ನಟಿ ಶ್ರೀಲೀಲಾ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ತುಂಬಾ ಮಂದಿ ಮಹಿಳೆಯರು ಸೇರಿದ್ದರು. ಆ ಸಮಯದಲ್ಲಿ, ಋತುಚಕ್ರದ ಬಗ್ಗೆ ನಟಿ ಮಾತನಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಪೀರಿಯಡ್ಸ್ ಕಾರಣಕ್ಕೆ ಸಮಸ್ಯೆ ಎದುರಿಸಿದ ಸಂದರ್ಭ ಇದ್ಯಾ ಎನ್ನುವ ಪ್ರಶ್ನೆ ಎದುರಾಗಿತ್ತು. ಆಗ ಶ್ರೀಲೀಲಾ ಹೇಳಿರುವ ಮಾತು ಇದೀಗ ಪರ-ವಿರೋಧಕ್ಕೆ ಕಾರಣವಾಗಿದೆ.
ಮುಟ್ಟು ಎನ್ನುವುದೇ ನಮಗೆ ಸಮಸ್ಯೆ ಆಗಬಾರದು. ನಾನು ಇದುವರೆಗೆ ಮಾಡಿರುವ ಸಾಕಷ್ಟು ಹಿಟ್ ಸಾಂಗ್ ವೇಳೆ ನನಗೂ ಋತುಸ್ರಾವ ಆಗಿತ್ತು. ಅಂತಹ ಸಾಂಗ್ಸ್ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿವೆ. ಪೀರಿಯಡ್ಸ್ ಅನ್ನೋದು ಒಬ್ಬ ಮಹಿಳೆಗೆ ನೆಪ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಮಹಿಳೆಯರು ತಮ್ಮ ಶಾರೀರಿಕ, ಮಾನಸಿಕ ಸಮಸ್ಯೆಗಳನ್ನು ಮೀರಿ ಮುಂದೆ ಸಾಗಬೇಕು. ಪುರುಷನಿಗೆ ಸಮನಾಗಿ ಮಹಿಳೆಯರಿಗೆ ಅವಕಾಶ, ಸಮಾನ ಅಧಿಕಾರ, ಸಮಾನ ಹಕ್ಕು ಕೇಳುವಾಗ, ಪಿರಿಯಡ್ಸ್ ಸಮಸ್ಯೆ ನೆಪವೊಡ್ಡಿ ಹಿಂದೆ ಉಳಿಯುವುದು ಸರೀನಾ ಎಂದು ಪ್ರಶ್ನಿಸಿರೋ ನಟಿ, ನಮ್ಮ ಶಾರೀರಿಕ, ಮಾನಸಿಕ ಸಮಸ್ಯೆ ಮೀರಿ ಸಾಗಬೇಕು. ನಮ್ಮನ್ನು ನಾವು ಪುಶ್ ಮಾಡಬೇಕು ಎಂದಿದ್ದಾರೆ.
ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ಬುಟ್ಟ ಬೊಮ್ಮ ಸಾಂಗ್ ; ಈ ಹಾಡು ಕೇಳಿದರೆ ನೀವೂ ಕುಣಿಯುವುದು ಗ್ಯಾರಂಟಿ