https://youtube.com/shorts/qIu1k1AjcVg?si=asT_CsSQI4v14g8C
newsics.com
ಮಹಾವೀರ ಜಯಂತಿಯ ಸರ್ಕಾರಿ ರಜೆ ಬದಲಾವಣೆಯಾಗಿದೆ. ಈ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮಾರ್ಚ್ 31 ರಂದು ಇದ್ದ ರಜೆಯನ್ನು ಮಾರ್ಚ್ 30 ಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ.
2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಅಧಿಸೂಚನೆಯಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ಮಾರ್ಚ್ 31 ರ ಮಂಗಳವಾರ ಬದಲಾಗಿ ಮಾರ್ಚ್ 30ರ ಸೋಮವಾರ ಎಂದು ಮಾರ್ಪಡಿಸಲಾಗಿದೆ. ಈ ರಜೆಯನ್ನು ನೆಗೋಷಿಯಬಲ್ ಇನ್ಸುಮೆಂಟ್ ಆಕ್ಟ್ ಅನ್ವಯವು ಸಹ ಘೋಷಿಸಿದೆ ಎಂದು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್.ಆರ್ ಆದೇಶದಲ್ಲಿ ತಿಳಿಸಿದ್ದಾರೆ.
ದಿನಾಂಕ ದಿನ
ಹಳೆಯ ದಿನಾಂಕ 31.03.2026 ಮಂಗಳವಾರ
ಹೊಸ (ಪರಿಷ್ಕೃತ) ದಿನಾಂಕ 30.03.2026 ಸೋಮವಾರ
ಪ್ರಮುಖ ಅಂಶಗಳು:
ಎನ್‌ಐ ಆಕ್ಟ್ ಅನ್ವಯ: ಈ ಪರಿಷ್ಕೃತ ರಜೆಯು ನೆಗೋಷಿಯಬಲ್ ಇನ್ಸ್‌ಟ್ರುಮೆಂಟ್ ಆಕ್ಟ್ (Negotiable Instruments Act, 1881) ಅನ್ವಯವೂ ಜಾರಿಯಾಗಲಿದ್ದು, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೂ ಇದು ಅನ್ವಯವಾಗಲಿದೆ.
ಅಧಿಕೃತ ಆದೇಶ: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಬಾಣದರಂಗಯ್ಯ ಎನ್.ಆರ್. ಅವರು ರಾಜ್ಯಪಾಲರ ಆಜ್ಞಾನುಸಾರ ಈ ಆದೇಶವನ್ನು ಹೊರಡಿಸಿದ್ದಾರೆ.
ಸೂಚನೆ: ಈ ಬದಲಾವಣೆಯ ಕುರಿತು ರಾಜ್ಯದ ಎಲ್ಲಾ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಈಗಾಗಲೇ ಮಾಹಿತಿ ರವಾನಿಸಲಾಗಿದೆ.
ಈ ಬದಲಾವಣೆಯಿಂದಾಗಿ ಮಾರ್ಚ್ ಅಂತ್ಯದಲ್ಲಿ ಸತತ ರಜೆಗಳು ಲಭ್ಯವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಈ ಹೊಸ ವೇಳಾಪಟ್ಟಿಗೆ ಅನುಗುಣವಾಗಿ ಯೋಜಿಸಿಕೊಳ್ಳಲು ಕೋರಲಾಗಿದೆ.
https://www.newsics.com/2026/03/29/dont-ignore-a-common-cough-it-can-lead-to-a-serious-illness/