newsics.com/ನ್ಯೂಸಿಕ್ಸ್
ಬಿಸಿಲಿನ ಝಳ ನೆತ್ತಿ ಸುಡುತ್ತಿದೆ. ಹೊರಗೆ ಹೋದರೆ ಕೆಲವೇ ಗಂಟೆಗಳಲ್ಲಿ ಬಾಯಾರಿಕೆ ಶುರುವಾಗಿ ಬಿಡುತ್ತೆ.ಈ ಸಮಯದಲ್ಲಿ ನೀರು, ಜ್ಯೂಸ್ ಸೇರಿದಂತೆ ಇತರೆ ತಂಪು ಪಾನೀಯಗಳನ್ನು ಸೇವಿಸುವುದು ದೇಹಕ್ಕೆ ಒಳ್ಳೆಯದು. ಅದರಲ್ಲೂ ಪ್ರತಿನಿತ್ಯ ಒಂದು ಗ್ಲಾಸ್ ಕಬ್ಬಿನ ಹಾಲನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳಿಂದ ದೂರ ಇರಬಹುದಾಗಿದೆ.
https://youtube.com/shorts/iatQVbaFb3g?si=spJ72cQdl8luCXZE
ಚರ್ಮಕ್ಕೆ ಒಳ್ಳೆಯದು: ಕಬ್ಬಿನ ರಸದಲ್ಲಿ ಉತ್ಕರ್ಷಣ ನಿರೋಧಕಗಳು, ಮೆಗ್ನೀಸಿಯಮ್, ಕಬ್ಬಿಣ ಹಾಗೂ ಇತರ ಎಲೆಕ್ಟ್ರೋಲೈಟ್‍ಗಳು ಹೇರಳವಾಗಿರುತ್ತದೆ. ಇವೆಲ್ಲವೂ ಕಾಂತಿಯುತ ಚರ್ಮಕ್ಕೆ ಅವಶ್ಯಕವಾಗಿರುತ್ತದೆ. ಜೊತೆಗೆ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ದೇಹದಲ್ಲಿನ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ಕಾಣುವುದನ್ನು ಕಡಿಮೆಗೊಳಿಸುತ್ತದೆ.
ಮೂತ್ರದ ಸೋಂಕನ್ನು ತಡೆಯುತ್ತೆ: ಬೇಸಿಗೆಯಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಮೂತ್ರ ಸೋಂಕನ್ನು ತಡೆಗಟ್ಟಬಹುದು, ಕಿಡ್ನಿ ಸ್ಟೋನ್ ತಡೆಗಟ್ಟಲು ಸಹಕಾರಿಯಾಗಿದೆ.
ಮೊಡವೆಗೆ ಮುಕ್ತಿ: ಬೇಸಿಗೆಯಲ್ಲಿ ಬೇವರುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುವುದು ಸಹಜ. ಆದರೆ ನೀವು ದಿನಾ ಒಂದು ಲೋಟ ಕಬ್ಬಿನ ರಸ ಕುಡಿಯುವುದರಿಂದ ಮೊಡವೆ ಸಮಸ್ಯೆ ತಡೆಗಟ್ಟಬಹುದು. ಅಲ್ಲದೇ ಕಬ್ಬಿನ ರಸವನ್ನು ಅರಿಶಿಣದೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ.
ಬಾಯಿಯ ದುರ್ವಾಸನೆ ತಡೆ: ಬಾಯಿಯ ದುರ್ವಾಸನೆ ಪೋಷಕಾಂಶಗಳ ಕೊರತೆಯಿಂದಲೂ ಉಂಟಾಗುತ್ತದೆ. ಪ್ರತಿದಿನ ಕಬ್ಬಿನ ರಸ ಕುಡಿಯುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು.