newsics.com
ಸ್ಯಾಂಡಲ್‌ವುಡ್‌ನಲ್ಲಿ ‘ಶೇಕ್ ಇಟ್ ಪುಷ್ಪವತಿ’ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೆಜ್ಜೆ ಹಾಕಿದ್ದ ನಟಿ ನಿಮಿಕಾ ರತ್ನಾಕರ್. ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವು ರಿಲೀಸ್ ಆಗಬೇಕಿದೆ. ಸಿನಿಮಾರಂಗದಲ್ಲಿ ಬೆಳೆಯುತ್ತಿರುವಾಗಲೇ ನಿಮಿಕಾ ರತ್ನಾಕರ್ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.
ನಿಮಿಕಾ ಮುಂಬೈ ಮೂಲದ ಉದ್ಯಮಿಯನ್ನು ವರಿಸಲಿದ್ದಾರೆ.ಮಾಡೆಲ್ ಆಗಿ ಮಿಂಚಿದ್ದ ನಿಮಿಕಾ ಅವರು ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.ಚಿತ್ರರಂಗದಲ್ಲಿ ಈಗಷ್ಟೇ ನೆಲೆಯೂರಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ನಿಮಿಕಾ ರತ್ನಾಕರ್ ನಟಿಸಿರೋ ಒಂದಷ್ಟು ಸಿನಿಮಾಗಳು ಬಿಡುಗಡೆಯ ಹಂತದಲ್ಲಿದೆ. ಇಂತಹ ಸಮಯದಲ್ಲಿಯೇ ನಿಮಿಕಾ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಇದೇ ಏಪ್ರಿಲ್ 6ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಮದುವೆ ತಯಾರಿಯಲ್ಲಿ ನಿಮಿಕಾ ರತ್ನಾಕರ್ ಬ್ಯುಸಿಯಾಗಿದ್ದಾರೆ.
ಸದ್ಯ ಮದುವೆ ಆಗುತ್ತಿರುವ ವಿಷಯ ಹೊರಬಿದ್ದಿದ್ದು, ವಿವಾಹ ಎಲ್ಲಿ ನಡೆಯಲಿದೆ? ವಿವಾಹವಾಗುತ್ತಿರುವ ಆ ಉದ್ಯಮಿ ಯಾರು? ಇನ್ನಿತ್ತರ ಮಾಹಿತಿಗಳನ್ನು ಅವರೇ ಬಹಿರಂಗ ಪಡಿಸುವ ಸಾಧ್ಯತೆಯಿದೆ.