಗೆ ಉಪಾಧ್ಯಕ್ಷ ಪಟ್ಟ?

Share
2 Min Read
SHARE

newsics.com/ನ್ಯೂಸಿಕ್ಸ್

ನವದೆಹಲಿ: 2026 ಪಶ್ಚಿಮ ಬಂಗಾಳ  ವಿಧಾನಸಭೆಯ ಚುನಾವಣಾ ಫಲಿತಾಂಶ  ಬಂದಿದ್ದೇ ತಡ ದೀದಿ ಖ್ಯಾತಿಯ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಎಂಬ ಭದ್ರಕೋಟೆ ಚಿದ್ರವಾಗುವತ್ತ ಸಾಗುತ್ತಿದೆ.

ಈಗಾಗಲೇ 59 ವಿಧಾನಸಭಾ ಶಾಸಕರು ಹಾಗೂ 20 ಸಂಸದರು ಮಮತಾ ವಿರೋಧಿ ಮತ್ತೊಂದು ಬಣವನ್ನು ರಚಿಸಿದ್ದಾರೆ. ಅದರಲ್ಲೂ, ಒಂದು ಹೆಜ್ಜೆ ಮುಂದೇ ಹೋಗಿರುವ ಟಿಎಂಸಿ ಸಂಸದರು ಎನ್​ಡಿಎ ಮೈತ್ರಿಕೂಟವನ್ನೇ ಸೇರಲು ಮುಂದಾಗಿದ್ದಾರೆ. ಇದರ ನಡುವೆ, ಆ ಎಲ್ಲಾ ನಾಯಕರಿಗೂ ತಿರುಗೇಟು ನೀಡಲು ಮುಂದಾಗಿರುವ ಮಮತಾ ಅವರು ತಮ್ಮ ಪಕ್ಷವನ್ನು ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಲೀನಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಾವ ಪಾರ್ಟಿಯನ್ನು ಬಿಜೆಪಿಯಷ್ಟೇ ತನ್ನ ವಿರೋಧಿ ಎಂದು ಹೇಳಿಕೊಂಡು ಬರುತ್ತಿದ್ದ, ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿಯವರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ಸೋಮವಾರ (ಜೂನ್ 9) ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆದಿತ್ತು. ಡಿಎಂಕೆ, ಆಮ್ ಆದ್ಮಿ ಪಾರ್ಟಿಯ ಬಹಿಷ್ಕಾರದ ಮಧ್ಯೆಯೂ ನಡೆದ ಸಭೆಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ/ ಸಂಸದರೂ ಆಗಿರುವ ಅಭಿಷೇಕ್ ಬ್ಯಾನರ್ಜಿ ಭಾಗವಹಿಸಿದ್ದರು. ಸೋನಿಯಾ ಗಾಂಧಿ ಜೊತೆ ಅತ್ಯಂತ ಆತ್ಮೀಯದಿಂದ ಕಂಡ ಮಮತಾ, ಅವರನ್ನು ಸೋಲಿನ ವಿಚಾರದಲ್ಲಿ ಸಾಂತ್ವನವನ್ನು ಸೋನಿಯಾ ಹೇಳಿದರು ಎಂದು ಸುದ್ದಿಯಾಗುತ್ತಿದೆ. ಪಕ್ಷದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಮಮತಾ, ಸೋನಿಯಾ ಅವರಲ್ಲಿ ತಮ್ಮ ದುಃಖವನ್ನು ತೋಡಿಕೊಂಡರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪಕ್ಷವನ್ನು ಕಟ್ಟಿ ಬೆಳೆಸಿ, ಸತತ ಮೂರು ಅವಧಿಗೆ ಅಧಿಕಾರಕ್ಕೇರಿದ್ದ ಮಮತಾ ಬ್ಯಾನರ್ಜಿ ಮತ್ತು ಅವರ ಅಳಿಯನನ್ನೇ ಭಿನ್ನಮತೀಯರು ಎಂದು ಬಹುಪಾಲು ಟಿಎಂಸಿ ನಾಯಕರು ಹೇಳುತ್ತಿರುವುದು, ಮಮತಾ ಹಿನ್ನಡೆಗೆ ಆಗುತ್ತಿರುವ ಒಂದು ಉದಾಹರಣೆಯಾಗಿದೆ. ಎರಡು ದಿನಗಳಲ್ಲಿ ಮತ್ತಿಬ್ಬರು ರಾಜ್ಯಸಭಾ ಸದಸ್ಯರು, ಟಿಎಂಸಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇವರ ರಾಜೀನಾಮೆ ಆಂಗೀಕಾರವೂ ಆಗಿದೆ.

ಇಪ್ಪತ್ತಕ್ಕೂ ಹೆಚ್ಚು ಸಂಸದರು, ಬಿಜೆಪಿ ಮೈತ್ರಿಕೂಟದ ಜೊತೆ ಗುರುತಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿಗೆ ಆಸರೆಯಾಗುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ.

ವಿಲೀನ ಪ್ರಕ್ರಿಯೆ ನಡೆದರೆ ಸಂಭಾವ್ಯ ಸಾಂಸ್ಥಿಕ ಬದಲಾವಣೆಯ ಬಗ್ಗೆ ರೂಪುರೇಷೆಯನ್ನೂ ಕಾಂಗ್ರೆಸ್ ಸಿದ್ದಪಡಿಸಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಗೆ ಕಾಂಗ್ರೆಸ್ ಮತ್ತು ಟಿಎಂಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಭಿಷೇಕ್ ಬ್ಯಾನರ್ಜಿ ಪಾತ್ರದ ಬಗ್ಗೆ ಮುಕ್ಕಾಲು ಭಾಗ, ಟಿಎಂಸಿ ನಾಯಕರಿಗೆ ಅಸಮಾಧಾನ ಇರುವ ಹಿನ್ನಲೆಯಲ್ಲಿ, ಕಾಂಗ್ರೆಸ್ ಜೊತೆ ವಿಲೀನಕ್ಕೆ ಬಹಳಷ್ಟು ಜನ ಒಪ್ಪುತ್ತಿಲ್ಲ. ಇಂತಹ ಯಾವುದೇ ಪ್ರಪೋಸಲ್ ಇಲ್ಲ ಎಂದು ಟಿಎಂಸಿ ನಾಯಕರೊಬ್ಬರು ಹೇಳಿಕೆಯನ್ನು ನೀಡಿದ್ದಾರೆ.

ಕೇರಳದಲ್ಲಿ ಶಿಗೆಲ್ಲ ವೈರಸ್ ಗೆ ಹೆಣ್ಣು ಮಗು ಬಲಿ

TAGGED:TMC merges with Congress? Didi becomes vice president?
Share This Article
Facebook Twitter Copy Link Print
Previous Article ಕೇರಳದಲ್ಲಿ ಶಿಗೆಲ್ಲ ವೈರಸ್ ಗೆ ಹೆಣ್ಣು ಮಗು ಬಲಿ
Next Article Rain Alert ಮುಂದಿನ ಒಂದು ವಾರ ಭಾರಿ ಮಳೆ : ಹಲವು ಜಿಲ್ಲೆಗಳಿಗೆ ಗಾಳಿಯ ಎಚ್ಚರಿಕೆ

Popular Posts

Bengaluru Traffic ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್

1 Min Read

Ethanol blended fuels ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದು ಮಾಡಿದ ಕೇಂದ್ರ ಸರ್ಕಾರ

1 Min Read

ಗರ್ಲ್‌ಫ್ರೆಂಡ್‌ಗೆ 3 ಲಕ್ಷದ ಗಿಫ್ಟ್ ಕೊಟ್ಟ ಯುವಕ : ದುಬಾರಿ ಗಿಫ್ಟ್ ಕೈಗೆ ಸಿಗುತ್ತಿದ್ದಂತೆ ಬ್ರೇಕಪ್, ಅಷ್ಟಕ್ಕೂ ಅಲ್ಲಿ ಆಗಿದ್ದೇನು?

2 Min Read

ಎಐ ಎಡವಟ್ಟು: ಜೀವಂತವಾಗಿರುವ ನಟ ವಿಜಯ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಗ್ರಾಕ್ ಎಐ!

1 Min Read

You Might Also Like

ಕರ್ನಾಟಕದೇಶಪ್ರಮುಖ

PM Modi ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ : ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

1 Min Read
ಕರ್ನಾಟಕಪ್ರಮುಖ

ಚೆಕ್ ಬೌನ್ಸ್ ಕೇಸ್ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಆದೇಶ

1 Min Read
ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ ಯೋಜನೆ ಮಹತ್ವದ ಬದಲಾವಣೆ: ಬಯೋಮೆಟ್ರಿಕ್‌ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್‌!

1 Min Read
ಕರ್ನಾಟಕಪ್ರಮುಖ

Rain Alert ಮುಂದಿನ ಒಂದು ವಾರ ಭಾರಿ ಮಳೆ : ಹಲವು ಜಿಲ್ಲೆಗಳಿಗೆ ಗಾಳಿಯ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?