ನಿದ್ರೆ ಮಾಡುವಾಗ ಗಂಟಲಿನ ಸ್ನಾಯು ಸಡಿಲಗೊಂಡು ಶ್ವಾಸನಾಳ ಕಿರಿದಾಗುತ್ತದೆ. ಕುತ್ತಿಗೆಯಲ್ಲಿ ಕಾಣಿಸುವ ಬೊಜ್ಜು ಉಸಿರಾಟದ ಮಾರ್ಗ ಒತ್ತುವುದು, ಬೆನ್ನಿನ ಮೇಲೆ ಮಲಗದಿದಾಗ ನಾಲಿಗೆ ಹಿಮ್ಮುಕವಾಗಿ ಬಿದ್ದಾಗ ಈ ಗೊರಕೆ ಕಾಣಿಸಿಕೊಳ್ಳುತ್ತದೆ. ಮೂಗಿನ ಹೊಳ್ಳೆಯಲ್ಲಿ ಗಾಳಿ ಸಂಚಾರದಲ್ಲಿ ವ್ಯತ್ಯಯ ಉಂಟಾದಾಗ ಹಾಗೂ ಸೈನಸ್, ಅಲರ್ಜಿಯಿದ್ದರೆ, ಮಲಗುವ ಮುನ್ನ ಆಲ್ಕೋಹಾಲ್ ಸೇವನೆ ಮಾಡಿದ್ದರೆ ಗೊರಕೆ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.
ಗೊರಕೆಯನ್ನು ನಿಲ್ಲಿಸಲು ಏನು ಮಾಡಬೇಕು?
ನಿಮ್ಮ ಸಂಬಂಧಿಕರು ಅಥವಾ ಪ್ರೀತಿಪಾತ್ರರು ಗೊರಕೆ ಹೊಡೆಯುತ್ತಿದ್ದರೆ ಅವರ ಮಲಗುವ ಭಂಗಿಯನ್ನು ಬದಲಾಯಿಸಿ.
ನಿಮ್ಮ ದೇಹಕ್ಕೆ ಸರಿಸಮಾನವಾಗಿ ತೂಕವನ್ನು ಕಾಪಾಡಿಕೊಳ್ಳುವುದು ಗೊರಕೆ ಹೊಡೆಯುವುದನ್ನು ತಪ್ಪಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಮಲಗುವ ಮುನ್ನ ಮದ್ಯಪಾನ ಮಾಡುವುದನ್ನು ತಪ್ಪಿಸಿಸುವುದರಿಂದ ಇದು ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
ಮೂಗಿನ ಮಾರ್ಗಗಳನ್ನು ಸ್ಪಷ್ಟವಾಗಿ ಇರಿಸಲು ಸಲೈನ್ ಸ್ಪ್ರೇಗಳು ಅಥವಾ ಆರ್ದ್ರಕವನ್ನು ಬಳಸಿ.
ಧೂಮಪಾನ ಮಾಡುವುದನ್ನು ಬಿಡುವುದರಿಂದ ಇದು ವಾಯುಮಾರ್ಗಗಳನ್ನು ಉಬ್ಬಿಸುತ್ತದೆ ಇದರಿಂದ ಗೊರಕೆಯನ್ನು ನಿಲ್ಲಿಸಬಹುದು.
ನಿದ್ದೆ ಮಾಡುವಾಗ ತಲೆ ಆಕಾಶದ ಮುಖವಾಗಿ ನೋಡುವಂತೆ ಇರಲಿ ಇವು ವಾಯುಮಾರ್ಗಗಳು ತೆರೆದಿರಲು ಸಹಾಯ ಮಾಡುತ್ತದೆ.
ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
ಗೊರಕೆಯು ಅತಿಯಾಗಿ ಉಸಿರು ಕಟ್ಟುವಂತಿದ್ದರೆ ಅಥವಾ ಹಗಲಿನಲ್ಲಿ ಅತಿಯಾದ ಆಯಾಸವಾಗುತ್ತಿದ್ದರೆ, ಇದು ‘ಸ್ಲೀಪ್ ಅಪ್ನಿಯಾ’ ಎಂಬ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಲಹೆ ಅತ್ಯಗತ್ಯ,