Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ
ಪ್ರಮುಖ

ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ

Share
1 Min Read
SHARE

newsics.com/ನ್ಯೂಸಿಕ್ಸ್

ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹಿಂದೂಗಳು ಕಲ್ಮಾ ಪಠಿಸಲು ನಿರಾಕರಿಸಿದ್ದಕ್ಕೆ ದುಷ್ಕರ್ಮಿಯೊಬ್ಬ ಧರ್ಮ ಕೇಳಿ ಚಾಕು ಇರಿದಿರುವ ಘೋರ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಮೀರಾ ರಸ್ತೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹಿಂದುಗಳು ಕಲ್ಮಾ ಪಠಿಸದ ಕಾರಣಕ್ಕೆ ದುಷ್ಕರ್ಮಿ ಏಕಾಏಕಿ ಚಾಕು ಇರಿದಿದ್ದಾನೆ.

ಇದಕ್ಕೂ ಮುನ್ನ ಆತ ಧರ್ಮ ಯಾವುದು ಎಂದು ಕೇಳಿದ್ದಾನೆ. ಹಿಂದೂಗಳು ಎಂದು ಹೇಳುತ್ತಿದ್ದರೂ ಕಲ್ಮಾ ಪಠಿಸುವಂತೆ ಒತ್ತಾಯಿಸಿದ್ದಾನೆ. ಒಪ್ಪದಿದಾಗ ಚಾಕುವಿನಿಂದ ಇರಿದಿದ್ದಾನೆ.

ಚಾಕು ಇರಿತಕ್ಕೊಳಗಾದವರನ್ನು ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋತೋ ರಮೇಶ್ ಸೇನ್ ಎಂದು ಗುರುತಿಸಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಆರೋಪಿ ಜೈಬ್ ಜುಬೈರ್ ಅನ್ಸಾರಿ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ನಯಾ ನಗರ ಪೊಲೀಸ್ ಠಾಣೆ ಪ್ರದೇಶದ ವೋಕ್‌ಹಾರ್ಡ್ ಆಸ್ಪತ್ರೆಯ ಹಿಂಭಾಗದಲ್ಲಿರುವ ಅಸ್ಮಿತಾ ಗ್ರ್ಯಾಂಡ್ ಮ್ಯಾನ್ಷನ್ ಸ್ಥಳದಲ್ಲಿ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋತೋ ಸೇನ್ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಈ ವೇಳೆ, ದುಷ್ಕರ್ಮಿ ಜೈಬ್ ಜುಬೈರ್ ಅನ್ಸಾರಿ ಸ್ಥಳಕ್ಕೆ ಬಂದು ಇಬ್ಬರ ಜೊತೆ ಮಾತನಾಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಕಲ್ಮಾ ಪಠಿಸಲು ಹೇಳಿದ್ದಾನೆ. ಬಳಿಕ ಚಾಕುವನ್ನು ಹೊರತೆಗೆದು ಹಲ್ಲೆ ನಡೆಸಿದ್ದಾನೆ.

ದಾಳಿಯಲ್ಲಿ ರಾಜ್‌ಕುಮಾರ್ ಮಿಶ್ರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಬ್ರೋತೋ ಸೇನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಆರೋಪಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಇದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದ ಜೋಡಿ

TAGGED:Two Hindus stabbed for not reciting Kalma: The assailant attacked them asking about religion
Share This Article
Facebook Twitter Copy Link Print
Previous Article ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದ ಜೋಡಿ
Next Article ಪತ್ನಿಯನ್ನು ಕೊಚ್ಚಿ ಕೊಂದು ಮಗು ಜೊತೆ ಬಾವಿಗೆ ಹಾರಿ ಪತಿ ಆತ್ಮಹತ್ಯೆ.!

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ಜೈಲಿಂದ ಹೊರಬರಲು ದರ್ಶನ್​​ಗೆ ಸಿಗುತ್ತಾ ಬಿಗ್ ಚಾನ್ಸ್​?

2 Min Read
ಪ್ರಮುಖ

ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ನಡೆ; ಬಿಜೆಪಿಗೆ ಶುರುವಾಯ್ತು ಟೆನ್ಷನ್!

1 Min Read
ಪ್ರಮುಖ

ಸ್ವಯಂಪ್ರೇರಿತ ಲೈಂಗಿಕ ವೃತ್ತಿ ಕಾನೂನು ಬಾಹಿರವಲ್ಲ ಎಂದ ಸುಪ್ರೀಂ 

2 Min Read

Social Networks

Facebook-f Instagram Twitter
Welcome Back!

Sign in to your account

Lost your password?