https://youtube.com/shorts/b7DblvgZf1A?si=BCR0sxsn8Xzh1cnn
newsics.com
ವಂದೇ ಭಾರತ್ ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಟಾಗ ಇಬ್ಬರು ಮಹಿಳೆಯರು ತಮ್ಮ ಕೈಜೋಡಿಸಿ ರೈಲನ್ನು ನಿಲ್ಲಿಸಲು ಲೋಕೋ ಪೈಲಟ್‌ಗೆ ವಿನಂತಿ ಮಾಡಿಕೊಂಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವ್ಯಾಪಕ ಚರ್ಚೆ ಪರ ವಿರೋಧವಾಗಿ ನಡೆಯುತ್ತಿದೆ.
ಅವರ ಅಸಹಾಯ ಸ್ಥಿತಿ ಕಂಡು ಪೈಲಟ್‌ನ ಮನಸ್ಸು ಕರಗಿ ಓಡುತ್ತಿದ್ದ ರೈಲನ್ನು ನಿಧಾನಗೊಳಿಸಿದರು.
ವಿಡಿಯೊದಲ್ಲಿ ಕಾಣುವಂತೆ, ವೇಗ ಪಡೆದುಕೊಂಡಿದ್ದ ರೈಲು ಏಕಾಏಕಿ ನಿಧಾನಗೊಳ್ಳುತ್ತದೆ. ಮಹಿಳೆಯರು ರೈಲಿಗೆ ಹತ್ತಿದರೋ ಇಲ್ಲವೋ ಸ್ಪಷ್ಟವಿಲ್ಲ, ಆದರೆ ಒಂದು ಕಡೆ ಪೈಲಟ್‌ನ ಗುಣಕ್ಕೆ ಕೆಲವರು ಹೊಗಳುವವರು ಇದ್ದರೆ, ಇನ್ನೊಂದು ಕಡೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಬೈಯುತ್ತಿದ್ದಾರೆ.