Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಯುಕೆ ಪ್ರಧಾನಿ ಕೀರ್ ಶೀಘ್ರ ರಾಜೀನಾಮೆ ನೀಡಲಿದ್ದಾರೆ: ಭವಿಷ್ಯ ನುಡಿದ ಟ್ರಂಪ್
ವಿದೇಶಪ್ರಮುಖ

ಯುಕೆ ಪ್ರಧಾನಿ ಕೀರ್ ಶೀಘ್ರ ರಾಜೀನಾಮೆ ನೀಡಲಿದ್ದಾರೆ: ಭವಿಷ್ಯ ನುಡಿದ ಟ್ರಂಪ್

Share
1 Min Read
SHARE

ವಲಸೆ ನೀತಿಯಲ್ಲಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್(Keir Starmer) ಸೋತಿದ್ದಾರೆ, ಅವರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ವಲಸೆ ಮತ್ತು ಇಂಧನ ನೀತಿಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ಅವರು ಶೀಘ್ರದಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಟ್ರಂಪ್ ಭವಿಷ್ಯ ನುಡಿಯುವ ಮೂಲಕ ಜಾಗತಿಕ ರಾಜಕೀಯದಲ್ಲಿ ಆಘಾತ ಮೂಡಿಸಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಶಿಯಲ್’ನಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ಬ್ರಿಟಿಷ್ ಪತ್ರಿಕೆ ‘ಅಬ್ಸರ್ವರ್’ ವರದಿಯನ್ನು ಉಲ್ಲೇಖಿಸಿರುವ ರಾಯಿಟರ್ಸ್ ಸಂಸ್ಥೆಯು, ಪ್ರಧಾನಿ ಸ್ಟಾರ್ಮರ್ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ನಾಯಕತ್ವಕ್ಕೆ ಅವರದೇ ಪಕ್ಷದ ಪ್ರತಿಸ್ಪರ್ಧಿ ಆಂಡಿ ಬರ್ನ್‌ಹ್ಯಾಮ್ ಅವರಿಂದ ನೇರ ಸವಾಲು ಎದುರಾಗಿದೆ. ಆಂಡಿ ಬರ್ನ್‌ಹ್ಯಾಮ್ ಇತ್ತೀಚೆಗೆ ಸಂಸತ್ತಿನಲ್ಲಿ ಸ್ಥಾನ ಗೆದ್ದಿರುವುದು ಪ್ರಧಾನಿ ಸ್ಟಾರ್ಮರ್ ಅವರ ಕುರ್ಚಿಗೆ ಕಂಟಕ ತಂದಿಟ್ಟಿದೆ.

ದೇಶದ ಪ್ರಮುಖ ಸಮಸ್ಯೆಗಳಾದ ಅಕ್ರಮ ವಲಸೆ ತಡೆ ಹಾಗೂ ಇಂಧನ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಪ್ರಸ್ತುತ ಬ್ರಿಟನ್ ಸರ್ಕಾರ ಸಂಪೂರ್ಣ ಸೋತಿದೆ ಎಂದು ಟ್ರಂಪ್ ಸೇರಿದಂತೆ ಹಲವರು ಟೀಕಿಸಿದ್ದಾರೆ.

ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಅಮೆರಿಕದ ಪಡೆಗಳು ಬ್ರಿಟನ್‌ನ ಮಿಲಿಟರಿ ನೆಲೆಯನ್ನು ಬಳಸಿಕೊಳ್ಳಲು ಪ್ರಧಾನಿ ಕೀರ್ ಸ್ಟಾರ್ಮರ್ ಅವಕಾಶ ನೀಡಲಿಲ್ಲ. ಇದು ಡೊನಾಲ್ಡ್ ಟ್ರಂಪ್ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅಮೆರಿಕ ಪಡೆಗಳಿಗೆ ಸಹಕರಿಸದ ಬ್ರಿಟನ್, ಉಭಯ ದೇಶಗಳ ನಡುವಿನ ಐತಿಹಾಸಿಕ ನಿಕಟ ಸಂಬಂಧವನ್ನು ಹಾಳುಮಾಡಿದೆ. ನಾವು ಯುದ್ಧದಲ್ಲಿ ಗೆದ್ದ ನಂತರ ಬಂದು ನಮ್ಮ ಜೊತೆ ಕೈಜೋಡಿಸುವ ಅಂತಹ ನಾಯಕರು ನಮಗೆ ಬೇಡ ಎಂದು ಟ್ರಂಪ್ ಬ್ರಿಟನ್ ಪ್ರಧಾನಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಆದರೆ ಬ್ರಿಟನ್‌ನ ಸರ್ಕಾರಿ ಮೂಲಗಳ ಪ್ರಕಾರ, ಪ್ರಧಾನಿ ಸ್ಟಾರ್ಮರ್ ಪ್ರಸ್ತುತ ರಾಜೀನಾಮೆ ವದಂತಿಗಳನ್ನು ತಳ್ಳಿಹಾಕಿದ್ದು, ಸರ್ಕಾರವನ್ನು ನಡೆಸುವತ್ತ ಗಮನ ಹರಿಸಿದ್ದಾರೆ ಎಂದು ತಿಳಿದುಬಂದಿದೆ.

ಭಾರತಕ್ಕೊಂದು, ವಿದೇಶಕ್ಕೊಂದು; ಎರಡು ಬೇರೆ ಬೇರೆ ಪ್ರಿಂಟ್​​ಗಳಲ್ಲಿ ‘ಟಾಕ್ಸಿಕ್’ ತೆರೆಗೆ?

TAGGED:UK Prime Minister Keir will resign soon: Trump predicts
Share This Article
Facebook Twitter Copy Link Print
Previous Article ಭಾರತಕ್ಕೊಂದು, ವಿದೇಶಕ್ಕೊಂದು; ಎರಡು ಬೇರೆ ಬೇರೆ ಪ್ರಿಂಟ್​​ಗಳಲ್ಲಿ ‘ಟಾಕ್ಸಿಕ್’ ತೆರೆಗೆ?
Next Article ಕತಾರ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ : 54 ಜನರಿಗೆ ಗಾಯ, 18 ಮಂದಿ ನಾಪತ್ತೆ

Popular Posts

HEALTH ಇಮ್ಯುನಿಟಿ ಹೆಚ್ಚಿಸಿಕೊಳ್ಳೋದು ಹೇಗೆ? ಹೀಗೆ ಮಾಡಿ ನೋಡಿ

2 Min Read

ಕತಾರ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ : 54 ಜನರಿಗೆ ಗಾಯ, 18 ಮಂದಿ ನಾಪತ್ತೆ

1 Min Read

ಯುಕೆ ಪ್ರಧಾನಿ ಕೀರ್ ಶೀಘ್ರ ರಾಜೀನಾಮೆ ನೀಡಲಿದ್ದಾರೆ: ಭವಿಷ್ಯ ನುಡಿದ ಟ್ರಂಪ್

1 Min Read

ಭಾರತಕ್ಕೊಂದು, ವಿದೇಶಕ್ಕೊಂದು; ಎರಡು ಬೇರೆ ಬೇರೆ ಪ್ರಿಂಟ್​​ಗಳಲ್ಲಿ ‘ಟಾಕ್ಸಿಕ್’ ತೆರೆಗೆ?

2 Min Read

You Might Also Like

ಪ್ರಮುಖ

ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

2 Min Read
ಕರ್ನಾಟಕಪ್ರಮುಖ

ರಾಜ್ಯದಲ್ಲಿ‌ ಮತ್ತೆ ಬಸ್ ಪ್ರಯಾಣದರ ಹೆಚ್ಚಳ: ಸಿಎಂ ಹೇಳಿದ್ದೇನು?

1 Min Read
ಪ್ರಮುಖUncategorized

ಭಯ ಹುಟ್ಟಿಸುವ 5 ಪ್ರಾಣಿಗಳು: ಶಿವನೊಂದಿಗೆ ಅವುಗಳ ನಂಟೇನು?

1 Min Read
ಪ್ರಮುಖವಿದೇಶ

ಫೋಟೋ ವಿವಾದದಿಂದ ಭುಗಿಲೆದ್ದ ಟ್ರಂಪ್–ಮೆಲೋನಿ ಸಂಘರ್ಷ! ಇಟಲಿ–ಅಮೆರಿಕ ಸಂಬಂಧಗಳಿಗೆ ಬಿರುಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?