newsics.com
ನಟಿ ಸಮಂತಾ ರುಥ್ ಪ್ರಭು ಅವರು ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಮಂತಾ ಗ್ಲಾಮರಸ್ ಆಗಿ ಮಿಂಚುತ್ತಿದ್ದರು. ಸದಾ ನಗುತ್ತಿದ್ದರು. ಆದರೆ, ಈಗ ಸಮಂತಾ ಬದಲಾಗಿದ್ದಾರೆ. ಸಮಂತಾ ಅವರ ಮುಖದಲ್ಲಿ ಮೊದಲಿದ್ದ ಚಾರ್ಮ್ ಈಗ ಇಲ್ಲ. ಅಷ್ಟೇ ಅಲ್ಲ ಅವರು ಮತ್ತಷ್ಟು ತೆಳ್ಳಗೆ ಆಗಿದ್ದಾರೆ. ಇದು ಫ್ಯಾನ್ಸ್ ಆತಂಕಕ್ಕೆ ಕಾರಣ ಆಗಿದೆ. ‘ದಯವಿಟ್ಟು ಏನಾದರೂ ತಿನ್ನಿ’ ಎಂದು ಅನೇಕರು ಕೋರಿಕೊಂಡಿದ್ದಾರೆ. ಸಮಂತಾ ಅವರು ಯಾವುದನ್ನೋ ಮನಸ್ಸಿಗೆ ಅತಿಯಾಗಿ ಹಚ್ಚಿಕೊಂಡು, ಕೊರಗಿದಂತಿದೆ ಎಂದು ಕೂಡ ಫ್ಯಾನ್ಸ್ ಊಹಿಸಿದ್ದಾರೆ.

ಸಮಂತಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿದ್ದೆ ಇಲ್ಲದೆ ಮುಖವೆಲ್ಲ ಸೊರಗಿದಂತೆ ಕಾಣಿಸಿದೆ. ಅವರ ಮಾಜಿ ಪತಿ ನಾಗ ಚೈತನ್ಯ ಅವರು ನಟಿ ಶೋಭಿತಾ ದುಲಿಪಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಸಮಂತಾಗೆ ದುಃಖ ತರಿಸಿತೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಸಮಂತಾ ಸಾಕಷ್ಟು ಬದಲಾಗಿದ್ದಾರೆ. ಮೊದಲಿಗಿಂತ ತೆಳ್ಳಗೆ ಆಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರಿಗೆ ಸಮಂತಾ ಅವರ ಗುರುತೇ ಸಿಗದಂತೆ ಆಗಿದೆ.