Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪತ್ನಿಯ ಗುಪ್ತಾಂಗಕ್ಕೆ ಆ್ಯಸಿಡ್ ಸುರಿದ ಪಾಪಿ ಪತಿ
ಪ್ರಮುಖ

ಪತ್ನಿಯ ಗುಪ್ತಾಂಗಕ್ಕೆ ಆ್ಯಸಿಡ್ ಸುರಿದ ಪಾಪಿ ಪತಿ

Share
2 Min Read
SHARE

newsics.com/ನ್ಯೂಸಿಕ್ಸ್

ಮದ್ಯದ ಅಮಲಿನಲ್ಲಿ ತನ್ನ ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿದ ಪತಿಯೊಬ್ಬ ಆಕೆಗೆ ಮನಬಂದಂತೆ ಥಳಿಸಿ ಗುಪ್ತಾಂಗದ ಮೇಲೆ ಆ್ಯಸಿಡ್ ಸುರಿದು, 15 ದಿನಗಳ ಕಾಲ ಮನೆಯಲ್ಲೇ ಕೂಡಿಹಾಕಿ ಅತ್ಯಂತ ಕ್ರೂರವಾಗಿ ಹಿಂಸಿಸಿರುವ ಅಮಾನುಷ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಆರೋಪಿ ಪತಿಯು ಅತಿಯಾಗಿ ಮದ್ಯ ಸೇವಿಸಿ ತಡರಾತ್ರಿ ಮನೆಗೆ ಬಂದಿದ್ದ. ಪತ್ನಿ ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂಬ ಕೋಪ ಮತ್ತು ಆಕೆಗೆ ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನಗತ್ಯ ಶಂಕೆ ಆತನ ತಲೆಯಲ್ಲಿತ್ತು. ಮನೆಗೆ ಬರುತ್ತಿದ್ದಂತೆ, “ನೀನು ಕೆಲಸಕ್ಕೆ ಹೋದಾಗ ಹೊರಗೆ ಯಾರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯಾ ಎಂದು ನನಗೆ ನಿಜ ಹೇಳು” ಎಂದು ಕೂಗಾಡುತ್ತಾ ಮಹಿಳೆಯ ಮೇಲೆ ರಾಕ್ಷಸನಂತೆ ಮುಗಿಬಿದ್ದು, ತೀವ್ರವಾಗಿ ಥಳಿಸಲು ಆರಂಭಿಸಿದ

ಆತನ ಕೋಪ ಅಷ್ಟಕ್ಕೇ ನಿಲ್ಲದೆ, ಮಹಿಳೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಆ್ಯಸಿಡ್ ಬಾಟಲಿಯನ್ನು ತೆಗೆದುಕೊಂಡು ಬಂದು, ಆಕೆಯ ಗುಪ್ತಾಂಗದ ಮೇಲೆ ಸುರಿದಿದ್ದಾನೆ. ಇದರಿಂದ ತೀವ್ರವಾದ ಉರಿ ಮತ್ತು ಅಸಹನೀಯ ನೋವಿನಿಂದ ಮಹಿಳೆ ಕಿರುಚಾಡುತ್ತಾ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಲು ಯತ್ನಿಸಿದ್ದಾಳೆ. ಆದರೆ ಕ್ರೂರ ಪತಿ ಮನೆಯ ಮುಖ್ಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿ, ಆಕೆಗೆ ಮತ್ತೆ ಕಾಲಿನಿಂದ ಒದ್ದು, ಕೈಯಿಂದ ತೀವ್ರವಾಗಿ ಗುದ್ದಿದ್ದಾನೆ.

ಮಹಿಳೆಯ ಆಕ್ರಂದನ ಕೇಳಿ ಓಡಿಬಂದ ಆಕೆಯ ನಾದಿನಿ, ತಕ್ಷಣವೇ ಪತಿಯ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ನಡುವೆ, ಈ ಘಟನೆಯ ಬಗ್ಗೆ ಯಾರಿಗಾದರೂ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಪತ್ನಿಗೆ ಹೆದರಿಸಿದ ಪತಿ ಅಲ್ಲಿಂದ ಹೊರಟುಹೋಗಿದ್ದಾನೆ. ಅಸಹನೀಯ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಕೊಡಿಸದೆ 15 ದಿನಗಳ ಕಾಲ ಮನೆಯಲ್ಲೇ ಕೂಡಿ ಹಾಕಲಾಗಿತ್ತು.

ಮೇ 9ರಂದು ಪತಿ ಕೆಲಸಕ್ಕೆ ಹೋದಾಗ, ಮಹಿಳೆ ಹೇಗೋ ತಪ್ಪಿಸಿಕೊಂಡು ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಮನೆಗೆ ತಲುಪಿದ್ದಾಳೆ. ಅಲ್ಲಿ ಪೋಷಕರ ಮುಂದೆ ತನಗಾದ ಘೋರ ಕಿರುಕುಳವನ್ನು ಬಿಚ್ಚಿಟ್ಟಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ಮೇ 15ರಂದು ದೂರು ದಾಖಲಾದ ನಂತರ ಆಕೆಯನ್ನು ಪುಣೆಯ ಸಸೂನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಉರುಳಿ ಕಾಂಚನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಚಿನ್ ವಾಂಗಡೆ ಪಾಪಿ ಪತಿಯ ವಿರುದ್ಧ ಕಠಿಣ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 

ಪ್ರೇಮಾನಂದ ಮಹಾರಾಜ್ ಆರೋಗ್ಯ ಸಮಸ್ಯೆ ಹಿನ್ನೆಲೆ ಸಾರ್ವಜನಿಕ ದರ್ಶನ ಸ್ಥಗಿತ

TAGGED:Sinful husband who poured acid on his wife's vagina
Share This Article
Facebook Twitter Copy Link Print
Previous Article ಪ್ರೇಮಾನಂದ ಮಹಾರಾಜ್ ಆರೋಗ್ಯ ಸಮಸ್ಯೆ ಹಿನ್ನೆಲೆ ಸಾರ್ವಜನಿಕ ದರ್ಶನ ಸ್ಥಗಿತ
Next Article ಪ್ರವಾಸಿಗರ ಸಫಾರಿ ಜೀಪ್ ಮೇಲೆ ಖಡ್ಗಮೃಗ ದಾಳಿ; ವೈರಲ್ ವಿಡಿಯೋ ನೋಡಿ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?