newsics.com/ನ್ಯೂಸಿಕ್ಸ್
ತಮಿಳುನಾಡಿನ ನೂತನ ಸಿಎಂ ಆಗಿ ದಳಪತಿ ವಿಜಯ್ಅ ಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇಂದು ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು.
ವೈಟ್ ಶರ್ಟ್, ಬ್ಲ್ಯಾಕ್ ಪ್ಯಾಂಟ್ ಧರಿಸಿಕೊಂಡು ಬಂದ ವಿಜಯ್ ಅವರು ತಮ್ಮ ಲಕ್ಷುರಿ ಕಾರಿನಲ್ಲಿ ಸ್ಟೇಡಿಯಂಗೆ ಬಂದಿದ್ದರು. ಇದು ಲಕ್ಷುರಿಗಳ ಕಿಂಗ್ ಅಂತಲೇ ಕರೆಯಲ್ಪಡುತ್ತದೆ.
ಟೊಯೋಟಾ ಲ್ಯಾಂಡ್ ಕ್ರೂಸರ್ 300 ಲಕ್ಷುರಿ ಕಾರುಗಳಲ್ಲಿ ಒಂದು. ಮೊದಲ ಬಾರಿಗೆ ಹೆಚ್ಚು ಆಫ್-ರೋಡ್-ಕೇಂದ್ರಿತ GR-S ರೂಪಾಂತರ ಈ ಕಾರಿನಲ್ಲಿದೆ. 2025 ಟೊಯೋಟಾ ಲ್ಯಾಂಡ್ ಕ್ರೂಸರ್ 300 ಅದರ ಮೊದಲು ಮಾರ್ಕೆಟ್ಗೆ ಬಂದ ಕಾರುಗಳಿಗಿಂತ ದುಬಾರಿಯಾಗಿದೆ. ಲ್ಯಾಂಡ್ ಕ್ರೂಸರ್ 300 GR-S ಮುಂಭಾಗ ಮತ್ತು ಹಿಂಭಾಗದ ಡಿಫ್ರಾಸ್ಟ್ ಲಾಕ್‌ಗಳನ್ನು ಹೊಂದಿದೆ.
309hp, 3.3-ಲೀಟರ್ V6 ಡೀಸೆಲ್ ಎಂಜಿನ್ ಮತ್ತು 10-ಸ್ಪೀಡ್ ಆಟೋಮ್ಯಾಟಿಕ್ ಸಿಸ್ಟಮ್ ಕೂಡಾ ಇದೆ. 4-ಝೋನ್ ಹವಾ ನಿಯಂತ್ರಣ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 12.3-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಸನ್‌ರೂಫ್, ಮುಂಭಾಗ ಮತ್ತು ಹಿಂಭಾಗದ ಸೀಟ್ ವಿಂಡೋ, ಮ್ಯಾನುವಲ್ ಸೀಟ್ ಅಡ್ಜಸ್ಟಿಂಗ್ ಇದೆ.
ಮುಂಭಾಗದ ಮಧ್ಯದ ಆರ್ಮ್‌ರೆಸ್ಟ್ ಅಡಿಯಲ್ಲಿ ಕೂಲ್ ಬಾಕ್ಸ್ ಕೂಡಾ ಇರುತ್ತದೆ. 10 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇದು ಅನಲಾಗ್ ಡಯಲ್‌ಗಳನ್ನು ಹೊಂದಿದೆ. ಗೇರ್ ನಾಬ್‌ಗಾಗಿ ಲೆಥೆರೆಟ್ ಫಿನಿಶ್ ಇದೆ.
ಕಾರಿನ ಮುಂಭಾಗದಲ್ಲಿ ಹೆಚ್ಚು ಸ್ಥಳವಿದೆ. ಕ್ಯಾಬಿನ್ ಅಗಲವಾಗಿದೆ, ಪ್ರಯಾಣಿಕರು ಪರಸ್ಪರ ಹತ್ತಿರ ಕುಳಿತಿರುವಂತೆ ಭಾಸವಾಗುವುದಿಲ್ಲ. ನೀವು ಕ್ಯಾಬಿನ್‌ನಲ್ಲಿ ಎತ್ತರದಲ್ಲಿ ಕುಳಿತು ರೋಡ್ನಲ್ಲಿರುವ ಇತರರನ್ನು ನೋಡಬಹುದು. ವಿಂಡ್‌ಶೀಲ್ಡ್ ಮತ್ತು ಕಿಟಕಿಗಳು ಗ್ರೀನ್ ಲ್ಯಾಮಿನೇಟೆಡ್ ಅಕೌಸ್ಟಿಕ್ ಗ್ಲಾಸ್ ಅನ್ನು ಹೊಂದಿದ್ದು ಹೀಟ್ ಶೀಲ್ಡ್ ಗ್ಲಾಸ್‌ನೊಂದಿಗೆ ಬರುತ್ತವೆ. ಇದು ಶಬ್ದ ಮತ್ತು ಬಿಸಿಲು ಒಳಗೆ ನಾಟದಂತೆ ಮಾಡುತ್ತದೆ.
ಹೆಡ್-ಅಪ್ ಡಿಸ್ಪ್ಲೇ ನಿಮಗೆ ಓದಲು ಸ್ಪಷ್ಟವಾಗಿ ಕಾಣಿಸುತ್ತದೆ. ಇದರ ಸ್ಥಾನ ಮತ್ತು ವಿನ್ಯಾಸವನ್ನು ಆ ರೀತಿ ಸೆಟ್ ಮಾಡಲಾಗಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ತುಂಬಾ ಸ್ಪಷ್ಟವಾಗಿದೆ. ಫಿಟ್ ಮತ್ತು ಫಿನಿಶ್ ಹೈಕ್ಲಾಸ್ ಆಗಿದೆ.
ಟೊಯೋಟಾ ಲ್ಯಾಂಡ್ ಕ್ರೂಸ್ LC 300 ಬೆಲೆ ಈಗ ರೂ. 2.31 ಕೋಟಿಯಿಂದ ರೂ. 2.41 ಕೋಟಿಗಳವರೆಗೆ ಇದೆ. ಇದೇ ಕಾರಿನಲ್ಲಿ ವಿಜಯ್ ಅವರು ಪ್ರಮಾಣವಚನ ಸ್ವೀಕರಿಸೋಕೆ ಬಂದಿದ್ದರು.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಬೆಂಗಳೂರಲ್ಲಿ ನಾಳೆ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ