newsics.com
ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾಲ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅವರ ವಿಡಿಯೋ ಕಾಲ್ ಕ್ಲಿಪಿಂಗ್ಗಳು ಸಖತ್ ವೈರಲ್ ಆಗಿವೆ. ಕಾರಾಗೃಹದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮೊದಲು ಅವರು ರೌಡಿಶೀಟರ್ಗಳ ಜೊತೆ ಕುಳಿತು ಚಹ ಹೀರುತ್ತಾ, ಸಿಗರೇಟು ಸೇದಿದ್ದ ಫೋಟೋ ವೈರಲ್ ಆಯ್ತು. ಬಳಿಕ ವಿಡಿಯೋ ಕಾಲ್ ತುಣುಕು ಕೂಡ ಹೊರಬಂತು.
ವೈರಲ್ ಆಗಿರುವ ದರ್ಶನ್ ಅವರ ವಿಡಿಯೋ ಕಾಲ್ನಲ್ಲಿ ಇರುವವನು ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ ಪುತ್ರ ಸತ್ಯ. ವಿಡಿಯೋ ಕಾಲ್ ಮಾಡಿ ದರ್ಶನ್ ಅವರನ್ನು ತೋರಿಸಿರುವವನು ಕೂಡ ರೌಡಿಶೀಟರ್ ಮಾರ್ಕೆಟ್ ಧರ್ಮ. ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದ. ಕೆಎಲ್ಇ ಕಾಲೇಜ್ ವಿದ್ಯಾರ್ಥಿಗಳಿಗೆ ಉಲ್ಟಾ ಮಚ್ಚಲ್ಲಿ ಸತ್ಯ ಹೊಡೆದಿದ್ದ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಹಲ್ಲೆ ನಡೆದಿತ್ತು.
ದರ್ಶನ್ ಅವರು ರೇಣುಕಾಸ್ವಾಮಿಯ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿ ಆಗಲು ಸಹವಾಸ ದೋಷವೇ ಕಾರಣ ಎಂಬುದು ಅನೇಕರ ಅಭಿಪ್ರಾಯ. ಜೈಲು ಸೇರಿದ ಬಳಿಕವಾದರೂ ಅವರು ಬದಲಾಗಬಹುದು ಎಂಬುದು ಕೆಲವರ ಊಹೆ ಆಗಿತ್ತು. ಆದರೆ ಅದು ನಿಜವಾಗುವಂತೆ ಕಾಣುತ್ತಿಲ್ಲ. ಯಾಕೆಂದರೆ, ಜೈಲಿನಲ್ಲಿ ಕೂಡ ದರ್ಶನ್ ಅವರು ರೌಡಿಗಳ ಸ್ನೇಹವನ್ನೇ ಹೆಚ್ಚಾಗಿ ಬೆಳೆಸಿಕೊಳ್ಳುತ್ತಿರುವಂತಿದೆ.