Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬೆಂಗಳೂರಿನ ವಿದ್ಯಾರ್ಥಿನಿಗೆ ಫೋರ್ಬ್ಸ್ 30ರ ಪಟ್ಟಿಯಲ್ಲಿ ಸ್ಥಾನ
ಪ್ರಮುಖ

ಬೆಂಗಳೂರಿನ ವಿದ್ಯಾರ್ಥಿನಿಗೆ ಫೋರ್ಬ್ಸ್ 30ರ ಪಟ್ಟಿಯಲ್ಲಿ ಸ್ಥಾನ

Share
3 Min Read
SHARE

newsics.com/ನ್ಯೂಸಿಕ್ಸ್

ಫೋರ್ಬ್ಸ್ 30ರ ಪಟ್ಟಿಯಲ್ಲಿ ಬೆಂಗಳೂರಿನ  17 ವರ್ಷದ ವಿದ್ಯಾರ್ಥಿನಿ ಸ್ಥಾನ ಪಡೆದಿದ್ದಾಳೆ. ಟೈಪ್ 1 ಮಧುಮೇಹದಿಂದ  ಬಳಲುತ್ತಿರುವ 3,190 ಮಕ್ಕಳನ್ನು ನೇರವಾಗಿ 20 ಲಕ್ಷ ರೂ. ಗಿಂತಲೂ ಹೆಚ್ಚು ಹಣ ಸಂಗ್ರಹ ಮಾಡುವಂತೆ ಬೆಂಬಲಿಸುವ ಮೂಲಕ ವಿದ್ಯಾರ್ಥಿನಿ ದಿವಾ ಉತ್ಕರ್ಷ 30 ವರ್ಷದೊಳಗಿನ ಏಷ್ಯಾ ಫೋರ್ಬ್ಸ್ 30ರ 2025 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೈಪ್ 1 ಮಧುಮೇಹದಿಂದ ಬಳಲುತ್ತಿರವವರ ಸಹಾಯಕ್ಕಾಗಿ ಇವರು ಮಾಡಿರುವ ಪ್ರಾಜೆಕ್ಟ್ ಸೂರ್ಯ 4 ಲಕ್ಷಕ್ಕೂ ಹೆಚ್ಚು ಮಂದಿಯನ್ನು ತಲುಪಿದೆ.

ಬಸವೇಶ್ವರ ನಗರದ ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್‌ನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಅಮೆರಿಕದಲ್ಲಿ ಕೈಗಾರಿಕಾ ಎಂಜಿನಿಯರಿಂಗ್ ಅಧ್ಯಯನ ಮಾಡಲು ಯೋಜನೆ ಮಾಡಿಕೊಂಡಿರುವ ದಿವಾ ಅವರು ಫೋರ್ಬ್ಸ್ 30ರ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಕಾರಣ ಲಾಭರಹಿತ ಸಂಸ್ಥೆಯಾದ ಪ್ರಾಜೆಕ್ಟ್ ಸೂರ್ಯ.ದಿವಾ ಅವರ ಕಿರಿಯ ಸಹೋದರನಿಗೆ ಟೈಪ್ 1 ಮಧುಮೇಹ ಪತ್ತೆಯಾದಾಗ ಸೂರ್ಯ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸಹೋದರನ ಕಾಯಿಲೆ ಕುಟುಂಬದ ಮೇಲೆ ಆರ್ಥಿಕ ಮತ್ತು ಭಾವನಾತ್ಮಕ ಹೊರೆಯಾಗಿದ್ದನ್ನು ಅರಿತ ಅವರು ಇದನ್ನು ನಿಭಾಯಿಸಲು ಸಾಧ್ಯವಿಲ್ಲದ ಭಾರತದ ಲಕ್ಷಾಂತರ ಕುಟುಂಬಗಳ ಬಗ್ಗೆ ಯೋಚಿಸುವಂತೆ ಮಾಡಿತು. ಈ ಕಾರಣದಿಂದಲೇ ಅವರು ಪೋಷಕರಾದ ಉತ್ಕರ್ಷ ಲೋಕೇಶ್ ಮತ್ತು ಪಲ್ಲವಿ ಉತ್ಕರ್ಷ ಜೊತೆ ಸೇರಿ ಪ್ರಾಜೆಕ್ಟ್ ಸೂರ್ಯವನ್ನು ಪ್ರಾರಂಭಿಸಿದರು.

ಇದಕ್ಕಾಗಿ ಮೊದಲು ಟೈಪ್ 1 ಮಧುಮೇಹದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದರು. ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರು ದಿನನಿತ್ಯ ಇನ್ಸುಲಿನ್ ಚುಚ್ಚುಮದ್ದು ಪಡೆಯಬೇಕು, ಮಧ್ಯಮ ವರ್ಗದ ಕುಟುಂಬಕ್ಕೆ ಇದು ಹೊರೆಯಾಗಿದೆ. ಯಾವುದೇ ಸರ್ಕಾರಿ ಸಬ್ಸಿಡಿ, ಆರೋಗ್ಯ ವಿಮೆ ಇಲ್ಲದೇ ಇದನ್ನು ಭರಿಸುವುದು ತೀವ್ರ ಕಷ್ಟ. 2022ರಲ್ಲಿ 35,860ಕ್ಕೂ ಹೆಚ್ಚು ಮಂದಿ ಸರಿಯಾದ ಚಿಕಿತ್ಸೆ ಇಲ್ಲದೆ ಟೈಪ್ 1 ಮಧುಮೇಹದಿಂದ ಸಾವನ್ನಪ್ಪಿರುವುದನ್ನು ತಿಳಿದ ದಿವಾ ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

ಲಾಭರಹಿತ ಸಂಸ್ಥೆಯಾದ ಪ್ರಾಜೆಕ್ಟ್ ಸೂರ್ಯ 4,02,000 ಕ್ಕೂ ಹೆಚ್ಚು ಮಂದಿಯನ್ನು ತಲುಪಿದ್ದು, ಟೈಪ್ 1 ಮಧುಮೇಹದಿಂದ ಬಳಲುತ್ತಿರುವ 3,190 ಮಕ್ಕಳಿಗೆ ನೇರವಾಗಿ ಬೆಂಬಲ ನೀಡುತ್ತಿದೆ. ಅನುದಾನ, ಸಂಸ್ಥೆಗಳ ಪಾಲುದಾರಿಕೆ, ನಿಧಿಸಂಗ್ರಹದ ಮೂಲಕ 20 ಲಕ್ಷಕ್ಕೂ ಹೆಚ್ಚು ಗಳಿಕೆಯನ್ನು ಮಾಡಿದೆ. ಇದರಿಂದ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕುಟುಂಬಗಳಿಗೆ 4,500 ಇನ್ಸುಲಿನ್ ವೈಲ್‌ಗಳು, 2,500 ಗ್ಲೂಕೋಸ್ ಮಾನಿಟರಿಂಗ್ ಸ್ಟ್ರಿಪ್‌ಗಳು ಮತ್ತು 1,000 ಇನ್ಸುಲಿನ್ ಸಿರಿಂಜ್‌ಗಳನ್ನು ದಾನ ಮಾಡಲಾಗಿದೆ. ಹಲವಾರು ಹಳ್ಳಿಗಳಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು 200ಕ್ಕೂ ಹೆಚ್ಚು ಆಶಾ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಉಚಿತ ಆರೋಗ್ಯ ಶಿಬಿರಗಳ ಮೂಲಕ 1,020 ಕ್ಕೂ ಹೆಚ್ಚು ಗ್ಲೂಕೋಸ್ ಸ್ಕ್ರೀನಿಂಗ್‌ಗಳನ್ನು ನಡೆಸಲಾಗಿದೆ.

ದಿವಾ ಅವರು ಬ್ರಿಟನ್ ನಿಂದ 2023ರ ಡಯಾನಾ ಪ್ರಶಸ್ತಿ, 2024ರಲ್ಲಿ ಆಮ್ಸ್ಟರ್‌ಡ್ಯಾಮ್‌ನಲ್ಲಿ ವಿಶ್ವ ಸುಸ್ಥಿರತೆ ಪ್ರಶಸ್ತಿ ಪಡೆದಿದ್ದಾರೆ. Chegg.org ಜಾಗತಿಕ ವಿದ್ಯಾರ್ಥಿ ಪ್ರಶಸ್ತಿಗೆ ಆಯ್ಕೆಯಾದ 10 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಈ ಪ್ರಶಸ್ತಿಗೆ 140 ದೇಶಗಳ 11,000 ಮಂದಿ ಅರ್ಜಿ ಸಲ್ಲಿಸಿದ್ದರು.

ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ, ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಲ್ಪಟ್ಟಿರುವ ದಿವಾ ಮತ್ತು ಅವರ ತಂಡದ ಪ್ರಾಜೆಕ್ಟ್ ಸೂರ್ಯ ಬೆಂಗಳೂರು, ನವದೆಹಲಿ, ವಾರಣಾಸಿ, ಮುಂಬೈ, ಗಾಜಿಯಾಬಾದ್, ಯು.ಎಸ್., ಕೆನಡಾ, ಮೊರಾಕೊ, ಯುಎಇ ಮತ್ತು ನೈಜೀರಿಯಾದಲ್ಲೂ ಕೂಡ ಘಟಕಗಳನ್ನು ಹೊಂದಿದೆ. ಒಟ್ಟು 120 ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು 35 ಪ್ರೌಢಶಾಲಾ ಸ್ವಯಂಸೇವಕರನ್ನು ಒಳಗೊಂಡಿದೆ.

ಸಾಮಾಜಿಕ ಪರಿಣಾಮ ವಿಭಾಗದಲ್ಲಿ ಏಷ್ಯಾ 2025ರ ವರ್ಷದೊಳಗಿನ ಫೋರ್ಬ್ಸ್ 30 ಪಟ್ಟಿಯಲ್ಲಿ ಸ್ಥಾನ ಪಡೆದ ದಿವಾ ಈ ವರ್ಷ ಈ ವಿಭಾಗದಲ್ಲಿ ಗೌರವ ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ದಿಢೀರ್ ರದ್ದು!

TAGGED:Bengaluru student makes it to Forbes 30 list
Share This Article
Facebook Twitter Copy Link Print
Previous Article ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ದಿಢೀರ್ ರದ್ದು!
Next Article ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣವಚನ: ಹೇಗಿರಲಿದೆ ಕಾರ್ಯಕ್ರಮದ ಭದ್ರತೆ?

Popular Posts

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕಪ್ರಮುಖ

ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?