https://youtube.com/shorts/8vXYZAagRTI?si=TOMvue_f8l6FavIl
newsics.com
ನಮ್ಮ ದೇಶ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ನಿರ್ಧಾರವನ್ನು ಸಮರ್ಥಿಸಿಕೊಂಡ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಅವರು, ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವು ಪ್ರಬಲವಾದ ಮಿಲಿಟರಿ ಅಗತ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿರುವುದಾಗಿ ದಕ್ಷಿಣ ಕೊರಿಯಾದ ಸರ್ಕಾರಿ ಸ್ವಾಮ್ಯದ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ(ಕೆಸಿಎನ್‌ಎ) ತಿಳಿಸಿದೆ.
ಕೆಸಿಎನ್‌ಎ ವರದಿ ಮಾಡಿದ ಹೇಳಿಕೆಯಲ್ಲಿ, ಮಂಗಳವಾರ ಉತ್ತರ ಕೊರಿಯಾದ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಉದ್ದೇಶಿಸಿ ಕಿಮ್ ಮಾಡಿದ ಭಾಷಣದಲ್ಲಿ, ಅಮೆರಿಕವು ವಿವಿಧ ಪ್ರದೇಶಗಳಲ್ಲಿ “ಭಯೋತ್ಪಾದನೆ ಮತ್ತು ಆಕ್ರಮಣಗಳನ್ನು” ನಡೆಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇರಾನ್ ವಿರುದ್ಧ ವಾಷಿಂಗ್ಟನ್ ನಡೆಸುತ್ತಿರುವ ಸಂಘರ್ಷವನ್ನು ಉಲ್ಲೇಖಿಸಿದ ಕಿಮ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ.
“ಒಂದು ದೇಶದ ಘನತೆ, ಆಸಕ್ತಿ ಮತ್ತು ಅಂತಿಮ ವಿಜಯವನ್ನು ಅತ್ಯಂತ ಶಕ್ತಿಶಾಲಿ ಶಕ್ತಿಯಿಂದ ಮಾತ್ರ ಖಾತರಿಪಡಿಸಬಹುದು” ಎಂದು ಕಿಮ್ ಹೇಳಿರುವುದಾಗಿ ಕೆಸಿಎನ್‌ಎ ವರದಿ ಮಾಡಿಗೆ.
“ಶತ್ರುಗಳು ಮುಖಾಮುಖಿಯಾಗಲಿ ಅಥವಾ ಶಾಂತಿಯುತ ಸಹಬಾಳ್ವೆಯನ್ನು ಆರಿಸಿಕೊಳ್ಳಲಿ, ಅದು ಅವರ ಆಯ್ಕೆಯಾಗಿದೆ ಮತ್ತು ನಾವು ಯಾವುದೇ ಆಯ್ಕೆಗೆ ಪ್ರತಿಕ್ರಿಯಿಸಲು ಸಿದ್ಧರಿದ್ದೇವೆ” ಎಂದಿದ್ದಾರೆ.
ಉತ್ತರ ಕೊರಿಯಾದ “ರಕ್ಷಣಾತ್ಮಕ ಪರಮಾಣು ಶಸ್ತ್ರಾಸ್ತ್ರ”ವನ್ನು ಮತ್ತಷ್ಟು ಮುನ್ನಡೆಸುವುದಾಗಿ ಮತ್ತು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಭದ್ರತೆಗೆ “ಕಾರ್ಯತಂತ್ರದ ಬೆದರಿಕೆಗಳನ್ನು” ಎದುರಿಸಲು ಅದರ ಪರಮಾಣು ಪಡೆಗಳಿಗೆ “ತ್ವರಿತ ಮತ್ತು ನಿಖರವಾದ” ಪ್ರತಿಕ್ರಿಯೆಯನ್ನು ಕಾಯ್ದುಕೊಳ್ಳುವುದಾಗಿ ಅವರು ಪ್ರತಿಜ್ಞೆ ಮಾಡಿದರು ಎಂದು ಕೆಸಿಎನ್‌ಎ ವರದಿ ತಿಳಿಸಿದೆ.