newsics.com/ನ್ಯೂಸಿಕ್ಸ್
ಅಹಮದಾಬಾದ್: 16 ವರ್ಷದ ಮಗಳ ಫೋನ್ ಚಟವನ್ನು ಬಿಡಿಸಲು ಪೋಷಕರು ಬರೋಬ್ಬರಿ ನಾಲ್ವರು ಬೌನ್ಸರ್ಗಳನ್ನು ನೇಮಿಸಿರುವ ವಿಚಿತ್ರ ಘಟನೆಯೊಂದು ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ.
https://youtube.com/shorts/1MGAmJmhYq0?si=nMc-nPA4I0KAHwKo
ಗುಜರಾತ್ನ ಪ್ರತಿಷ್ಠಿತ ಕುಟುಂಬವೊಂದರ ಹದಿಹರೆಯದ ಮಗಳು ಫೋನ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಎಷ್ಟು ದಾಸಿಯಾಗಿದ್ದಳೆಂದರೆ, ಅವಳನ್ನು ಅದರಿಂದ ದೂರವಿಡುವುದು ಪೋಷಕರಿಗೆ ಅಸಾಧ್ಯವಾಗಿತ್ತು.
ಆಕೆ ಅಪರಿಚಿತ ವ್ಯಕ್ತಿಗಳೊಂದಿಗೆ ನಿರಂತರ ಚಾಟಿಂಗ್ ಮಾಡುವುದು ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ಮಗ್ನಳಾಗಿದ್ದಳು. ಅಂತರ್ಜಾಲದಲ್ಲಿ ಪರಿಚಯವಾದವರನ್ನು ಭೇಟಿ ಮಾಡಲು ಆಕೆ ಗುಟ್ಟಾಗಿ ಮನೆಯಿಂದ ಹೊರಬರಲು ಶುರು ಮಾಡಿದ್ದಳು.
ಪೋಷಕರು ಫೋನ್ ಕಿತ್ತುಕೊಂಡರೆ ಮನೆಯ ವಸ್ತುಗಳನ್ನು ಒಡೆಯುವುದು ಮತ್ತು ಸ್ವಂತ ತಾಯಿಯ ಮೇಲೆಯೇ ಹಲ್ಲೆ ಮಾಡಲು ಮುಂದಾಗುತ್ತಿದ್ದಳು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಕಂಗಾಲಾದ ಪೋಷಕರು, ಮಗಳ ಮೇಲೆ 24 ಗಂಟೆಗಳ ಕಾಲ ನಿಗಾ ಇಡಲು ನಾಲ್ವರು ಬೌನ್ಸರ್ಗಳನ್ನು ನೇಮಿಸಿದ್ದಾರೆ. ಈ ಸುರಕ್ಷತೆಗಾಗಿ ಕುಟುಂಬವು ಪ್ರತಿ ತಿಂಗಳು ಸುಮಾರು 65,000 ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಆಕೆ ಫೋನ್ ಮುಟ್ಟದಂತೆ ಮತ್ತು ಮನೆಯಿಂದ ಹೊರಹೋಗದಂತೆ ಈ ಬೌನ್ಸರ್ಗಳು ಹದ್ದಿನ ಕಣ್ಣಿಟ್ಟಿದ್ದಾರೆ.
https://www.newsics.com/2026/05/04/five-state-assembly-election-results-today/