newsics.com
ಲೇಡಿ ಸೂಪರ್ ಸ್ಟಾರ್ ನಯನತಾರಾ ತಮಿಳು ಸಿನಿಮಾಗಳಲ್ಲಿ ಮಿಂಚುತ್ತಾ ಸಖತ್ ಸದ್ದು ಮಾಡುತ್ತಿದ್ದಾರೆ. ಜವಾನ್ ಮೂವಿ ಮೂಲಕ ಅವರು ಬಾಲಿವುಡ್ ಗೂ ಹೆಜ್ಜೆ ಇಟ್ಟಿದ್ದಾರೆ.

ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾದ ಈ ಚೆಲುವೆ ನಯನತಾರಾ ಅವರು ಉಯಿರ್ ಹಾಗೂ ಉಲಗ್ ಎಂಬ ಇಬ್ಬರು ಮಕ್ಕಳಿಗೆ ತಾಯಿಯಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ನಟಿ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಅವರು ಇತ್ತೀಚೆಗೆ ಕೆಲವು ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ.

ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಇತ್ತೀಚೆಗೆ ಹಚ್ಚ ಹಸಿರಾದ ಗಾರ್ಡನ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಕಾಲಿವುಡ್ ನ ಈ ಮುದ್ದಾದ ಜೋಡಿ ನಗು ನಗುತ್ತಾ ಕೈ ಕೈ ಹಿಡಿದು ಸುತ್ತಾಡಿದ್ದು ಅವರ ಫೋಟೋಗಳು ಫ್ಯಾನ್ಸ್ ಗೆ ಇಷ್ಟವಾಗಿದೆ.
ನಟಿಯ ಮಕ್ಕಳಿಬ್ಬರೂ ಕೂಡಾ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಮಕ್ಕಳಿಬ್ಬರ ಕೈ ಹಿಡಿದುಕೊಂಡು ನಟಿ ಹೆಜ್ಜೆ ಹಾಕುತ್ತಿರುವ ಫೋಟೋವನ್ನು ಹಿಂಭಾಗದಿಂದ ಸೆರೆ ಹಿಡಿಯಲಾಗಿದೆ. ಫೋಟೋದೊಂದಿಗೆ ನಟಿ ಮೈನ್ ಎಂದು ಬರೆದು ರೆಡ್ ಹಾರ್ಟ್ ಎಮೋಜಿಯನ್ನು ಕೂಡಾ ಹಾಕಿದ್ದಾರೆ.
ನಯನತಾರಾ ಜೀವನದಲ್ಲಿ ತಮ್ಮ ವೃತ್ತಿ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಟಿಯಾಗಿದ್ದಾರೆ. ಶಿಸ್ತಿನ ನಯನತಾರಾ ಅವರಿಗೆ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದು ಕೂಡ ಇದೆ. ನಯನತಾರಾ ಸಾಮಾನ್ಯ ನಟಿಯಿಂದ ದಕ್ಷಿಣ ಭಾರತದ ಸೂಪರ್ ಹೀರೋಯಿನ್ ಆಗಿ ಬಹುಬೇಗ ಬೆಳೆದ್ರು. ನೋಡುಗರಿಗೆ ಇದೊಂದು ದಿಢೀರ್ ಸಾಧನೆಯಂತೆ ಕಂಡರೂ ಜೀವನದಲ್ಲಿ ಆ ಮಟ್ಟಕ್ಕೆ ಬರಲು ನಟಿ ಶ್ರಮಿಸಿದ್ದಾರೆ.