newsics.com
ಹಿಂದೂ ಯುವತಿಯನ್ನ ಪುಸಲಾಯಿಸಿ ನಿರ್ಜನ ಸ್ಥಳಕ್ಕೆ ಕರೆಸಿಕೊಂಡು ಅನ್ಯಕೋಮಿನ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.
ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವತಿ ಹೇಳಿಕೆ ಆದರಿಸಿ ಓರ್ವನನ್ನು ಬಂಧಿಸಲಾಗಿದೆ. ಇನ್ನು ಬಂಧಿತ ಆರೋಪಿ ಅಲ್ತಾಫ್ ಸಂತ್ರಸ್ತ ಯುವತಿಯನ್ನ ಇನ್ಸಟಾಗ್ರಾಮ್‌ನಲ್ಲಿ ಪರಿಚಯಸಿಕೊಂಡಿದ್ದ. ಪರಿಚಯ ಸಲುಗೆ ಬೆಳೆದು ಭೇಟಿ ಮಾಡುವಂತೆ ಯುವತಿಗೆ ಪುಸಲಾಯಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದ, ಬಳಿಕ ತನ್ನ ಇಬ್ಬರು ಸ್ನೇಹಿತರ ನೆರವಿನಿಂದ ಬಿಯರ್ ಬಾಟಲಿ ಕೂಡ ತರಿಸಿಕೊಂಡು ಅದರಲ್ಲಿ ಯುವತಿಗೆ ಗೊತ್ತಾಗದಹಾಗೆ ಮಾದಕ ವಸ್ತು ಪದಾರ್ಥ ಬೆರೆಸಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗುತ್ತದೆ.
ಇನ್ನು ಸ್ನೇಹಿತರು ಸೇರಿ ಮೂವರು ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ಪೋಷಕರು ಹೇಳಿಕೆಯಂತೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.