newsics.com/ನ್ಯೂಸಿಕ್ಸ್
ನವದೆಹಲಿ: ದೇಶಾದ್ಯಂತ ಇರುವ ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹಾಗೂ ಹೂಡಿಕೆ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಅಂಚೆ ಕಚೇರಿಯ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಪಾರದರ್ಶಕತೆ ತರಲು ಪಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
https://youtube.com/shorts/iatQVbaFb3g?si=spJ72cQdl8luCXZE
ಕೇಂದ್ರ ಸರ್ಕಾರದ ಆದೇಶ ಸಂಖ್ಯೆ 02/2026 ರ ಪ್ರಕಾರ, ಅಂಚೆ ಇಲಾಖೆಯ ಈ ಕೆಳಗಿನ ಸೇವೆಗಳಿಗೆ ಪಾನ್ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ:
ಹೊಸ ಉಳಿತಾಯ ಖಾತೆ ತೆರೆಯಲು.
ವಿವಿಧ ಡೆಪಾಸಿಟ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಲು.
ನಗದು ಹಿಂಪಡೆಯುವಿಕೆ ಮತ್ತು ಟೈಮ್ ಡೆಪಾಸಿಟ್ ವ್ಯವಹಾರಗಳಿಗೆ.
ಆದಾಯ ತೆರಿಗೆ ನಿಯಮಗಳಾದ 159, 160, 161, 211 ಮತ್ತು 237ರ ಅಡಿಯಲ್ಲಿ ಈ ಹೊಸ ನಿಬಂಧನೆಗಳನ್ನು ಜಾರಿಗೆ ತರಲಾಗಿದೆ.
ಒಂದು ವೇಳೆ ಗ್ರಾಹಕರ ಬಳಿ ಪಾನ್ ಕಾರ್ಡ್ ಲಭ್ಯವಿಲ್ಲದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಗ್ರಾಹಕರು ‘ಫಾರ್ಮ್ 97’ (Form 97) ಅನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಇದರಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ವಹಿವಾಟಿನ ಸಂಪೂರ್ಣ ವಿವರಗಳೊಂದಿಗೆ ಪೂರಕ ದಾಖಲೆಗಳನ್ನು ಲಗತ್ತಿಸುವುದು ಕಡ್ಡಾಯವಾಗಿದೆ.