newsics.com
ಸ್ಯಾಂಡಲ್‌ವುಡ್‌ನ ಸುಂದರಿ ನೇಹಾ ಶೆಟ್ಟಿ ಕನ್ನಡದಲ್ಲಿ ಮಾಡಿರೋದು ಒಂದೇ ಸಿನಿಮಾ ನೋಡಿ. ಆದರೆ, ಹೆಚ್ಚಾಗಿ ಮಿಂಚುತ್ತಿರೋದು ಮಾತ್ರ ತೆಲುಗು ಸಿನಿರಂಗದಲ್ಲಿಯೇ ಅನ್ನೋದು ಅಷ್ಟೇ ಸತ್ಯ. ಆದರೆ, ಮೊನ್ನೆ ಸೈಮಾ ಅವಾರ್ಡ್ಸ್ ಪಾರ್ಟಿಯಲ್ಲಿ ದಿಢೀರನೆ ಕಾಣಿಸಿಕೊಂಡಿದ್ದಾರೆ. ಚೆಂದದ ಡ್ರೆಸ್ ತೊಟ್ಟು ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ.
ಮುಂಗಾರು ಮಳೆ-2 ಚಿತ್ರ ಆದ್ಮೇಲೆ ನೇಹಾ ಶೆಟ್ಟಿ ಕಳೆದೆ ಹೋದ್ರು.ಅದು ಕನ್ನಡ ಸಿನಿಪ್ರೇಮಿಗಳ ಲೆಕ್ಕದಲ್ಲಿ ಅನ್ನೋದು ಅಷ್ಟೇ ಸತ್ಯ.ಆದರೆ, ನೇಹಾ ಶೆಟ್ಟಿ ಪಕ್ಕದ ಟಾಲಿವುಡ್‌ನಲ್ಲಿಯೇ ಮಿಂಚುತ್ತಿದ್ದಾರೆ. ಮುಂಗಾರು ಮಳೆ -೨ ಆದ್ಮೇಲೆ ನೇರವಾಗಿಯೇ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಮೆಹಬೂಬಾ, ಗಲ್ಲಿ ರೌಡಿ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಡಿಜೆ ತಿಲ್ಲು, ಬೆದರುಲಂಕಾ-2012, ರೂಲ್ಸ್ ರಂಜನ್, ತಿಲ್ಲು ಸ್ಕ್ವೇರ್ ಮಾಡಿದ್ದಾರೆ. ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
ನೇಹಾ ಶೆಟ್ಟಿ ಕನ್ನಡಕ್ಕೆ ಬರೋ ಪ್ಲಾನ್ ಮಾಡಿದ್ದಾರೆ. ಆದರೆ, ಯಾರೂ ಕರೆಸಿಕೊಳ್ತಿಲ್ವೇ ಅನ್ನೋ ಬೇಸರ ಕೂಡ ಇದೆ ಅನಿಸುತ್ತದೆ. ಕನ್ನಡದ ಸ್ಕ್ರಿಪ್ಟ್‌ಗಳನ್ನ ಕೇಳ್ತಿರೋ ನೇಹಾ ಶೆಟ್ಟಿ, ಒಂದು ಒಳ್ಳೆ ಸ್ಕ್ರಿಪ್ಟ್‌ಗಾಗಿಯೇ ಕಾಯುತ್ತಿದ್ದಾರೆ. ಒಳ್ಳೆ ಸ್ಕ್ರಿಪ್ಟ್ ಅಂದ್ರೆ, ಅದು ಕಂಪ್ಲೀಟ್ ಹೊಸ ರೀತಿಯ ಪಾತ್ರವೇ ಆಗಿರಬೇಕು ಅನ್ನೋದೇ ಆಗಿದೆ.
ನಾನು ಎಲ್ಲೂ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಅಪ್ಪ-ಅಮ್ಮ ಬೆಂಗಳೂರಲ್ಲಿಯೇ ಇದ್ದಾರೆ. ಆಗಾಗ ಇಲ್ಲಿ ಬಂದು ಹೋಗ್ತಾನೇ ಇರುತ್ತೇನೆ. ಹಾಗೆ ಕನ್ನಡದಲ್ಲಿ ಆಫರ್ಸ್ ಸಿಗ್ತಿಲ್ಲ ಅಂತ ಬೇರೆ ಕಡೆಗೆ ಹೋಗಿಲ್ಲ. ತಮಿಳು, ಮಲೆಯಾಳಂ, ತೆಲುಗು ಭಾಷೆಯಿಂದಲೂ ಆಫರ್ಸ್ ಬಂದಿವೆ. ಆದರೆ, ನಾನು ಟಾಲಿವುಡ್ ಆಯ್ಕೆ ಮಾಡಿಕೊಂಡೆ ಅಂತಲೇ ನೇಹಾ ಶೆಟ್ಟಿ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ. ಆದರೆ, ನೇಹಾ ಇನ್ನು ಎರಡು ತಿಂಗಳಲ್ಲಿ ಏನೋ ಒಂದು ಬಿಗ್ ನ್ಯೂಸ್ ಕೊಡೋ ಪ್ಲಾನ್ ಅಲ್ಲಿಯೇ ಇದ್ದಾರೆ ಅಂತಲೇ ಹೇಳಬಹುದು.