newsics.com/ನ್ಯೂಸಿಕ್ಸ್
ಕಳೆದ ಸುಮಾರು ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀರಾ ವಾಸುದೇವನ್ ಕೇವಲ ಮಲಯಾಳಂ ಮಾತ್ರವಲ್ಲ , ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲೂ ನಟಿಸುವ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ.
ಮೀರಾ ವಾಸುದೇವನ್ 2003 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ಗೋಲ್ಮಾಲ್ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಅದೇ ವರ್ಷ, ಸಮುತಿರಕಣಿ ನಿರ್ದೇಶಿಸಿದ ಮತ್ತು ವೆಂಕಟ್ ಪ್ರಭು ನಟಿಸಿದ ‘ಉನ್ನೈ ಸಾರಂಡೈಂದೇನ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಅವನು ನನಗೆ ತಮಿಳು ಹೇಳಿಕೊಡುತ್ತಿದ್ದ ಟ್ಯೂಷನ್ ಟೀಚರ್. ನಾನು ತಮಿಳಿನಲ್ಲಿ ಸ್ವಲ್ಪ ವೀಕ್ ಇದ್ದೆ. ನಮ್ಮ ಅಜ್ಜಿ ಮೂಲಕ ಆತ ಪರಿಚಯ ಆಗಿದ್ದ. ಮನೆಯಲ್ಲಿ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ಆತ ನನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಲ್ಲಿಗೆ ಬರುತ್ತಿದ್ದ ಬೇರೆ ಹುಡುಗರು ಮತ್ತು ಹುಡುಗಿಯರ ಮೇಲೂ ಆತ ದೌರ್ಜನ್ಯ ನಡೆಸುತ್ತಿದ್ದ. ವರ್ಷಗಳ ಕಾಲ ನಾನು ಯಾರ ಹತ್ತಿರವೂ ಹೇಳಲಿಲ್ಲ. ಯಾಕಂದ್ರೆ ಅವನು ಸದಾ ನನ್ನನ್ನು ಬೆದರಿಸುತ್ತಿದ್ದ. ಈ ಘಟನೆ ಶುರುವಾದಾಗ ನನಗೆ ಏಳು ಅಥವಾ ಎಂಟು ವರ್ಷ ಅಷ್ಟೇ.
ಈಗ ನಟಿ ಮೀರಾ ವಾಸುದೇವನ್ ಅವರು ತಮ್ಮ ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಏಳನೇ ವಯಸ್ಸಿನಲ್ಲಿ ಟ್ಯೂಷನ್ ಟೀಚರ್‌ನಿಂದ ಶುರುವಾದ ಈ ದೌರ್ಜನ್ಯ ಹದಿನೇಳನೇ ವಯಸ್ಸಿನವರೆಗೂ ಮುಂದುವರಿದಿತ್ತು ಎಂದು ಮೀರಾ ಹೇಳಿದ್ದಾರೆ.
ಧನ್ಯಾ ವರ್ಮಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮೀರಾ ಈ ಎಲ್ಲ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.ಆ ಕಾಲದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಅರಿವಿರಲಿಲ್ಲ. ಅವನು ನನ್ನನ್ನು ಬೆದರಿಸಿದ. ನಾನು ಚಿಕ್ಕವಳಾಗಿದ್ದರಿಂದ ಅವನ ಮಾತಿಗೆ ಹೆದರಿದೆ. ನಾನು ಕೆಟ್ಟ ಹುಡುಗಿ ಅಂತ ಸ್ಕೂಲ್ ಟೀಚರ್ಸ್, ಅಪ್ಪ-ಅಮ್ಮನ ಹತ್ತಿರ ಹೇಳಿಬಿಡ್ತೀನಿ ಅಂತ ಬೆದರಿಸಿದ. ಅದರಿಂದ ನಿನ್ನನ್ನು ಮನೆಯಿಂದ ಹೊರಗೆ ಹಾಕ್ತಾರೆ, ಅವರು ಆತ್ಮ*ಹ*ತ್ಯೆ ಮಾಡ್ಕೊತಾರೆ ಅಂದಾಗ ನಾನು ಪೂರ್ತಿ ಹೆದರಿಹೋದೆ ಎಂದು ಮೀರಾ ವಾಸುದೇವನ್ ಹೇಳಿದ್ದಾರೆ. ದೌರ್ಜನ್ಯಕ್ಕೆ ಒಳಗಾದವರ ದೇಹ ಭಾಷೆಯೇ ಬದಲಾಗಿಬಿಡುತ್ತದೆ. ದೌರ್ಜನ್ಯ ಮಾಡುವವರ ಮುಂದೆ ಸಂತ್ರಸ್ತರ ನಡವಳಿಕೆಯೇ ಬದಲಾಗುತ್ತದೆ. ಯಾವುದೇ ಕೆಟ್ಟ ಅನುಭವ ಆಗದವರು, ಏನಾದರೂ ಆದರೆ ತಕ್ಷಣ ಪ್ರತಿಕ್ರಿಯಿಸುತ್ತಾರೆ.
ಹದಿನೇಳು ವರ್ಷದವರೆಗೂ ನಾನು ಈ ನರಕಯಾತನೆ ಅನುಭವಿಸಬೇಕಾಯಿತು. ಅದು ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ನಾನು ಕಿರುಚುತ್ತಿದ್ದೆ, ಅಳುತ್ತಿದ್ದೆ, ನನಗೆ ನಾನೇ ಗಾಯ ಮಾಡಿಕೊಳ್ಳುತ್ತಿದ್ದೆ. ನಂತರ, ನಾನು ಹೇಳುವುದನ್ನು ಯಾರೂ ಕೇಳುವುದಿಲ್ಲ, ಅರ್ಥಮಾಡಿಕೊಳ್ಳುವುದಿಲ್ಲ ಅಂತ ಅನಿಸಿದ ಮೇಲೆ ಸುಮ್ಮನಾಗಿಬಿಟ್ಟೆ. ನನಗೆ ಸ್ನೇಹಿತರೂ ಇರಲಿಲ್ಲ. ಅದೇ ಟೀಚರ್ ನನ್ನ ತಂಗಿಗೂ ಪಾಠ ಮಾಡ್ತೀನಿ ಅಂದಾಗ ನಾನು ದೊಡ್ಡ ಗಲಾಟೆ ಮಾಡಿದೆ. ಆದರೆ ನನಗೆ ಲೈಂಗಿಕತೆಯ ಬಗ್ಗೆ ಏನೂ ಗೊತ್ತಿರಲಿಲ್ಲ. ನನಗೆ ಏನಾಗುತ್ತಿದೆ ಅಂತಾನೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ, ಅಪ್ಪ-ಅಮ್ಮನಿಗೆ ಹೇಗೆ ವಿವರಿಸಬೇಕು ಅಂತಲೂ ನನಗೆ ಗೊತ್ತಿರಲಿಲ್ಲ ಎಂದು ಮೀರಾ ವಾಸುದೇವನ್ ಹೇಳಿದರು.
Rain Alert ಮುಂದಿನ 4 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ : 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್