https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಹಾಂಕಾಂಗ್:ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಇಂದು 20ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಸಂಘರ್ಷದ ನಡುವೆಯೂ ಇದುವರೆಗೆ ತೈಲ ಟ್ಯಾಂಕರ್‌ಗಳು ಸೇರಿದಂತೆ ಸುಮಾರು 90 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಆದರೆ ಇದೀಗ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ವ್ಯವಸ್ಥೆ ಜಾರಿಗೆ ತಂದಿದೆ.
ಖಾಸಗಿ ತೈಲ ಟ್ಯಾಂಕರ್‌ಗಳು ಈ ಮಾರ್ಗದ ಮೂಲಕ ಸುರಕ್ಷಿತವಾಗಿ ಸಾಗಬೇಕೆಂದರೆ, ಕಂಪನಿಗಳು 2 ಮಿಲಿಯನ್ ಯುಎಸ್ ಡಾಲರ್ ಎಂದರೆ 18 ಕೋಟಿ ರೂಪಾಯಿ ಟೋಲ್ ಪಾವತಿಸಬೇಕು ಎಂದು ವರದಿಯಾಗಿದೆ. ಆದರೆ, 18 ಕೋಟಿ ಪಾವತಿ ಮಾಡಿ ಅಲ್ಲಿಂದ ಹೊರಬಂದ ಹಡಗು ಯಾವ ದೇಶಕ್ಕೆ ಸೇರಿದ್ದು ಅನ್ನೋದರ ವಿವರ ತಿಳಿದುಬಂದಿಲ್ಲ.
ಲಾಯ್ಡ್ಸ್ ಲಿಸ್ಟ್‌ನ ವರದಿಯ ಪ್ರಕಾರ, ಇರಾನ್ ತನ್ನ ನೀರಿನಲ್ಲಿ “ಸುರಕ್ಷಿತ ಮಾರ್ಗ” ವನ್ನು ಸ್ಥಾಪಿಸಿದ್ದು, ಅನುಮೋದಿತ ಹಡಗುಗಳಿಗೆ ಮಾತ್ರ ಹಾದುಹೋಗಲು ಅವಕಾಶ ನೀಡುತ್ತದೆ ಮತ್ತು ಪ್ರತಿಯಾಗಿ ಅವುಗಳಿಗೆ ತೆರಿಗೆ ವಿಧಿಸಲಾಗುತ್ತಿದೆ.
ಭಾರತ, ಪಾಕಿಸ್ತಾನ, ಇರಾಕ್, ಮಲೇಷ್ಯಾ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ತಮ್ಮ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಇರಾನ್‌ನೊಂದಿಗೆ ನೇರವಾಗಿ ಮಾತುಕತೆ ನಡೆಸುತ್ತಿವೆ ಎಂದು ವರದಿ ಹೇಳುತ್ತದೆ.
https://www.newsics.com/2026/03/21/did-rishabh-unfollow-hombale/