Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD DAY | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 05-05-2026, ಇಂದು ನಿಮ್ಮ ಅದೃಷ್ಟ ಹೇಗಿದೆ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD DAY | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 05-05-2026, ಇಂದು ನಿಮ್ಮ ಅದೃಷ್ಟ ಹೇಗಿದೆ?

Share
4 Min Read
SHARE

newsics.com/ನ್ಯೂಸಿಕ್ಸ್

ಶುಭ ದಿನ

05-05-2026, ಮಂಗಳವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಕೃಷ್ಣ ಪಕ್ಷ ಚತುರ್ಥಿ.

* ಅಂಗಾರಕ ಸಂಕಷ್ಟಿ

—

ಇಂದಿನ ಪಂಚಾಂಗ

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಮೂಲಾ, ಯೋಗ : ಶಿವ, ಕರಣ : ಭವ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:06, ಯಮಗಂಡ ಕಾಲ 09:11 – 10:46, ಗುಳಿಕ ಕಾಲ 12:21 – 13:56

=========

ಇಂದಿನ ರಾಶಿ ಭವಿಷ್ಯ

ಮೇಷ

ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿದರೆ ಪ್ರಯೋಜನವಾಗದು. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಇದು ನಿಮಗೆ ಬೇಸರ ತರಿಸುವ ಕೆಲಸವಾಗಿರುತ್ತದೆ. ಹೊಸ ಯೋಜನೆಗಳು ಸಿಗಲಿದೆ. ಸಂಬಂಧಗಳು ಸುಧಾರಿಸುವ ಹಂತಕ್ಕೆ ಹೋಗಲಿವೆ.

ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ.

ವೃಷಭ 

ಅತಿಯಾದ ದೇಹಾಲಸ್ಯದಿಂದ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೇ ವಿಳಂಬವಾಗಲಿದೆ. ನಿಮ್ಮ‌ಅಜ್ಞಾನವನ್ನು ನೀವೇ ಪ್ರದರ್ಶಿಸುವಿರಿ‌. ನೀವು ನಿರ್ಮಿಸಿಕೊಂಡ ನೂತನ ಗೃಹದಲ್ಲಿ ವಾಸವು ಆರಂಭವಾಗಲಿದೆ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ದಾಂಪತ್ಯದಲ್ಲಿ ಕೆಲವು ಕಹಿ ಮಾತುಗಳು ಬರಬಹುದು. ನೀವು ಇಂದು ಕೈಲಾಗದೇ ಇರುವ ಅಬಲರು.

ಮಿಥುನ 

ನಿಮಗೆ ಸುಳ್ಳನ್ನು ಆಡುವವರು ಎನ್ನುವ ಹಣೆಪಟ್ಟಿ ಬೀಳಲಿದೆ. ನಿಮ್ಮ ಮಾತಿಗೆ ಬಿಡಿಗಾಸಿನಷ್ಟೂ ಬೆಲೆ ಇಲ್ಲದೇ ಕಡಿಮೆಯಾಗಬಹುದು. ನೀರಿಗೆ ಸಂಬಂಧಿಸಿದ ಉದ್ಯೋಗಾವಕಾಶಗಳು ಹೆಚ್ಚು ಸಿಗಬಹುದು. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ಊರಿನಿಂದ ಹೊರಹೋಗುವ ಸಾಧ್ಯತೆ ಇದೆ. ಕಲಾವಿದರು ಹೆಚ್ಚಿನ ಪ್ರಶಂಸೆಯನ್ನು ಗಳಿಸುವರು.

ಕರ್ಕಾಟಕ 

ಪ್ರಭಾವೀ ವ್ಯಕ್ತಿತ್ವವನ್ನು ಜನಕ್ಕೆ ತಿಳಿಸುವಿರಿ. ನೀವಿಡುವ ಹೆಜ್ಜೆಯು ಗುರುತಾಗಲಿದೆ. ಎಂತಹ ಹೆಜ್ಜೆಗಳನ್ನು ಇಡಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಿ. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನಿಮ್ಮನ್ನು ನಿಂದಿಸುವವರನ್ನು ನೀವು ದೂರವಿರಿಸುವಿರಿ. ಆಡಿದ ಮಾತನ್ನು ತಿರುಚುವ ಕೆಲಸ ಮಾಡುವುದು ಬೇಡ. ಬಂದಿದ್ದನ್ನು ಬಂದಂತೆ ಸ್ವೀಕರಿಸಲು ಕಷ್ಟವಾಗದು. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು.

ಸಿಂಹ 

ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ವರ್ತಿಸುವುದು ಉಚಿತ. ಕಬ್ಬಿಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ಹೆಚ್ಚು ಒತ್ತಡ. ದಾಂಪತ್ಯದಲ್ಲಿ ಮಾತಿನ ಸಣ್ಣ ಬಿಸಿ ಉಂಟಾಗಬಹುದು. ಮನಸ್ಸಿನಲ್ಲಿ ಒಡಕುಗಳು ಮೂಡಬಹುದು. ಆದಷ್ಟು ಮುಂದುವರಿಯದೇ ನಿಲ್ಲಿಸಲು ಪ್ರಯತ್ನಿಸಿ. ಮುಂದೆ ಅದು ವಿಚ್ಛೇದನಕ್ಕೆ ಕಾರಣವಾಗಬಹುದು. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು.

ಕನ್ಯಾ 

ಕೆಲವರು ನಿಮ್ಮೆದುರು ಮಾತನಾಡದೇ ಹಿಂಬದಿಯಿಂದ ಮಾತನಾಡಲಿದ್ದಾರೆ. ಗುರುವಿನ ಅನುಗ್ರಹದಿಂದ ಉದ್ಯಮಕ್ಕೆ ಬಲ ಸಿಗಲಿದೆ. ಕೃಷಿಯ ಬಗ್ಗೆ ಆಸಕ್ತಿ ಇರುವ ನೀವು ಕೃಷಿಯನ್ನು ಮಾಡಿ ಸ್ವಲ್ಪಮಟ್ಟಿನ ಲಾಭವನ್ನು ಗಳಿಸುವಿರಿ. ತಂದೆಯು ನಿಮ್ಮ ಕೆಲಸಕ್ಕೆ ಧನಸಹಾಯವನ್ನು ಮಾಡಲಿದ್ದಾರೆ. ಕೆಲವರ ಸಹವಾಸದಿಂದ ನಿಮ್ಮ ದಿಕ್ಕು ತಪ್ಪಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ಅಲ್ಪಾವಧಿಯಲ್ಲಿ ಅಧಿಕ ಲಾಭಕ್ಕಾಗಿ ಹೂಡಿಕೆ ಮಾಡುವಿರಿ.

ತುಲಾ 

ಒತ್ತಡಗಳನ್ನು ನಿವಾರಿಸುವ ಉಪಾಯವು ಕರಗತವಾಗಿದ್ದು ಅನಾಯಾಸದಿಂದ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಮಾತುಗಾರಿಕೆಯಿಂದ ಆಗದ ಕೆಲಸವನ್ನೂ ಆಗಿಸಿಕೊಳ್ಳುವಿರಿ. ಹೊಸ ಕೆಲಸವನ್ನು ಆರಂಭಿಸುವವರಿಗೆ ಯೋಗ್ಯವಾದ ಸಮಯವಾಗಿದೆ. ಯಾರಿಂದಲೋ ಪ್ರೇರಿತರಾಗಿ ಆಸ್ತಿಯನ್ನು ಪಡೆಯುವ ಹುನ್ನಾರ ನಡೆಸುವಿರಿ. ಇಂದು ನಿಮ್ಮ ಮಾತಿನ ಆರಂಭವೇ ನೀವು ಎಂತಹವರು ಎನ್ನುವುದನ್ನು ತಿಳಿಸುತ್ತದೆ.

ವೃಶ್ಚಿಕ 

ನೀವು ಬಹಳ ದಿನಗಳಿಂದ ಮಾಡುತ್ತಿರುವ ಕಾರ್ಯಗಳು ಮುಂದೆ ಹೋಗುತ್ತಿದ್ದು ಇಂದು ಅದನ್ನು ಪೂರೈಸುವಿರಿ. ಇಂದು ಮನಸ್ಸು ನಿರಾಳವಾಗಿ ಯಾವದೇ ಒತ್ತಡಕ್ಕೆ ಸಿಲುಕದೇ ಇರುವುದು. ನಿಮ್ಮ ಯಾರಾದರೂ ಕೆಣಕಬಹುದು. ಸರ್ಕಾರದ ಕಾರ್ಯದಲ್ಲಿ ಸರಿಯಾದ ಮಾಹಿತಿ ಕೊರತೆ. ದುರಭ್ಯಾಸವು ಮನೆಯವರಿಗೆ ಗೊತ್ತಾಗಲಿದೆ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ.

ಧನುಸ್ಸು 

ಇಂದು ನಿಮ್ಮ ಅನಗತ್ಯ ಕಾರ್ಯಗಳ ಪಟ್ಟಿಯೇ ದೊಡ್ಡದಾಗುವುದು. ಅವಶ್ಯಕತೆಗಳನ್ನು ಮಾತ್ರ ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿ. ಯಾವುದೇ ಸಾಹಸಕ್ಕೆ ಕೈ ಹಾಕಲು ಹೋಗುವುದು ಬೇಡ‌. ವಿದೇಶದ ವಿದ್ಯಾಭ್ಯಾಸಕ್ಕೆ ಅವಕಾಶ ಸಿಗಲಿದೆ. ನಿಮಗೆ ಭವಿಷ್ಯದ ಚಿಂತೆ‌ ಇರಲಿದೆ. ಮಕ್ಕಳ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವೈದ್ಯಕೀಯ ವೃತ್ತಿಯಲ್ಲಿ ತುರ್ತು‌ ಕಾರ್ಯಗಳು ಬರುವುದು. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು.

ಮಕರ 

ಕಛೇರಿಯಲ್ಲಿ ನಿಮ್ಮನ್ನು ಹಿಮ್ಮೆಟ್ಟಿಸಲು ಕಾಯುತ್ತಿರುವರು. ಅವರಿಗೆ ನೀವು ಆಹಾರವಾಗಲಿದ್ದೀರಿ. ಇಂದು ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವಿರಿ. ಎದೆಗುಂದುವ ಸ್ಥಿತಿ ಇಂದು ಬರಬಹುದು. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳು ಸಿಗಬಹುದು. ಯಾವ ಬಲವನ್ನು ನಂಬದೇ ಸ್ವಪ್ರಯತ್ನದಿಂದ ಎಲ್ಲವನ್ನೂ ಮಾಡಲು ಬಯಸುವಿರಿ. ಮುರಿದ ಸಂಬಂಧಗಳು ಎಷ್ಟೇ ಆದರೂ ಸರಿಯಾಗಿ ಕೂಡಿಕೊಳ್ಳುವುದು ಕಷ್ಟವಾದೀತು.

ಕುಂಭ 

ನಿಮಗೆ ಸಿಗಬೇಕಾದ ಜವಾಬ್ದಾರಿ ಮತ್ತೊಬ್ಬರಿಗೆ ಸಿಗಲಿದೆ. ದೂರದ ಊರಿಗೆ ವೈಯಕ್ತಿಕ ಕಾರ್ಯದ ನಿಮಿತ್ತ ಪ್ರಯಾಣ ಮಾಡಲಿದ್ದೀರಿ. ಸ್ನೇಹಿತ ಮಾತುಗಳು ನಿಮಗೆ ಕಸಿವಿಸಿ ವಾತಾವರಣವನ್ನು ಉಂಟುಮಾಡಲಿದೆ. ಉನ್ನತ ವಿದ್ಯಾಭ್ಯಾಸವನ್ನು ಮಾಡುವವರಿಗೆ ವಿದೇಶಗಳಲ್ಲಿ ಅವಕಾಶವು ದೊರೆಯಲಿದೆ. ರಾಜಕೀಯದಲ್ಲಿ ಬದಲಾವಣೆಯನ್ನು ತರಿಸುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ.

ಮೀನ 

ಖುಷಿಯಾಗಿರಲು ಕೆಲವು ಸಂಗತಿಗಳು ನಿಮ್ಮ ಪಾಲಿಗೆ ಬರಲಿವೆ. ವಿನಾಕಾರಣ ಸಂಗಾತಿಯ ನಡುವೆ ಸಣ್ಣ ಕಲಹಗಳು ಹುಟ್ಟಿಕೊಳ್ಳಬಹುದು. ಅನಿವಾರ್ಯವಾಗಿ ಹೊರಗಿನ ತಿಂಡಿಯನ್ನು ತಿನ್ನಬೇಕಾದೀತು. ಉದರಕ್ಕೆ ಸಂಬಂಧಿಸಿದ ರೋಗವು ಬಂದು ಆರೋಗ್ಯವು ಕೆಡುವುದು. ನಿಮಗೆ ಕೆಲವು ಶುಭ ಶಕುನಗಳು ಕಾಣಿಸಿಕೊಳ್ಳಲಿದ್ದು ಅದರಂತೆ ನಿಮ್ಮ ನಡಿಗೆ ಇರಲಿ. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ.

 

 

TAGGED:#almanac #zodiac #prediction #01-05-2026 #friday #horoscope #planetary #positions
Share This Article
Facebook Twitter Copy Link Print
Previous Article Deedi defeat ಭದ್ರಕೋಟೆಯಾಗಿದ್ದ ಭವಾನಿಪುರದಲ್ಲೇ ದೀದಿಗೆ ಹೀನಾಯ ಸೋಲು
Next Article Hotel Food Price Hike ಬೆಂಗಳೂರಲ್ಲಿ ಊಟ-ತಿಂಡಿ ದರ ಊಟದ ದರ ಶೇ 8-10 ರಷ್ಟು ಹೆಚ್ಚಳ

Popular Posts

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕಪ್ರಮುಖ

ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?