https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಹಂಸಲೇಖ ಮತ್ತು ರವಿಚಂದ್ರನ್ ಅವರದ್ದು ಎವರ್ಗ್ರೀನ್ ಕಾಂಬಿನೇಷನ್. ಅವರಿಬ್ಬರು ಜೋಡಿಯಾಗಿ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಅವರ ನಡುವೆ ಮುನಿಸು ಉಂಟಾಗಿತ್ತು. ಆದರೆ ಈಗ ಅವರು ಒಂದಾಗಿದ್ದಾರೆ.
ಕೊನೆಗೂ ರವಿಚಂದ್ರನ್ ಹಾಗೂ ಹಂಸಲೇಖ ಅಭಿಮಾನಿಗಳ ಆಸೆ ಈಡೇರಿದೆ. ಸಿನಿಮಾ ಅಲ್ಲದೇ ಹೋದರೂ, ಇಬ್ಬರೂ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಕ್ರೇಜಿ ಬ್ರಹ್ಮ’ ಕಾನ್ಸರ್ಟ್ ಮೂಲಕ ಮತ್ತೆ ಸಿನಿಪ್ರೇಮಿಗಳನ್ನ, ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ಹಾಗಂತ ಇಲ್ಲಿ ಕೇವಲ ಹಾಡುಗಳಷ್ಟೇ ಇರೋದಿಲ್ಲ. ಒಂದೊಂದು ಹಾಡಿನ ಹಿಂದೆನೂ ಅದರದ್ದೊಂದು ಅನುಭವ ಇರುತ್ತೆ. ಈ ಬಗ್ಗೆ ಮಾಹಿತಿ ನೀಡುವ ವೇಳೆ ಇಬ್ಬರೂ ಕಾರ್ಯಕ್ರಮದ ಬಗ್ಗೆ, ತಮ್ಮಿಬ್ಬರ ಜರ್ನಿ ಬಗ್ಗೆ, ದೂರ ಆಗಿದ್ದರ ಬಗ್ಗೆ ಮನಸಾರೆ ಮಾತಾಡಿದ್ದಾರೆ.
ಸೋನೆ ಸೋನೆ’ ಹಾಡು ರಚಿಸುವಾಗ ಹಂಸಲೇಖ ಮತ್ತು ರವಿಚಂದ್ರನ್ ನಡುವೆ ವೈಮನಸ್ಸು ಉಂಟಾಗಿತ್ತು. ಆ ಸಂದರ್ಭವನ್ನು ರವಿಚಂದ್ರನ್ ಅವರು ಈಗ ವಿವರಿಸಿದ್ದಾರೆ. ‘ಆಗಲೇ ನನ್ನ ಮತ್ತು ಇವರ ನಡುವೆ ಚಿಕ್ಕ ಬೆಂಕಿ ಶುರುವಾಗಿತ್ತು. ಹಾಡಿಗೆ ಹಂಸಲೇಖ ಅವರು 40 ಪಲ್ಲವಿ ಬರೆದರು. ನಾನು ಎಲ್ಲವನ್ನೂ ತಿರಸ್ಕರಿಸಿದೆ. ಕೊನೆಗೆ ಮೊದಲು ಬರೆದಿದ್ದನ್ನೆ ಒಪ್ಪಿಕೊಂಡೆ. ನಮ್ಮ ಸ್ನೇಹ ನಮ್ಮ ಕೆಲಸದಲ್ಲಿ ಕಾಣಿಸುತ್ತದೆ’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.
ಇದೇ ವೇಳೆ ರವಿಚಂದ್ರನ್ ಹಾಗೂ ಹಂಸಲೇಖ ಇಬ್ಬರೂ ದೂರ ಆದಾಗ ಅಕ್ಕಪಕ್ಕದವರೇ ಸಂಭ್ರಮಿಸಿದ್ದರು ಎಂದೂ ಹೇಳಿದ್ದಾರೆ. ಸುಮಾರು ಜನರು ನಮ್ಮಿಬ್ಬರನ್ನು ಕೇಳುತ್ತಿದ್ದಾರೆ. ನಮ್ಮ ಹೃದಯದಲ್ಲಿ ಬಿರುಕು ಬಿಟ್ಟಾಗ ಅಕ್ಕಪಕ್ಕದವರು ಸಂಭ್ರಮಿಸಿದ್ದೇ ಜಾಸ್ತಿ. ನಿಮ್ಮಲ್ಲಿ ಬಿರುಕು ಬೇಕು ಸೇರ್ಕೊಳ್ಳಿ ಅಂತ ಹೇಳೋದಕ್ಕೆ ಇಷ್ಟು ಜನ ಸೇರ್ಕೊಂಡಿದ್ದು ಇದೇ ಮೊದಲು. ಇವತ್ತಿಗೂ ನಮ್ಮಿಬ್ಬರ ಹಾಡುಗಳೇ ಹೆಚ್ಚು ರೀಲ್ಸ್ ಆಗುತ್ತಿವೆ. ಇವತ್ತಿಗೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್, ಬೆಸ್ಟ್ ಲವರ್ಸ್. ಅದರಲ್ಲಿ ಎರಡು ಮಾತೇ ಇಲ್ಲ ಎಂದಿದ್ದಾರೆ.
https://www.newsics.com/2026/03/21/huge-reduction-in-the-price-of-semaglutide-medicine-in-india/