newsics.com/ನ್ಯೂಸಿಕ್ಸ್
ತಾವು ಮಾಡುವ ಅನ್ಯಾಯವನ್ನು ಜನರು ವಿಡಿಯೋ ಮಾಡುವುದೇ ತಪ್ಪು ಎನ್ನುವಂತೆ ಹೈಕೋರ್ಟ್‌ನಲ್ಲಿ ವಾದ ಮಾಡಿ, ನ್ಯಾಯಮೂರ್ತಿಗಳಿಂದ ಸರ್ಕಾರ ಉಗಿಸಿಕೊಂಡಿರುವ ಘಟನೆಯೊಂದು ಗುಜರಾತ್ ಹೈಕೋರ್ಟ್‌ನಲ್ಲಿ ನಡೆದಿದೆ.
https://youtube.com/shorts/QmBsVJxCxsg?si=FaYAZtjO3Xv8e1rn
ಪೊಲೀಸ್ ಠಾಣೆಯೊಳಗೆ ನಾಗರಿಕರು ವಿಡಿಯೋಗ್ರಫಿ ಮಾಡುವುದನ್ನು ನಿಷೇಧಿಸಿದ್ದಕ್ಕಾಗಿ ಪೊಲೀಸರನ್ನು ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್. ದೇಸಾಯಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಸಿಸಿಟಿವಿ ಇರುವಾಗ, ಜನರು ಹೀಗೆ ಪೊಲೀಸ್ ಠಾಣೆ ಒಳಗೆ ವಿಡಿಯೋ ಮಾಡುವುದು ಸರಿಯಲ್ಲ, ಅದು ಕಾನೂನು ಉಲ್ಲಂಘನೆ ಎಂದು ಸರ್ಕಾರ ಪರ ವಕೀಲರು ವಾದಿಸಿದರು. ಸರಿ, ನಿಮ್ಮ ವಾದವನ್ನು ಒಪ್ಪೋಣ, ಮೊದಲು ಹಾಗೆಂದು ಯಾವ ಕಾಯ್ದೆ, ಯಾವ ಸೆಕ್ಷನ್ ಹೇಳುತ್ತದೆ ಎಂದು ಪ್ರಶ್ನಿಸಿದಾಗ ವಕೀಲರು ಕಕ್ಕಾಬಿಕ್ಕಿಯಾದರು. ಸಿಸಿಟಿವಿ ಎಲ್ಲಾ ಇರುತ್ತದೆ, ವಿಡಿಯೋ ಯಾಕೆ ಎಂದು ಅವರು ಪ್ರಶ್ನಿಸಿದಾಗ, ಸರ್ಕಾರಗಳ ಎಷ್ಟು ಸಿಸಿಟಿವಿ ಕೆಲಸ ಮಾಡುತ್ತದೆ ಎನ್ನುವುದು ನಮಗೆ ಗೊತ್ತಿದೆ. ಶೇಕಡಾ 80 ರಷ್ಟು ಸಿಸಿಟಿವಿ ಕೆಲಸವೇ ಮಾಡುವುದಿಲ್ಲ. ಹೀಗಿರುವಾಗ ಸಾಕ್ಷಿಗಾಗಿ ವಿಡಿಯೋ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ನೀವು (ಪೊಲೀಸರು) ಏನು ಬೇಕಾದರೂ ಅನ್ಯಾಯ ಮಾಡಬಹುದು, ಅದನ್ನು ಜನರು ಪ್ರಶ್ನಿಸಬಾರದೇ, ಇದು ಯಾವ ಕಾನೂನಿನಲ್ಲಿ ಇದೆ ಎಂದು ತೋರಿಸಿ ಎಂದು ಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಸುಮ್ಮನಾಗಿದ್ದಾರೆ.