newsics.com/ನ್ಯೂಸಿಕ್ಸ್
ದಳಪತಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ಗೆದ್ದಿದ್ದೇ ಗೆದ್ದಿದ್ದು, ವಿಜಯ್ ಗಿಂತ ಹೆಚ್ಚಾಗಿ ತ್ರಿಷಾ ಕೃಷ್ಣನ್ ಹೆಸರು ಚಾಲ್ತಿಗೆ ಬಂದಿದೆ.
ಅಸಲಿಗೆ ವಿಜಯ್-ತ್ರಿಷಾ ಸಂಬಂಧದ ಬಗೆಗಿನ ಗಾಸಿಪ್ ಬಹಳಷ್ಟು ದಿನಗಳಿಂದ ಇದೆ. ಈ ನಡುವೆ ವಿಜಯ್ ಜೊತೆ ತ್ರಿಷಾನೂ ರಾಜಕೀಯ ಬರ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ ಹಿಂದೊಮ್ಮೆ ಸಂದರ್ಶನದಲ್ಲಿ ತಾನುಆದ್ರೆ ಮುಖ್ಯಮಂತ್ರಿಯೇ ಆಗ್ತಿನಿ ಅಂದಿದ್ದ ತ್ರಿಷಾ ಮಾತುಗಳು ಈಗ ಹೊಸ ಅರ್ಥ ಪಡೆದುಕೊಂಡಿವೆ.
ದಳಪತಿ ವಿಜಯ್ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ , ಎಲ್ಲರ ಚಿತ್ತ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ಅದ್ರಲ್ಲೂ ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ದ ವಿಡಿಯೋ ಈಗ ವೈರಲ್ ಆಗ್ತಾ ಇದೆ.
ಆಗ ತ್ರಿಷಾ ಈಗ ತಮಾಷೆಗೆ ಈ ಮಾತು ಹೇಳಿದ್ರೋ, ಅಥವಾ ಸೀರಿಯಸ್ ಆಗಿ ಹೇಳಿದ್ರೋ, ಈಗ ಈ ಮಾತಿಗೆ ಹೊಸ ಅರ್ಥ ಬಂದಿದೆ. ನಿಮಗೆಲ್ಲಾ ಗೊತ್ತಿರೋ ಹಾಗೆ ದಳಪತಿ ವಿಜಯ್, ಪತ್ನಿ ಸಂಗೀತಾ ಜೊತೆ ವಿಚ್ಛೆಧನಕ್ಕೆ ಮುಂದಾಗಿದ್ದಾರೆ. ವಿಜಯ್ ಮತ್ತು ತ್ರಿಷಾ ನಡುವೆ ಬಹುಕಾಲದಿಂದ ನಂಟು ಇದ್ದು, ಇವರಿಬ್ಬರ ಅಫೇರ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡಿವೆ.
ಚುನಾವಣಾ ಫಲಿತಾಂಶದ ದಿನ ತ್ರಿಷಾ ಹುಟ್ಟುಹಬ್ಬ ಕೂಡ ಇದ್ದು, ತಿರುಪತಿ ದೇಗುಲಕ್ಕೆ ನಟಿ ತೆರಳಿದ್ರು. ಅಲ್ಲಿಂದ ಸೀದಾ ದಳಪತಿ ವಿಜಯ್ ನಿವಾಸಕ್ಕೆ ಆಗಮಿಸಿದ್ರು. ಅಷ್ಟೊತ್ತಿಗೆ ಟಿವಿಕೆ ವಿಜಯೋತ್ಸವ ಖಚಿತವಾಗಿತ್ತು. ತ್ರಿಷಾ ಮೊಗದಲ್ಲೂ ಸಂತಸದ ಕಾಂತಿ ನಳನಳಿಸ್ತಾ ಇತ್ತು.
2 ಕ್ಷೇತ್ರಗಳಲ್ಲಿಯೂ ವಿಜಯ್ ಜಯ.. ತ್ರಿಷಾಗೆ ತಿರುಚ್ಚಿ ಟಿಕೆಟ್..?
ಹೌದು ವಿಜಯ್ ಪೆರಂಬೂರು ಮತ್ತು ತಿರುಚ್ಚಿ ಎರಡು ಕಡೆಗೆ ಸ್ಪರ್ಧೆ ಮಾಡಿದ್ದು, ಎರಡೂ ಕಡೆ ವಿಜಯ ಸಾಧಿಸಿದ್ದಾರೆ. ಪೆರಂಬೂರನ್ನ ಉಳಿಸಿಕೊಂಡು, ತಿರುಚ್ಚಿಗೆ ರಾಜಿನಾಮೆ ಕೊಡೋದು ಬಹುತೇಕ ಫಿಕ್ಸ್. ಮತ್ತು ತಿರುಚ್ಚಿ ಟಿಕೆಟ್ನ ತ್ರಿಷಾಗೆ ಕೊಡ್ತಾರೆ ಅಂತ ಸುದ್ದಿಯಾಗಿದೆ.
ಅಸಲಿಗೆ ಚುನಾವಣೆ ಸಮಯದಲ್ಲಿ ಅನೇಕ ರಾಜಕೀಯ ನಾಯಕರು ತ್ರಿಷಾ ಮತ್ತು ವಿಜಯ್ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರು. ವಿಜಯ್ ಪತ್ನಿ ಇದೇ ಸಮಯದಲ್ಲಿ , ಡಿವೋರ್ಸ್ ಅಪ್ಲೈ ಮಾಡಿದ್ರು. ಇವೆಲ್ಲಾ ವಿಜಯ್ಗೆ ಮೈನಸ್ ಆಗ್ತಾವೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ತಮಿಳುನಾಡು ಜನ ಅದೆಲ್ಲವನ್ನೂ ಮೀರಿ ವಿಜಯ್ ಪಾರ್ಟಿಯನ್ನ ಬೆಂಬಲಿಸಿದ್ದಾರೆ. ಅಲ್ಲಿಗೆ ವಿಜಯ್ ತ್ರಿಷಾ ಸಂಬಂಧಕ್ಕೆ ಒಂದು ರೀತಿ ಅಧಿಕೃತ ಮುದ್ರೆ ಬಿದ್ದಂತೆ ಅಗಿದೆ. ಅದ್ರಲ್ಲೂ ಅಂದಿನ ಎಂ.ಜಿ.ಆರ್ ಮತ್ತು ಜಯಲಲಿತಾ ಜೋಡಿ ಜೊತೆಗೆ ಜನರು ವಿಜಯ್ ತ್ರಿಷಾರನ್ನ ಹೋಲಿಕೆ ಮಾಡ್ತಾ ಇದ್ದಾರೆ.
ಅಸಲಿಗೆ ತ್ರಿಶಾ ಅಂಡ್ ವಿಜಯ್ 2004ರಲ್ಲಿ ಮೊದಲ ಬಾರಿ ಗಿಲ್ಲಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ರು. ಗಿಲ್ಲಿ ಮೂವಿ ಸೂಪರ್ ಡೂಪರ್ ಹಿಟ್ ಆಗಿ ಇವರದ್ದು ಹಿಟ್ ಪೇರ್ ಅನ್ನಿಸಿಕೊಂಡಿತ್ತು.
ಇನ್ನೂ 2005 ಮತ್ತು 2006ರಲ್ಲಿ ತಿರುಪಾಚಿ, ಆತಿ ಸಿನಿಮಾಗಳಲ್ಲಿ ಕೂಡ ವಿಜಯ್ ಌಂಡ್ ತ್ರಿಶಾ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ರು. 2008ರಲ್ಲಿ ಮತ್ತೆ ಕುರುವಿ ಮೂವಿನಲ್ಲಿ ಜೊತೆಯಾಗಿ ಮಿಂಚಿದ್ರು. ಆದ್ರೆ ಆ ಸಮಯದಲ್ಲಿ ಇಬ್ಬರ ನಡುವೆ ಗೆಳೆತನ ಮಾತ್ರ ಇತ್ತು.
2023ರಲ್ಲಿ , 15 ವರ್ಷಗಳ ನಂತರ ಮತ್ತೆ ಲಿಯೋ ಸಿನಿಮಾದಲ್ಲಿ ಇಬ್ಬರೂ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ರು. ಆ ಸಮಯದಲ್ಲಿ ವಿಜಯ್ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಅತ್ತ ಎಂಗೇಜ್ಮೆಂಟ್ ಮುರಿದುಕೊಂಡಿದ್ದ ತ್ರಿಷಾ ಕೂಡ ಒಬ್ಬಂಟಿ ಆಗಿದ್ರು. ಅಲ್ಲಿಂದಲೇ ಇಬ್ಬರ ನಡುವೆ ಆತ್ಮೀಯತೆ ಬೆಳಿತು ಅಂತ ಹೇಳಲಾಗುತ್ತೆ.
ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು , ನಾನಾ ಸವಾಲು ಎದುರಿಸಿದ ಸಮಯದಲ್ಲಿ ತ್ರಿಷಾ ವಿಜಯ್ಗೆ ಬೆನ್ನೆಲುಬಾಗಿ ನಿಂತುಕೊಂಡ್ರು. ಸೋ ವಿಜಯ್ರ ಈ ಗೆಲುವಿನಲ್ಲಿ, ತ್ರಿಷಾ ಪಾತ್ರ ಇದೆ. ವಿಜಯ್ ಪಾಲಿನ ವಿಜಯ ದೇವತೆ ತ್ರಿಷಾ ಅಂತಿದ್ದಾರೆ ಫ್ಯಾನ್ಸ್.