Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಐಷಾರಾಮಿ ಫಾರ್ಚೂನರ್ ಕಾರನ್ನು ಸಮುದ್ರದ ಉಪ್ಪು ನೀರಿನಿಂದ ತೊಳೆದ ಹೊಟೇಲ್ ಸಿಬ್ಬಂದಿ!
ದೇಶಪ್ರಮುಖ

ಐಷಾರಾಮಿ ಫಾರ್ಚೂನರ್ ಕಾರನ್ನು ಸಮುದ್ರದ ಉಪ್ಪು ನೀರಿನಿಂದ ತೊಳೆದ ಹೊಟೇಲ್ ಸಿಬ್ಬಂದಿ!

Share
1 Min Read
SHARE

https://youtube.com/shorts/1G3iDuCfqaQ?si=Tja2ncvA4iaSoDUf

newsics.com

ಗೋವಾದ ಪ್ರಸಿದ್ಧ ವಾಗೇಟರ್ ಕಡಲತೀರದಲ್ಲಿ, ಹೋಟೆಲ್ ಸಿಬ್ಬಂದಿಯೊಬ್ಬರು ಪ್ರವಾಸಿಗರೊಬ್ಬರ ಐಷಾರಾಮಿ ಫಾರ್ಚೂನರ್ ಕಾರನ್ನು ಸಮುದ್ರದ ಉಪ್ಪು ನೀರಿನಿಂದ ತೊಳೆಯಲು ಹೋಗಿ ಅನಾಹುತ ಸೃಷ್ಟಿಸಿದ್ದಾರೆ.

ಈ ಘಟನೆ ವಾಗೇಟರ್ ಬೀಚ್‌ನಲ್ಲಿ ಮುಂಜಾನೆ ಈ ಘಟನೆ ಸಂಭವಿಸಿದ್ದು, ಗುಜರಾತ್ ನೋಂದಣಿಯ ಕಪ್ಪು ಬಣ್ಣದ ಟೊಯೋಟಾ ಫಾರ್ಚೂನರ್ ಕಾರು ಈ ಘಟನೆಯಲ್ಲಿ ಹಾಳಾದ ಐಷಾರಾಮಿ ಕಾರಾಗಿದೆ. ಅಹಮದಾಬಾದ್ ನಿವಾಸಿಯಾದ ಕಾರಿನ ಮಾಲೀಕರು ಅಂಜುನಾ–ವಾಗೇಟರ್ ಪ್ರದೇಶದ ಹೋಟೆಲ್‌ನಲ್ಲಿ ತಂಗಿದ್ದು, ರಾತ್ರಿ ಪಾರ್ಟಿ ಮುಗಿಸಿ ಹಿಂತಿರುಗಿದ ಬಳಿಕ ತಮ್ಮ ಕಾರಿನ ಕೀಲಿಗಳನ್ನು ಹೋಟೆಲ್ ಕೇರ್‌ಟೇಕರ್‌ಗೆ ಒಪ್ಪಿಸಿದ್ದರು. ಕಾರನ್ನು ವೃತ್ತಿಪರವಾಗಿ ತೊಳೆಯಲು ಹಣ ಹಾಗೂ ಟಿಪ್ ಸಹ ನೀಡಿದ್ದರು.

 

ಆದರೆ, ಕಾರನ್ನು ನಿಯಮಿತ ಕಾರ್ ವಾಶ್ ಕೇಂದ್ರಕ್ಕೆ ಕೊಂಡೊಯ್ಯುವ ಬದಲು, ಹೋಟೆಲ್ ಸಿಬ್ಬಂದಿ ಬೇಜವಾಬ್ದಾರಿಯಿಂದ ಅಸಾಂಪ್ರದಾಯಿಕ ವಿಧಾನವನ್ನು ಕಾರು ತೊಳೆಯಲು ಅನುಸರಿಸಿದ್ದಾರೆ. ಬೆಳಗಿನ ಜಾವ ಸುಮಾರು 5:30ರಿಂದ 6 ಗಂಟೆಯ ಸಮಯದಲ್ಲಿ ಕೇವಲ ಒಂದು ಬಕೆಟ್ ಮತ್ತು ಮಗ್ ಹಿಡಿದು ಕಾರನ್ನು ನೇರವಾಗಿ ವಾಗೇಟರ್ ಬೀಚ್‌ನ ಮರಳಿನ ಮೇಲೆ ಕೊಂಡೊಯ್ದು, ಸಮುದ್ರದ ಉಪ್ಪು ನೀರಿನಿಂದ ತೊಳೆಯಲು ಯತ್ನಿಸಿದರು.

ಈ ವೇಳೆ ಸಮುದ್ರದ ಅಲೆಗಳು ಬಹಳ ಎತ್ತರದಲ್ಲಿ ಬರುತ್ತಿರುವುದನ್ನು ಗಮನಿಸದೇ, ಸಿಬ್ಬಂದಿ ಕಾರನ್ನು ಇನ್ನಷ್ಟು ನೀರಿನತ್ತ ಸಾಗಿಸಿದ್ದಾರೆ. ಕೆಲವು ಕ್ಷಣಗಳಲ್ಲಿ ಕಾರು ಒದ್ದೆಯಾದ ಮರಳಿನಲ್ಲಿ ಹೂತು ಹೋಗಿದೆ. ನೀರಿನ ಉಬ್ಬರ ಹೆಚ್ಚಾದಂತೆ ನೀರಿನ ಮಟ್ಟ ಏರಿಕೆ ಕಂಡು, ಕೊನೆಗೆ ಕಾರಿನ ಬಾಗಿಲುಗಳ ಎತ್ತರದವರೆಗೂ ನೀರು ತಲುಪಿತು. ಈ ದೃಶ್ಯವನ್ನು ನೋಡಿದ ಸ್ಥಳೀಯರು ಮತ್ತು ಪ್ರವಾಸಿಗರು ಬೆಚ್ಚಿಬಿದ್ದು ತಕ್ಷಣ ಕ್ರಮ ಕೈಗೊಂಡರು.

ಘಟನೆ ಬಗ್ಗೆ ಮಾಹಿತಿ ತಿಳಿದುಕೊಂಡ ಅಂಜುನಾ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಜೆಸಿಬಿ ಯಂತ್ರದ ಸಹಾಯದಿಂದ ಸಾಕಷ್ಟು ಪ್ರಯತ್ನಗಳ ಬಳಿಕ ಕಾರನ್ನು ಸಮುದ್ರದಿಂದ ಹೊರತೆಗೆದರು. ಅದೃಷ್ಟವಶಾತ್, ದೊಡ್ಡ ಅನಾಹುತ ತಪ್ಪಿದರೂ, ಕಾರು ಭಾಗಶಃ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ಅಜಾಗರೂಕತೆ ಮತ್ತು ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

https://www.newsics.com/2026/03/24/use-of-ballot-papers-in-local-body-elections-bill-passed-in-the-legislative-assembly/

TAGGED:Hotel staff washes luxury Fortuner car with salt water!
Share This Article
Facebook Twitter Copy Link Print
Previous Article ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ
Next Article ಬೀದರ್ ನಲ್ಲಿ MBBS ವಿದ್ಯಾರ್ಥಿ ಆತ್ಮ*ಹತ್ಯೆ

Popular Posts

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read

You Might Also Like

ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read
ಪ್ರಮುಖ

ಪತಿ ಜೊತೆ ವೀಕೆಂಡ್ ಗೆ ಹೋಗಿದ್ದ ಪತ್ನಿ ಹೋಂಸ್ಟೇಯಲ್ಲೇ ನಿಗೂಢ ಸಾವು

2 Min Read
ಪ್ರಮುಖ

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?