Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Firecracker Factory Blast ಅಕ್ರಮ ಪಟಾಕಿ ಫ್ಯಾಕ್ಟರಿ ಸ್ಫೋಟ; 8 ಜನ ಬಲಿ, ಹಲವರಿಗೆ ಗಂಭೀರ ಗಾಯ – ವಿಡಿಯೋ ನೋಡಿ
ಪ್ರಮುಖCrimeದೇಶ

Firecracker Factory Blast ಅಕ್ರಮ ಪಟಾಕಿ ಫ್ಯಾಕ್ಟರಿ ಸ್ಫೋಟ; 8 ಜನ ಬಲಿ, ಹಲವರಿಗೆ ಗಂಭೀರ ಗಾಯ – ವಿಡಿಯೋ ನೋಡಿ

Share
1 Min Read
SHARE

newsics.com | ನ್ಯೂಸಿಕ್ಸ್

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ವಸ್ತ್ರಲ್ ವಲಯದಲ್ಲಿ ಇಂದು ಮಧ್ಯಾಹ್ನ ದುರಂತವೊಂದು ಸಂಭವಿಸಿದೆ. ಇಲ್ಲಿನ ಮೆಹಮೂದ್‌ಪುರ ರಸ್ತೆಯಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಉಂಟಾಗಿದ್ದು, ಎಂಟು ಮಂದಿ ಕಾರ್ಮಿಕರು ಜೀವಂತವಾಗಿ ಸುಟ್ಟು ಬೂದಿಯಾಗಿದ್ದಾರೆ. ಸ್ಫೋಟದ ರಭಸಕ್ಕೆ ಫ್ಯಾಕ್ಟರಿ ತುಂಬಾ ಬೆಂಕಿಯ ಜ್ವಾಲೆ ಆವರಿಸಿಕೊಂಡಿದ್ದರಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದುರಂತ ನಡೆದ ಜಾಗದ ಸನಿಹದಲ್ಲೇ ಕ್ಷಿಪ್ರ ಕಾರ್ಯ ಪಡೆಯ (RAF) ಮಿಲಿಟರಿ ಕ್ಯಾಂಪ್ ಇದ್ದಿದ್ದರಿಂದ ದೊಡ್ಡ ಮಟ್ಟದ ಸಾವು-ನೋವು ಸದ್ಯಕ್ಕೆ ತಪ್ಪಿದೆ. ಅಪಾಯದಲ್ಲಿದ್ದ ಹಲವು ಗಾಯಾಳುಗಳನ್ನು ಜೀವದ ಹಂಗು ತೊರೆದು ಹೊರತಂದು ಆಸ್ಪತ್ರೆಗೆ ಸೇರಿಸಿದ್ದಾರೆ. ತದನಂತರ ಬಂದ ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿವೆ. ನಗರದ ಮೇಯರ್ ಹಿತೇಶ್ ಬರೋಟ್ ಅವರ ಸಮ್ಮುಖದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಮಾಲೀಕನ ಬೇಜವಾಬ್ದಾರಿತನಕ್ಕೆ ಎಂಟು ಜೀವಗಳು ಬಲಿ

ಜಂಟಿ ಪೊಲೀಸ್ ಕಮಿಷನರ್ ಜೈಪಾಲ್ ಸಿಂಗ್ ರಾಥೋಡ್ ನೀಡಿರುವ ಮಾಹಿತಿ ಪ್ರಕಾರ, ಈ ಘಟಕವನ್ನು ಮೆಹುಲ್ ದೋಡಿಯಾ ಎಂಬಾತ ಮುನ್ನಡೆಸುತ್ತಿದ್ದು, ನಿಯಮಾವಳಿಗಳನ್ನು ಗಾಳಿಗೆ ತೂರಿದ್ದರಿಂದ ಸರ್ಕಾರ ಈ ಹಿಂದೆನೇ ಈತನ ಕಾರ್ಖಾನೆಯ ಪರವಾನಗಿಯನ್ನು ಸೀಜ್ ಮಾಡಿತ್ತು. ಆದರೂ ಈತ ಕದ್ದುಮುಚ್ಚಿ ಕಾರ್ಮಿಕರ ಜೀವದ ಜೊತೆ ಆಟವಾಡುತ್ತಿದ್ದ. ಸ್ಥಳದಿಂದ ಸದ್ಯಕ್ಕೆ ಎಂಟು ಸುಟ್ಟ ದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಅಪಘಾತಕ್ಕೆ ನಿಖರ ಕಾರಣವೇನು ಎಂಬ ತಾಂತ್ರಿಕ ತನಿಖೆ ಪ್ರಗತಿಯಲ್ಲಿದೆ. ರಾಮೋಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ನಡೆಸಿದ ಮಾಲೀಕ ಮೆಹುಲ್ ದೋಡಿಯಾ ವಿರುದ್ಧ ‘ಸ್ಫೋಟಕ ಕಾಯ್ದೆ’ಯಡಿ ಜಾಮೀನು ರಹಿತ ಪ್ರಕರಣ ಹೂಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

 

#Gujarat #Ahmedabad

અમદાવાદના રામોલ ગત્રાડ રોડ પર ફટાકડા ફેક્ટરી મા આગ

8 લોકોના મોત 10 થી વધુ ઘાયલ pic.twitter.com/Fi1ti4gouq

— Hiren (@hdraval93) July 18, 2026

EPFO Interest Amount ಪಿಎಫ್ ಗ್ರಾಹಕರಿಗೆ ಭರ್ಜರಿ ಗಿಫ್ಟ್; ಅಕೌಂಟ್‌ಗೆ ಜಮೆಯಾಯ್ತು ಶೇ. 8.25 ಬಡ್ಡಿ ಹಣ; ಹೀಗೆ ಚೆಕ್ ಮಾಡಿ

TAGGED:#Gujrat #Cracker Factory #Explosion #news #newsics
Share This Article
Facebook Twitter Copy Link Print
Previous Article Chennamma is no more ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ
Next Article Health Tips ತೂಕ ಇಳಿಕೆಗೆ ರನ್ನಿಂಗ್ ಬೆಸ್ಟಾ? ಸೈಕ್ಲಿಂಗ್ ಬೆಸ್ಟಾ? ತಜ್ಞರು ಹೇಳುವುದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Popular Posts

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read

Benefits of Burning Natural Fragrant Ingredients at Home ಸುಗಂಧ ಬೀರುವ ಈ ವಸ್ತುಗಳನ್ನ ಸುಟ್ಟರೆ ಏನಾಗುತ್ತೆ? ತಿಳಿಯಿರಿ ಇದರ ಪ್ರಯೋಜನಗಳು

1 Min Read

Viparita Karani Yoga Pose ವಿಪರೀತ ಕರಣಿ ಆಸನದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ! ಆರೋಗ್ಯಕ್ಕೆ ಅದ್ಭುತ ಯೋಗಾಸನ

2 Min Read

Best Healthy Rotis  ಆರೋಗ್ಯಕ್ಕೆ ಬೆಸ್ಟ್ ಈ ರೊಟ್ಟಿಗಳು

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ದೇಶಪ್ರಮುಖ

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read
ಪ್ರಮುಖCrimeದೇಶ

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?