https://youtube.com/shorts/G0oN8U59OVY?si=rbIwZ4fR9fKtFNQ-
newsics.com
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನಲ್ಲಿರುವ ಸುಮಾರು 400 ಕೆಜಿ ಸಂವರ್ಧಿತ ಯುರೇನಿಯಂ ಅನ್ನು ವಶಪಡಿಸಿಕೊಳ್ಳಲು ಮತ್ತು ಅದರ ಅಣ್ವಸ್ತ್ರ ಸಾಮರ್ಥ್ಯವನ್ನು ನಾಶಮಾಡಲು ಅತ್ಯಂತ ಅಪಾಯಕಾರಿ ಮತ್ತು ರಹಸ್ಯ ಸೇನಾ ಕಾರ್ಯಾಚರಣೆಯ ಯೋಜನೆಯನ್ನು ರೂಪಿಸಿದ್ದಾರೆ.
ಯುರೇನಿಯಂ ವಶ ಸಾಧ್ಯವಾಗದಿದ್ದರೆ ಅದರ ನಾಶ ಮಾಡುತ್ತೇವೆ ಎಂದು ಹೊರಟರೂ, ದೊಡ್ಡದೊಡ್ಡ ಟ್ಯಾಂಕ್‌ಗಳಲ್ಲಿ ಅನಿಲದ ರೂಪದಲ್ಲಿ ಶೇಖರಿಸಿಟ್ಟಿರುವ ಅದು ಗಾಳಿಯೊಂದಿಗೆ ಬೆರೆಯುವ ಅಪಾಯವಿದೆ. ಹೀಗೆ ಸೋರಿಕೆಯಾದ ವಿಕಿರಣದಿಂದ ಸುತ್ತಲಿನ ನೂರಾರು ಕಿ.ಮೀ. ಪ್ರದೇಶದಲ್ಲಿ ವಾಸವಿರುವವರ ಆರೋಗ್ಯದ ಮೇಲೆ ಗಂಭೀರ ಹಾಗೂ ದೀರ್ಘಕಾಲಿಕ ಪರಿಣಾಮ ಉಂಟಾಗುತ್ತದೆ. ಸಾಮೂಹಿಕ ಸಾವಿಗೂ ಈ ಮೂಲಕ ಮುನ್ನುಡಿ ಬರೆದಂತೆ.
ತನ್ನ ಪರಮಾಣು ಯೋಜನೆಗಳು ಅಣ್ವಸ್ತ್ರ ತಯಾರಿಯ ಉದ್ದೇಶ ಹೊಂದಿಲ್ಲ ಎಂದು ಹೇಳಿಕೊಳ್ಳುವ ಇರಾನ್ ಬಳಿ ಶೇ.60ರಷ್ಟು ಸಂಸ್ಕರಿಸಿದ 440.9 ಕೆ.ಜಿ. ಯುರೇನಿಯಂ ಇದ್ದು, ಸಂಸ್ಕರಣೆ ಪ್ರಮಾಣ ಶೇ.90 ತಲುಪಬೇಕು, ಇದರಿಂದ 10 ಅಣುಬಾಂಬ್‌ಗಳನ್ನು ತಯಾರಿಸಬಹುದು ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಹೇಳಿದೆ.
ವಾಯುದಾಳಿಯಿಂದಾಗುವ ಅಪಾಯ ತಪ್ಪಿಸಲು ಭೂದಾಳಿಗಿಳಿದರೆ, ಅದೂ ಸುಲಭವಿಲ್ಲ. ಜತೆಗೆ ಸುರಂಗಗಳನ್ನು ತಲುಪಲು ವಿಶೇಷ ಸಲಕರಣೆಗಳನ್ನೂ ಹೊತ್ತೊಯ್ಯಬೇಕು. ಒಂದೊಮ್ಮೆ ಯುರೇನಿಯಂ ಸಿಕ್ಕರೂ ಅದನ್ನು ಅಮೆರಿಕಕ್ಕೆ ಹೊತ್ತೊಯ್ಯುವುದು ಬಹುದೊಡ್ಡ ಸವಾಲು.