newsics.com/ನ್ಯೂಸಿಕ್ಸ್
ನವದೆಹಲಿ: ಪತ್ನಿಯು ಯಾವುದೇ ಕಾರಣವಿಲ್ಲದೆ ನಿರಂತರವಾಗಿ ಪತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ನಿರಾಕರಿಸುವುದು ವೈವಾಹಿಕ ಜೀವನದಲ್ಲಿ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದ್ದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಂತಹ ನಡೆ ವಿಚ್ಛೇದನಕ್ಕೆ ಮಾನ್ಯ ಆಧಾರವಾಗಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ರಾಜಸ್ಥಾನ ಹೈಕೋರ್ಟ್ ನೀಡಿದ್ದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದು, ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.
ಪ್ರಕರಣದ ವಿಚಾರಣೆ ವೇಳೆ, ದಂಪತಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮರುಸಂಧಾನಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಜೊತೆಗೆ, ಪತ್ನಿಯು ನಿರಂತರವಾಗಿ ದಾಂಪತ್ಯ ಸಂಬಂಧದಿಂದ ದೂರ ಉಳಿದಿರುವುದು ಪತಿಗೆ ಮಾನಸಿಕ ನೋವು ಮತ್ತು ವೇದನೆ ಉಂಟುಮಾಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವೈವಾಹಿಕ ಸಂಬಂಧದಲ್ಲಿ ದೈಹಿಕ ಮತ್ತು ಭಾವನಾತ್ಮಕ ಸಾನ್ನಿಧ್ಯವು ಪ್ರಮುಖ ಅಂಶವಾಗಿದ್ದು, ಸೂಕ್ತ ಕಾರಣವಿಲ್ಲದೆ ಅದನ್ನು ನಿರಾಕರಿಸುವುದು ವಿವಾಹದ ಮೂಲ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂತಹ ನಡೆ ಮಾನಸಿಕ ಕ್ರೌರ್ಯವೆಂದು ಪರಿಗಣಿಸಬಹುದಾಗಿದ್ದು, ವಿಚ್ಛೇದನ ನೀಡಲು ನ್ಯಾಯಸಮ್ಮತ ಕಾರಣವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
samudrika shastra ಕೈಯಲ್ಲಿ 6 ಬೆರಳುಗಳಿದ್ದರೆ ಒಳ್ಳೆಯದಾ ಅಥವಾ ಕೆಟ್ಟದ್ದಾ..? ಸಾಮುದ್ರಿಕಾ ಶಾಸ್ತ್ರ ಹೇಳುದೇನು?