https://youtube.com/shorts/w77Qj39UtDA?si=G-t7V0TrkmzYuWQ5
newsics.com
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. . ತಮಿಳುನಾಡು ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಟಿವಿಕೆ ಸಂಸ್ಥಾಪಕ, ನಟ ದಳಪತಿ ವಿಜಯ್, ಪರೆಂಬೂರಿನ ಬಳಿಕ ಇಂದು ಪೂರ್ವ ತಿರುಚ್ಚಿ ಕ್ಷೇತ್ರದಲ್ಲಿಯೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ವಿಜಯ್ ವಿಮಾನ ನಿಲ್ದಾಣದಿಂದ ರೋಡ್ಶೋ ನಡೆಸಿದರು. ಈ ವೇಳೆ, ತಮ್ಮ ನೆಚ್ಚಿನ ನಾಯಕನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
ಬಳಿಕ ವಿಜಯ್ ನಾಪತ್ರ ಸಲ್ಲಿಕೆ ಮಾಡಿದರು. ತಿರುಚ್ಚಿಯಲ್ಲಿ ವಿಜಯ್ ಎಸ್ ಇರುದಯರಾಜ್, ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಎಐಎಡಿಎಂಕೆ ಸಂಸ್ಥಾಪಕ ಎಂಜಿ ರಾಮಚಂದ್ರನ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.