Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕೆಜಿಎಫ್ 3′ ಸಿನಿಮಾ ಬಗ್ಗೆ ನಟ ಯಶ್ ಹೇಳಿದ್ದೇನು?
ಪ್ರಮುಖಮನರಂಜನೆ

ಕೆಜಿಎಫ್ 3′ ಸಿನಿಮಾ ಬಗ್ಗೆ ನಟ ಯಶ್ ಹೇಳಿದ್ದೇನು?

Share
1 Min Read
SHARE

ರಾಮಾಯಣ ಸಿನಿಮಾ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ಬಿಡುಗಡೆ ಆಗಲು ಸಜ್ಜಾಗುತ್ತಿದೆ. ಇವುಗಳ ಜೊತೆಗೆ ಯಶ್ ಅವರ ಅಭಿಮಾನಿಗಳಿಗೆ, ‘ಕೆಜಿಎಫ್ 3’ನದ್ದು ಚಿಂತೆಯಾಗಿದೆ. ಇದೀಗ ಸ್ವತಃ ಯಶ್ ಅವರು ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಕೆಜಿಎಫ್ 3’ ಸಿನಿಮಾ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಹಲವರಿಗೆ ಇದೆ. ಇದೀಗ ನಟ ಯಶ್ ಅವರು ‘ಕೆಜಿಎಫ್: ಚಾಪ್ಟರ್ 3’ ಸಿನಿಮಾ ಖಂಡಿತವಾಗಿಯೂ ನಡೆಯುತ್ತದೆ ಎಂದು ಭರವಸೆ ನೀಡಿದ್ದಾರೆ. ಆದರೆ ಅದು ಸನಿಹ ಭವಿಷತ್ನಲ್ಲಿ ಸಾಧ್ಯವಿಲ್ಲ ಎಂದು ಸಹ ಖಚಿತಪಡಿಸಿದ್ದಾರೆ. ಯಶ್ ಪ್ರಸ್ತುತ ತಮ್ಮ ಮುಂಬರುವ ಚಿತ್ರಗಳಾದ ‘ಟಾಕ್ಸಿಕ್’ ಮತ್ತು ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರಗಳ ಮೇಲೆ ಗಮನ ಹರಿಸುತ್ತಿದ್ದು, ‘ಕೆಜಿಎಫ್ 3’ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

‘ಸದ್ಯಕ್ಕೆ ನಾನು ‘ಟಾಕ್ಸಿಕ್’, ‘ರಾಮಾಯಣ’ ಮತ್ತು ‘ರಾಮಾಯಣ 2’ ಸಿನಿಮಾಗಳ ಮೇಲೆ ಮಾತ್ರವೇ ಗಮನ ಹರಿಸಿದ್ದೇನೆ. ಅವುಗಳ ಹೊರತಾಗಿ ಇನ್ಯಾವುದೇ ಸಿನಿಮಾಗಳ ಬಗ್ಗೆ ನಾನು ಯೋಚಿಸುತ್ತಿಲ್ಲ. ಆದರೆ ನಾನು ಮತ್ತು ಪ್ರಶಾಂತ್ ನೀಲ್ ಹೊಸ ಸಿನಿಮಾ ಐಡಿಯಾಗಳ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇವೆ. ಯಾವುದಾದರೂ ಐಡಿಯಾ ಚೆನ್ನಾಗಿ ಅನಿಸಿದರೆ ನಾವು ‘ಕೆಜಿಫ್ 3′ ಮಾಡುತ್ತೇವೆ. ಕೇವಲ ಹಣ ಮಾಡುವ ಉದ್ದೇಶದಿಂದ ನಾವು ಈ ಸಿನಿಮಾ ಮಾಡುವುದಿಲ್ಲ. ಪ್ರೇಕ್ಷಕರು ನಮಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ, ಅವರಿಗೆ ಹೆಮ್ಮೆ ಎನಿಸುವಂತಹ ಅದ್ಭುತವಾದ ಕಥೆ ಸಿದ್ಧವಾದಾಗ ಮಾತ್ರ ನಾವು ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದಿದ್ದಾರೆ.

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳು ಯಶ್ ಅವರನ್ನು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಮಾಡಿದ ಸಿನಿಮಾ. ಅದು ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದೊಡ್ಡ ದಾರಿಯನ್ನು ಹಾಕಿಕೊಟ್ಟ ಹಾಗೂ ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಗುರುತು ಮೂಡಿಸಿದ ಸಿನಿಮಾ ಆಗಿದೆ. ‘ಕೆಜಿಎಫ್ 2’ ಸಿನಿಮಾದ ಅಂತ್ಯದಲ್ಲಿ ಕತೆ ಮುಂದುವರೆಯುವ ಸುಳಿವನ್ನು ನೀಡಲಾಗಿತ್ತು. ಅದೇ ಕಾರಣಕ್ಕೆ ಕಳೆದ ಕೆಲ ವರ್ಷಗಳಿಂದಲೂ ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ.

ಕೆಜಿಎಫ್ 3′ ಸಿನಿಮಾ ಬಗ್ಗೆ ನಟ ಯಶ್ ಹೇಳಿದ್ದೇನು?

TAGGED:What did actor Yash say about the movie KGF 3?
Share This Article
Facebook Twitter Copy Link Print
Previous Article ಸರ್ಕಾರಿ ಬಸ್ ಪಲ್ಟಿ –ಅದೃಷ್ಠವಷಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
Next Article ಪ್ರೇಯಸಿ ಕಣ್ಣೆದುರೇ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ!

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?