newsics.com/ನ್ಯೂಸಿಕ್ಸ್
ಜೀರ್ಣ ಶಕ್ತಿಯನ್ನು ಹೆಚ್ಚಿಸಲು, ಬಾಯಿಯ ದುರ್ವಾಸನೆ ಹೋಗಲಾಡಿಸಲು, ತಿನ್ನುತ್ತಿದ್ದರೆ ಹಾಗೆ ಕೂಲ್ ಕೂಲ್ ಎನಿಸಲು ನೈಸರ್ಗಿಕವಾದ ಸೋಂಪು ಕಾಳುಗಳ ಸೇವನೆ ಅನಿವಾರ್ಯ. ಕೇವಲ ಒಂದು ಟೇಬಲ್ ಚಮಚ ಸೋಂಪು ಕಾಳುಗಳಲ್ಲಿ ಅಡಗಿದೆ ಆರೋಗ್ಯ ವೃದ್ಧಿಸುವ ಅದ್ಭುತ ಗುಣ ಲಕ್ಷಣಗಳು.
ನಿಮಗೆ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಊಟ ಆದ ಮೇಲೆ ಸ್ವಲ್ಪ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯುವುದರಿಂದ ಮತ್ತು ನಿರಂತರವಾಗಿ ಈ ಅಭ್ಯಾಸವನ್ನು ಮುಂದುವರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಯಾವುದೇ ತರಹದ ತೊಂದರೆಗಳು ಎದುರಾಗುವುದಿಲ್ಲ.
ಒಂದು ವೇಳೆ ಈ ಅಭ್ಯಾಸ ಇಲ್ಲದಿದ್ದರೆ, ಇನ್ನು ಮುಂದೆ ನೀವು ಕೂಡ ಪ್ರತಿದಿನ ಊಟ ಆದ ನಂತರದಲ್ಲಿ ಸ್ವಲ್ಪ ಸೋಂಪು ಕಾಳುಗಳನ್ನು ಜಗಿಯುವ ಅಭ್ಯಾಸ ಮಾಡಿಕೊಂಡರೆ ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ತೆಲುಗು ಲೈಫ್‌ಸ್ಟೈಲ್ ಡಾಟ್ ಕಾಮ್ ವರದಿ ಪ್ರಕಾರ, ಈ ಸಣ್ಣ ಸೋಂಪು ಬೀಜಗಳು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದ್ದು, ಇವು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಹೀಗಾಗಿ ಇನ್ನು ಮುಂದೆ ನೀವು ಕೂಡ ಪ್ರತಿದಿನ ಊಟ ಆದ ನಂತರ ಸ್ವಲ್ಪ ಸೋಂಪು ಕಾಳುಗಳನ್ನು ಜಗಿಯುವ ಅಭ್ಯಾಸ ಮಾಡಿಕೊಂಡರೆ ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಸೋಂಪು ಕಾಳು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು!
ಜೀರ್ಣಕ್ರಿಯೆ ಸಮಸ್ಯೆ: ಊಟದ ನಂತರ ಸೋಂಪು ಅಗಿಯುವುದರಿಂದ ನೀವು ಸೇವಿಸಿದ ಆಹಾರವು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಇದು ಹೊಟ್ಟೆಯಲ್ಲಿರುವ ಕಿಣ್ವಗಳನ್ನು ಉತ್ತೇಜಿಸುತ್ತದೆ ಮತ್ತು ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ.
ತೂಕ ಇಳಿಕೆ: ಸೋಂಪು ಬೀಜಗಳು ನಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತವೆ. ಇದರಿಂದ, ದೇಹದಲ್ಲಿರುವ ಹೆಚ್ಚುವರಿ ಕ್ಯಾಲೋರಿಗಳು ವೇಗವಾಗಿ ಸುಡಲ್ಪಡುತ್ತವೆ. ನೀವು ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಬಯಸುವುದಾದರೆ, ನಿಮ್ಮ ಆಹಾರದಲ್ಲಿ ಸಂಪೂರ್ಣ ಸೋಂಪು ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು.
ನಿದ್ರಾಹೀನತೆ ಸಮಸ್ಯೆ: ರಾತ್ರಿ ಸರಿಯಾಗಿ ನಿದ್ರಿಸಲು ನಿಮಗೆ ಸಮಸ್ಯೆ ಆಗ್ತಿದ್ಯಾ? ಹಾಗಾದರೆ ಸೋಂಪು ನಿಮಗೆ ಉತ್ತಮ ಔಷಧಿಯಾಗಬಹುದು. ಸೋಂಪು ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಉತ್ತಮ ನಿದ್ರೆಗೆ ಅಗತ್ಯವಾದ ‘ಮೆಲಟೋನಿನ್’ ಹಾರ್ಮೋನ್ ಅನ್ನು ಸ್ರವಿಸುತ್ತದೆ. ಇದರಿಂದ, ನಿಮಗೆ ನೆಮ್ಮದಿಯ ನಿದ್ರೆ ಸಿಗುತ್ತದೆ.
ಹೃದ್ರೋಗ ಸಮಸ್ಯೆ: ಸೋಂಪು ಕಾಳಿನಲ್ಲಿರುವ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು (ಬಿಪಿ) ನಿಯಂತ್ರಣದಲ್ಲಿಡುತ್ತದೆ. ಇದು ಹೃದಯ ಬಡಿತವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ.
Cancer Drugs Hike ಕೀಮೋಥೆರಪಿ ಔಷಧಿಗಳ ಬೆಲೆ ಹೆಚ್ಚಳಕ್ಕೆ ಕೇಂದ್ರ ಒಪ್ಪಿಗೆ