https://youtube.com/shorts/JFDfzeRUAUw?si=UPiQjhCFAIkLXEhb
newsics.com
ಲಾಸ್ ಏಂಜಲೀಸ್: ಸಿನಿಮಾ ರಂಗದ ಅತ್ಯಂತ ಪ್ರತಿಷ್ಠಿತ ಗೌರವವಾದ 98ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಸಮಾರಂಭವು ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ಅದ್ಧೂರಿಯಾಗಿ ಜರುಗಿತು. ಸಿನ್ನರ್ಸ್ಗಾಗಿ ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಹ್ಯಾಮ್ನೆಟ್ ಚಿತ್ರಕ್ಕಾಗಿ ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಖ್ಯಾತ ಹಾಸ್ಯನಟ ಮತ್ತು ನಿರೂಪಕ ಕೋನಾನ್ ಒ’ಬ್ರಿಯಾನ್ ಈ ಕಾರ್ಯಕ್ರಮವನ್ನು ಎರಡನೇ ಬಾರಿಗೆ ಯಶಸ್ವಿಯಾಗಿ ನಡೆಸಿಕೊಟ್ಟರು.
ಅತ್ಯುತ್ತಮ ಪೋಷಕ ನಟ: ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಚಿತ್ರದ ಅಭಿನಯಕ್ಕಾಗಿ ಸೀನ್ ಪೆನ್ ಅವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಅತ್ಯುತ್ತಮ ಪೋಷಕ ನಟಿ: ‘ವೆಪನ್ಸ್’ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಆಮಿ ಮಡಿಗನ್ ಅವರಿಗೆ ಈ ಗೌರವ ಸಂದಿದೆ.
ಅತ್ಯುತ್ತಮ ಅನಿಮೇಟೆಡ್ ಸಿನಿಮಾ: ನೆಟ್ಫ್ಲಿಕ್ಸ್ನ ‘ಕೆ-ಪಾಪ್ ಡೆಮನ್ ಹಂಟರ್ಸ್’ ಅತ್ಯುತ್ತಮ ಅನಿಮೇಟೆಡ್ ಚಿತ್ರವಾಗಿ ಹೊರಹೊಮ್ಮಿದೆ.
ಅತ್ಯುತ್ತಮ ಕಾಸ್ಟ್ಯೂಮ್ ವಿನ್ಯಾಸ: ‘ಫ್ರಾಂಕೆನ್ಸ್ಟೈನ್’ ( ಚಿತ್ರಕ್ಕಾಗಿ ಕೇಟ್ ಹಾಲೆ ಅವರಿಗೆ ಪ್ರಶಸ್ತಿ ದೊರೆತಿದೆ.