Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು: ಯುವ ಪೀಳಿಗೆಗಳಲ್ಲಿಯೇ ಈ ಸೋಂಕು ಹೆಚ್ಚು!
ಕರ್ನಾಟಕಪ್ರಮುಖ

ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು: ಯುವ ಪೀಳಿಗೆಗಳಲ್ಲಿಯೇ ಈ ಸೋಂಕು ಹೆಚ್ಚು!

Share
2 Min Read
SHARE

newsics.com/ನ್ಯೂಸಿಕ್ಸ್

ಕರ್ನಾಟಕದಲ್ಲಿ ಪುರುಷರ ನಡುವಿನ ಲೈಂಗಿಕ ಸಂಪರ್ಕದಿಂದ ಹರಡುವ ಹೆಚ್‌ಐವಿ/ಏಡ್ಸ್‌  ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ.

ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬಿಡುಗಡೆ ಮಾಡಿರುವ ಹೊಸ ಅಂಕಿ-ಅಂಶಗಳು ಈಗ ತೀವ್ರ ಆತಂಕ ಮೂಡಿಸಿವೆ. ಕಾಲೇಜು ಯುವಕರು ಮತ್ತು ಕಾರ್ಪೋರೇಟ್‌ ಉದ್ಯೋಗಿಗಳಲ್ಲಿ ಈ ಸೋಂಕು ಹೆಚ್ಚಾಗಿ ಹರಡುತ್ತಿರುವುದು ಬೆಳಕಿಗೆ ಬಂದಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ರಕರಣ:

 

2023-2024ರ ಅವಧಿಯಲ್ಲಿ: 44,581 ಪ್ರಕರಣಗಳು

 

2024-2025ರ ಅವಧಿಯಲ್ಲಿ: 62,664 ಪ್ರಕರಣಗಳು

 

2025-2026ರ ಪ್ರಸ್ತುತ ಅವಧಿಯಲ್ಲಿ: 66,606 ಪ್ರಕರಣಗಳು

 

ಈ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇವಲ ಮೂರೇ ವರ್ಷಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿರುವುದು ಸ್ಪಷ್ಟವಾಗಿದೆ. ವರದಿಯ ಪ್ರಕಾರ, 18 ರಿಂದ 25 ಮತ್ತು 26 ರಿಂದ 35 ವರ್ಷದೊಳಗಿನ ಯುವಕರಲ್ಲಿ ಈ ಸೋಂಕು ಅತಿ ಹೆಚ್ಚು ಪತ್ತೆಯಾಗುತ್ತಿದೆ. 18-25 ವರ್ಷದ ವಯೋಮಾನದವರಲ್ಲಿ 2023-24ರಲ್ಲಿ 3,732 ಇದ್ದ ಪ್ರಕರಣಗಳು, 2024-25ರ ವೇಳೆಗೆ 6,962 ಕ್ಕೆ ಏರಿಕೆಯಾಗಿದ್ದವು. ಪ್ರಸ್ತುತ ಸಾಲಿನಲ್ಲಿ ಇದು 6,283 ಕ್ಕೆ ತಲುಪಿದೆ. ಇನ್ನುಳಿದಂತೆ 26-35 ವರ್ಷದ ವಯೋಮಾನದವರಲ್ಲಿ ಪ್ರಕರಣಗಳ ಸಂಖ್ಯೆ 9,351 ರಿಂದ ಬರೋಬ್ಬರಿ 14,555 ಕ್ಕೆ ಏರಿಕೆಯಾಗಿದೆ. ಲೈಂಗಿಕವಾಗಿ ಹರಡುವ ರೋಗಗಳ ಪೈಕಿ (STDs) ಎಚ್‌ಐವಿ ಸೋಂಕು ರಾಜ್ಯದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿ ಮುಂದುವರಿದಿದ್ದು, ಈ ವರ್ಷವೇ 417 ಹೊಸ ಪ್ರಕರಣಗಳು ದಾಖಲಾಗಿವೆ.

ಕೆಲವರು ಮಹಿಳಾ ಲೈಂಗಿಕ ಕಾರ್ಯಕರ್ತರ ಜೊತೆ ಮತ್ತು ತಮ್ಮ ನಡುವೆಯೂ ಲೈಂಗಿಕ ಸಂಪರ್ಕ ಹೊಂದುವುದರಿಂದ ಸೋಂಕು ವೇಗವಾಗಿ ಹರಡುತ್ತಿದೆ. ಕಾಲೇಜು ಹಾಸ್ಟೆಲ್‌ಗಳು ಮತ್ತು ಪಿಜಿ (PG) ಗಳಲ್ಲಿ ಹೆಚ್ಚುತ್ತಿದೆ. ಹಾಗಾಗಿ ಸೇಫ್ ಸೆಕ್ಸ್ (Safe Sex) ಬಗ್ಗೆ ಅವೇರ್ನೆಸ್ ಮೂಡಿಸುತ್ತಿದ್ದೇವೆ’ ಎಂದು ಸೋಂಕಿನ ಬಗ್ಗೆ KSAPS ಪ್ರಾಜೆಕ್ಟ್ ಡೈರೆಕ್ಟರ್ ಪದ್ಮಾ ಬಿ. ಅವರು ತಿಳಿಸಿರುವುದಾಗಿ ಡೆಕ್ಕನ್‌ ಹೆರಾಲ್ಡ್‌ ಉಲ್ಲೇಖಿಸಿದೆ.

ಮೊಬೈಲ್ನಲ್ಲಿ ಡೇಟಿಂಗ್ ಆ್ಯಪ್​​​ಗಳ ಮೂಲಕ ಸುಲಭವಾಗಿ ಪಾರ್ಟ್ನರ್ ಸಿಗುತ್ತಿರುವುದರಿಂದ ಲೈಂಗಿಕ ಸಂಪರ್ಕಗಳ ಸಂಖ್ಯೆ ಹೆಚ್ಚಾಗಿದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಇನ್ಕನ್ಸಿಸ್ಟೆಂಟ್ ಕಾಂಡೋಮ್ ಬಳಕೆ  ಅಥವಾ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವುದು. HIV ಹೊರತುಪಡಿಸಿ ಇತರ ಸಿಫಿಲಿಸ್ ಮತ್ತು ಗೊನೊರಿಯಾ ದಂತಹ ಲೈಂಗಿಕ ರೋಗಗಳ (STIs) ಬಗ್ಗೆ ಅರಿವಿಲ್ಲದಿರುವುದೇ ಸೋಂಕು ಮತ್ತು ರೋಗಗಳ ಹರಡುವ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣ ಎಂದು ಬೆಂಗಳೂರಿನ ಸಿನಿಯರ್‌ ಕಂಸಲ್ಟೆಂಟ್‌ ಸೋಂಕು ರೋಗಗಳ ತಜ್ಞರಾದ ಡಾ.ಸ್ವಾತಿ ರಾಜ್‌ಗೋಪಾಲ್ ಹೇಳಿದ್ದಾರೆ.

ಸಾರ್ವಜನಿಕರು ತಮ್ಮ ಆರೋಗ್ಯದ ಅಪಾಯವನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಮತ್ತು ಮಾರ್ಗದರ್ಶನ ಪಡೆಯಲು ಸರ್ಕಾರದ ‘ಬ್ರೇಕ್‌ಫ್ರೀ’ ಮೊಬೈಲ್ ಆಪ್ ಅನ್ನು ಬಳಸಲು ಉತ್ತೇಜಿಸಲಾಗುತ್ತಿದೆ. ಇದರೊಂದಿಗೆ ಉಚಿತ ಮಾಹಿತಿ ಹಾಗೂ ಬೆಂಬಲಕ್ಕಾಗಿ 1097 ಸಹಾಯವಾಣಿ ಸದಾ ಕಾರ್ಯನಿರ್ವಹಿಸುತ್ತಿದ್ದು, ಕಾರ್ಪೊರೇಟ್ ವಲಯಗಳಲ್ಲಿ ಮುಂದಿನ ಎರಡು ತಿಂಗಳ ಕಾಲ ನಿರಂತರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ನೀರಿನ ಟ್ಯಾಂಕ್ ನಲ್ಲಿ ಮುಳುಗಿ 18 ತಿಂಗಳ ಮಗು ಸಾವು: ಉಪ್ಪಿನಲ್ಲಿ ಮಗುವಿನ ಮೃತದೇಹವಿಟ್ಟು l ನಲ್ಲಿ ಕುರಾನ್ ಹಾಡು ಹಾಕಿದ ಪೋಷಕರು

TAGGED:HIV cases on the rise in Karnataka: The infection is more prevalent among the younger generation!
Share This Article
Facebook Twitter Copy Link Print
Previous Article Pub entry restrict ರಾಜ್ಯದಲ್ಲಿ ಐಡಿ ಇದ್ದರಷ್ಟೇ ಪಬ್ ಪ್ರವೇಶ: ಪೊಲೀಸರಿಗೆ ಖಡಕ್ ಸೂಚನೆ
Next Article ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು

Popular Posts

ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು

1 Min Read

ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು: ಯುವ ಪೀಳಿಗೆಗಳಲ್ಲಿಯೇ ಈ ಸೋಂಕು ಹೆಚ್ಚು!

2 Min Read

Pub entry restrict ರಾಜ್ಯದಲ್ಲಿ ಐಡಿ ಇದ್ದರಷ್ಟೇ ಪಬ್ ಪ್ರವೇಶ: ಪೊಲೀಸರಿಗೆ ಖಡಕ್ ಸೂಚನೆ

1 Min Read

ನೀರಿನ ಟ್ಯಾಂಕ್ ನಲ್ಲಿ ಮುಳುಗಿ 18 ತಿಂಗಳ ಮಗು ಸಾವು: ಉಪ್ಪಿನಲ್ಲಿ ಮಗುವಿನ ಮೃತದೇಹವಿಟ್ಟು l ನಲ್ಲಿ ಕುರಾನ್ ಹಾಡು ಹಾಕಿದ ಪೋಷಕರು

1 Min Read

You Might Also Like

ಕರ್ನಾಟಕಪ್ರಮುಖ

ಸೋಲಾರ್ ಬೇಲಿಗೂ ಕ್ಯಾರೆ ಎನ್ನದ ಕಾಡಾನೆಗಳು: ಅರೇಹಳ್ಳಿ ಭಾಗದಲ್ಲಿ ಮತ್ತೆ ಆನೆಗಳ ಹಾವಳಿ

1 Min Read
ಕರ್ನಾಟಕಪ್ರಮುಖ

ಶಿವಂ ಅಸೋಸಿಯೇಟ್ಸ್ ಪ್ರಕರಣ: ಚಿತ್ರರಂಗದ ತಾರೆಯರಿಂದಲೂ ಮಾಹಿತಿ ಸಂಗ್ರಹಕ್ಕೆ ಸಿಐಡಿ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖ

NEET UG ಮರುಪರೀಕ್ಷೆಗಾಗಿ ಸರ್ಕಾರ ಕಟ್ಟೆಚ್ಚರ; ಪ್ರಶ್ನೆಪತ್ರಿಕೆ ತಯಾರಿಸಿದವರೇ ಹೌಸ್ ಅರೆಸ್ಟ್!

1 Min Read
ದೇಶಪ್ರಮುಖ

ದೀದಿಗೆ ಶಾಕ್ : 20 ಟಿಎಂಸಿ ಸಂಸದರು ಎನ್​ಡಿಎಗೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?