newsics.com/ನ್ಯೂಸಿಕ್ಸ್
ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಪೃಥ್ವಿ ಭಟ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಪೋಷಕರ ವಿರೋಧದ ನಡುವೆಯೇ ಖಾಸಗಿ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬುವರನ್ನ ಗಾಯಕಿ ಪೃಥ್ವಿ ಭಟ್ ಮದುವೆಯಾದರು. ವಿವಾಹದ ಬಳಿಕ ಪೃಥ್ವಿ ಭಟ್ ತಂದೆಯ ಆಡಿಯೋ ವೈರಲ್ ಆಯ್ತು. ಪೃಥ್ವಿ ಭಟ್ ವಿವಾದದ ಕೇಂದ್ರಬಿಂದುವಾದರು. ಆನಂತರ ಪೃಥ್ವಿ ಭಟ್ ಹಾಗೂ ಅಭಿಷೇಕ್ ಗ್ರ್ಯಾಂಡ್ ಆಗಿ ರಿಸೆಪ್ಷನ್ ಮಾಡಿಕೊಂಡರು.
https://youtube.com/shorts/4WeDGkWkv1E?si=V5-kEiXb0VaUEmaX
ಆದರೆ ಮದುವೆ ಬೇಡ್ವಾ? ಅಭಿಷೇಕ್ ತುಂಬಾನೆ ಇಷ್ಟ ಆಗ್ತಾರೆ. ಇವರನ್ನ ಮದುವೆ ಆಗೋದಾ? ಬೇಡ್ವಾ? ಅಪ್ಪ ಮತ್ತು ಅಮ್ಮನ ಬಿಟ್ಟು ಬರೋದಾ? ಬೇಡ್ವಾ? ಈ ಎಲ್ಲ ಗೊಂದಲ ಇತ್ತು. ಆಗಲೇ ಒಂದು ಕೆಲಸ ಮಾಡಿದೆ.
ಸಮೀಪದಲ್ಲಿಯೇ ದೇವಸ್ಥಾನ (Temple) ಇತ್ತು. ದೇವರಲ್ಲಿ ಒಂದು ಪ್ರಶ್ನೆ ಕೇಳಿದೆ. ಆ ಪ್ರಶ್ನೆಗೆ ಉತ್ತರ ವಿಶೇಷವಾಗಿಯೇ ಸಿಕ್ತು. ದೇವರು ಕೊಟ್ಟ ಆ ಉತ್ತರದಿಂದಲೇ ನಾನು ಮುಂದಿನ ನಿರ್ಧಾರ ಮಾಡಿದೆ. ಮುಂದೇನಾಯಿತು ಅನ್ನೋದನ್ನ ಗಾಯಕಿ ಪೃಥ್ವಿ ಭಟ್ (Prithwi Bhat) ಹೇಳಿಕೊಂಡಿದ್ದಾರೆ.
ನಾನು ಮದುವೆ ಆದ ಹುಡುಗ ನಮ್ಮ ಮನೆಯವರೆಗೆ ಗೊತ್ತಿದ್ದಾರೆ. ಅವರು ಹೊಸಬರೇನು ಅಲ್ಲ. 2018 ರಿಂದಲೇ ಅಪ್ಪ ಮತ್ತು ಅಮ್ಮನಿಗೆ ಅಭಿಷೇಕ್ ಚೆನ್ನಾಗಿಯೇ ಗೊತ್ತಿದ್ದಾರೆ. ಆದರೂ ಬೇಡ ಅಂತಲೇ ಹೇಳಿದರು.
ಈ ಗೊಂದದಲ್ಲಿಯೇ ನಾನು ಅಭಿಯನ್ನ ಬಿಟ್ಟು ಬೇರೆ ಹುಡುಗನನ್ನ ಮದುವೆ ಆಗಿದ್ದರೆ, ನಿಜಕ್ಕೂ ಯಾವುದು ಸರಿ ಇರ್ತಾನೇ ಇರಲಿಲ್ಲ. ನನ್ನ ಜೀವನವೂ ಹಾಳಾಗ್ತಾ ಇತ್ತು. ಮದುವೆ ಆದ ಹುಡುಗನ ಲೈಫ್ ಹಾಳಾಕ್ತಾ ಇತ್ತು. ಅಭಿಷೇಕ್ ಲೈಫ್ ಕೂಡ ಸರಿ ಇರ್ತಾ ಇರಲಿಲ್ಲ..
ಕೊನೆಗೆ ಆ ದಿನ ದೇವರ ಮೊರೆ ಹೋದೆ. ಹತ್ತಿರದಲ್ಲಿಯೇ ಇದ್ದ ಗಣೇಶನ ಟೆಂಪಲ್‌ಗೆ ಹೋದೆ, ಅಲ್ಲಿ ಕೇಳಿಕೊಂಡಿರೋದು ಒಂದೇ ಒಂದು ವಿಷಯ. ನಾನು ಅಭಿಯನ್ನ ಮದುವೆ ಆದರೆ, ಚೆನ್ನಾಗಿ ಇರ್ತೀನಾ ಅಂತಲೇ ಮನಸ್ಸಿನಲ್ಲಿ ಕೇಳಿಕೊಂಡೆ. ಹಾಗೆ ಘಂಟೆ ಸದ್ದಿನಲ್ಲೋ? ಹೂವು ಬೀಳೋ ಮೂಲಕವೋ ಯಾವುದೇ ರೂಪದಲ್ಲೂ ಉತ್ತರ ಕೊಡು ಅಂತ ಗಣೇಶನನ್ನ ಕೇಳಿಕೊಂಡೆ.
ಕಣ್ಣು ಮುಚ್ಚಿ ತೆಗೆಯೋದರಲ್ಲಿಯೇ ಗಣೇಶನಿಂದ ಹೂವು ಬಿದ್ದಿತ್ತು. ಆ ಹೂವು ಈಗಲೇ ಬಿದ್ದಿದೆ. ಅದನ್ನ ನನಗೆ ಕೊಡಿ ಅಂತ ಅರ್ಚಕರ ಬಳಿ ಕೇಳಿದೆ. ಅವರು ಹೂವಿನ ಜೊತೆಗೆ ಹಣ್ಣುಕೊಟ್ಟರು. ಅಲ್ಲಿಗೆ ಅಭಿನಯನ್ನ ಮದುವೆ ಆಗುವ ನಿರ್ಧಾರ ಮಾಡಿದೆ ಅಂತಲೇ ಪೃಥ್ವಿ ಭಟ್ ಹೇಳಿಕೊಂಡಿದ್ದಾರೆ.
https://www.newsics.com/2026/05/01/student-suicide-case-in-dharwad-inspector-suspended/