newsics.com/ನ್ಯೂಸಿಕ್ಸ್
ಐದು ದೇಶಗಳ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಟಲಿಯ ರಾಜಧಾನಿ ರೋಮ್‌ಗೆ ತಲುಪಿದ್ದಾರೆ. ಈ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಮೋದಿ ಅವರನ್ನು ರೋಮ್‌ಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಇದಕ್ಕೂ ಮುನ್ನ ರೋಮ್ ತಲುಪಿದ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಿದರು. ತಾವು ತಂಗಿದ್ದ ಹೋಟೆಲ್‌ನಲ್ಲಿ ಭಾರತೀಯ ಸಮುದಾಯದವರೊಂದಿಗೆ ಪ್ರಧಾನಿ ಸಂವಾದ ನಡೆಸಿದರು.
ಇನ್ನು ಈ ಭೇಟಿಯ ಹೈಲೈಟ್ ಅಂದ್ರೆ ಪ್ರಧಾನಿ ಮೋದಿ ಅವರು ಪಿಎಂ ಮೆಲೋನಿ ಅವರಿಗೆ ನೀಡಿದ ಆ ಒಂದು ಅತ್ಯಂತ ವಿಶೇಷ ಮತ್ತು ವಿಭಿನ್ನವಾದ ಗಿಫ್ಟ್. ಮೋದಿ ಅವರು ಇಟಲಿ ಪ್ರಧಾನಿಗೆ ಭಾರತದ ಪ್ರಸಿದ್ಧ ಬ್ರ್ಯಾಂಡ್ ಆದ ಮೆಲೋಡಿ ಕಂಪನಿಯ ಚಾಕೋಲೇಟ್ ಟಾಫಿಗಳ ದೊಡ್ಡ ಪ್ಯಾಕೆಟ್ ಅನ್ನು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ್ದಾರೆ. ಮೆಲೋಡಿ ಇತ್ನಿ ಚಾಕೊಲೇಟಿ ಕ್ಯೂ ಹೋತಿ ಹೈ ಅನ್ನೋ ಡೈಲಾಗ್ ತರಹ, ಜಾಗತಿಕವಾಗಿ ಫೇಮಸ್ ಆಗಿರೋ ಇವರಿಬ್ಬರ ‘ಮೆಲೋಡಿ’ ಹೆಸರಿಗೇ ಮ್ಯಾಚ್ ಆಗೋ ತರಹ ಮೋದಿ ಈ ಚಾಕೋಲೇಟ್ ಪ್ಯಾಕೆಟ್ ಕೊಟ್ಟಿದ್ದು ನಿಜಕ್ಕೂ ಸಖತ್ ಚಾಣಾಕ್ಷ ಮತ್ತು ಕ್ಯೂಟ್ ಐಡಿಯಾ ಆಗಿತ್ತು.
ಭಾರತದ ಈ ಸಿಹಿ ಚಾಕೋಲೇಟ್ ಗಿಫ್ಟ್ ಅನ್ನು ಪ್ರೀತಿಯಿಂದ ಕೈಗೆ ಸ್ವೀಕರಿಸಿದ ಜಾರ್ಜಿಯಾ ಮೆಲೋನಿ ಅವರು ನಗುತ್ತಲೇ ಪ್ರಧಾನಿ ಮೋದಿಯವರಿಗೆ ವಿನಮ್ರವಾಗಿ ಥ್ಯಾಂಕ್ ಯು ಎಂದು ಹೇಳಿದ್ದಾರೆ. ಇದರ ಒಂದು ಕ್ಯೂಟ್ ವಿಡಿಯೋವನ್ನು ಮೆಲೋನಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ಜಾಗತಿಕ ನಾಯಕರು ಒಬ್ಬರನ್ನೊಬ್ಬರು ನೋಡಿ ಮುಗ್ಧವಾಗಿ ನಗುತ್ತಿರುವ ದೃಶ್ಯವಿದ್ದು, ಇದನ್ನು ನೋಡಿ ಮೆಲೋನಿ ಮತ್ತು ಮೋದಿಯವರ ಫ್ಯಾನ್ಸ್ ತುಂಬ ಖುಷಿಪಟ್ಟಿದ್ದಾರೆ.