https://youtube.com/shorts/JFDfzeRUAUw?si=UPiQjhCFAIkLXEhb
newsics.com
ತಮಿಳು ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ಸಾಕಷ್ಟು ಸುದ್ದಿ ಮಾಡಿತ್ತು. ವಿಜಯ್‌ಗೆ ನಟಿಯೊಂದಿಗೆ ವಿವಾಹೇತರ ಸಂಬಂಧವಿದೆ ಎಂದು ಸಂಗೀತಾ ಆರೋಪಿಸಿದ್ದು 25 ವರ್ಷಗಳ ದಾಂಪತ್ಯದ ನಂತರ ಬೇರ್ಪಡುವಿಕೆ ಎಲ್ಲರಿಗೂ ಆಘಾತವನ್ನುಂಟು ಮಾಡಿತ್ತು. ಏತನ್ಮಧ್ಯೆ ವಿಜಯ್ ಮಗ ಜೇಸನ್ ಪ್ರತಿಕ್ರಿಯೆಯೂ ಹೊರಹೊಮ್ಮಿದೆ.
ದಳಪತಿ ವಿಜಯ್ ಅವರ ಮಗ ಜೇಸನ್ ಸಂಜಯ್ ತಮ್ಮ ಹೆಸರಿನಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡಿದ್ದಾರೆ. ಅವರ ಮೂಲ ಹೆಸರು ಜೇಸನ್ ಸಂಜಯ್ ವಿ (ವಿಜಯ್) ಆದರೆ ಈಗ ಅವರು ಅದನ್ನು ಜೇಸನ್ ಸಂಜಯ್ ಎಸ್ ಎಂದು ಬದಲಾಯಿಸಿದ್ದಾರೆ. ತನ್ನ ತಂದೆಯ ಹೆಸರಿನ ಮೊದಲ ಅಕ್ಷರವನ್ನು ಬದಲಿಸಿ ತನ್ನ ತಾಯಿಯ ಹೆಸರಿನ ಮೊದಲ ಅಕ್ಷರವನ್ನು ಬಳಸುತ್ತಿದ್ದಾರೆ. ಈ ಬದಲಾವಣೆಯು ಜನರನ್ನು ಅಚ್ಚರಿಗೊಳಿಸಿದೆ. ಇದು ಮಗನು ತನ್ನ ತಾಯಿಯನ್ನು ಬೆಂಬಲಿಸುವ ಮಾರ್ಗ ಎಂದು ಹಲವರು ನಂಬುತ್ತಾರೆ. ಇನ್ನು ಚೊಚ್ಚಲ ನಿರ್ದೇಶನದಲ್ಲಿ ಜೇಸನ್ ನಿರತರಾಗಿದ್ದಾರೆ.
ಸಿಗ್ಮಾ’ ಹೆಸರಿನ ಸಿನಿಮಾನ ಜೇಸನ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿ ಸಿನಿಮಾ ರಿಲೀಸ್ ಆಗುವಾಗ ನಿರ್ದೇಶಕನ ಹೆಸರನ್ನು ದೊಡ್ಡದಾಗಿ ಹಾಕಲಾಗುತ್ತದೆ. ಈ ಮೊದಲು ಜೇಸನ್ ಅವರು ‘ಜೇಸನ್ ಸಂಜಯ್ ವಿ’ ಎಂದು ಇಟ್ಟುಕೊಳ್ಳಲು ನಿರ್ಧರಿಸಿದ್ದರು. ಆದರೆ, ಸದ್ಯದ ಬೆಳವಣಿಗೆಯಿಂದ ಅವರಿಗೆ ಬೇಸರ ಆಗಿದೆ. ಹೀಹಾಗಿ, ವಿ ಬದಲು ಎಸ್ (ತಾಯಿ ಸಂಗೀತಾ) ಸೇರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಸದ್ಯ ಈ ವಿಷಯ ಇನ್ನೂ ಅಧಿಕೃತ ಆಗಿಲ್ಲ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಈ ವಿಷಯ ತಿಳಿಯಲಿದೆ.
https://www.newsics.com/2026/03/14/meta-to-lay-off-16000-employees/