newsics.com/ನ್ಯೂಸಿಕ್ಸ್
ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಅಲೆ ಎಬ್ಬಿಸಿದೆ.ದಳಪತಿ ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಒಂದು ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅವರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ವಿಜಯ್ ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
https://youtube.com/shorts/iatQVbaFb3g?si=I11csgvje-MFvvAP
ಅಲ್ಲದೆ ನಟಿ ಉಪ ಚುನಾವಣೆಯಲ್ಲಿ ಗೆದ್ದರೆ, ಅವರು ಉಪಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಟಿವಿಕೆ ಅಧ್ಯಕ್ಷ ವಿಜಯ್ ಅವರ ನೀಲಾಂಕರೈ ನಿವಾಸಕ್ಕೆ ನಟಿ ತ್ರಿಶಾ ಭೇಟಿ ನೀಡಿದ್ದಾರೆ.
ಚುನಾವಣೆಗೂ ಮುಂಚೆಯೇ, ವಿಜಯ್ ಮತ್ತು ತ್ರಿಷಾ ಬಗ್ಗೆ ವಿವಿಧ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದವು. ವಿಶೇಷವಾಗಿ ವಿಜಯ್ ತನ್ನ ಪತ್ನಿಗೆ ವಿಚ್ಛೇದನ ನೀಡುತ್ತಿದ್ದಾರೆ ಎಂಬ ವದಂತಿಗಳು ಬಂದಾಗ, ತ್ರಿಷಾ ಹೆಸರು ಜೋರಾಗಿ ಕೇಳಿಬಂದಿತ್ತು. ಇಬ್ಬರೂ ಒಟ್ಟಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದಾಗ ವದಂತಿಗಳು ಇನ್ನಷ್ಟು ಹೆಚ್ಚಾದವು. ಈಗ, ವಿಜಯ್ ಗೆಲುವಿನ ನಂತರ ತ್ರಿಷಾ ಸಕ್ರಿಯವಾಗಿ ಕಾಣಿಸಿಕೊಳ್ಳುವುದು ಆ ಸುದ್ದಿಗಳಿಗೆ ಮತ್ತೆ ಬಲ ತುಂಬುತ್ತಿದೆ. ಆದಾಗ್ಯೂ, ವಿಜಯ್ ಅಥವಾ ತ್ರಿಷಾ ಈ ವಿಷಯಗಳಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
https://www.newsics.com/2026/05/05/auto-driver-wins-raipuram-seat-defeating-two-experienced-leaders/