newsics.com/ನ್ಯೂಸಿಕ್ಸ್
ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಫೈನಲ್ ಪ್ರವೇಶ ಮಾಡಿದೆ. ಗುಜರಾತ್ ಟೈಟನ್ಸ್ ರಾಯಲ್ ಬೆಂಗಳೂರು ತಂಡಕ್ಕೆ ಎದುರಾಳಿಯಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ, ಡೊನೊವೆನ್ ಫೆರೇರಾ ಅಬ್ಬರದ ಬ್ಯಾಟಿಂಗ್ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು, ಗುಜರಾತ್ ಟೈಟನ್ಸ್‌ಗೆ 215 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಆರಂಭಿಕರಾದ ಶುಬ್‌ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಉತ್ತಮ ಆಟದ ನೆರವಿನಿಂದ 18.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿದೆ.
ಬೌಲಿಂಗ್ ವಿಭಾಗದಲ್ಲಿ ಗುಜರಾತ್, ಕಗಿಸೋ ರಬಾಡ ಹಾಗೂ ಮೊಹಮದ್ ಸಿರಾಜ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ರಬಾಡ ಪವರ್-ಪ್ಲೇನಲ್ಲೇ 3 ಓವರ್ ಹಾಕುತ್ತಿದ್ದಾರೆ. ರಶೀದ್ ಖಾನ್ ನಿರೀಕ್ಷಿತ ಪ್ರದರ್ಶನ ತೋರದೆ ಇರುವುದು, ತಂಡಕ್ಕೆ ದೊಡ್ಡ ಹಿನ್ನಡೆ ಆಗಿ ಪರಿಣಮಿಸಿದೆ. ಕುಲ್ವಂತ್‌ರನ್ನು ಹೊರಗಿಟ್ಟು, ಸ್ಪಿನ್ನರ್ ಮಾನವ್ ಸುಥಾರ್ ಅಥವಾ ಸಾಯಿ ಕಿಶೋರ್‌ರನ್ನು ಆಡಿಸಬಹುದು
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್ ಹಾಗೂ ಬ್ರಿಜೇಶ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
Water supply ನೀರು ಪೂರೈಕೆಯಲ್ಲಿ ಇಂದು ವ್ಯತ್ಯಯ: ಬೆಂಗಳೂರಿಗರಿಗೆ ಜಲಮಂಡಳಿ ಮುನ್ಸೂಚನೆ