Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕ್ಷಣಾರ್ಧದಲ್ಲಿಯೇ ಗ್ಯಾಸ್ ಸಿಲಿಂಡರ್’ ಬುಕ್ ಮಾಡಲು ಜಸ್ಟ್ ಹೀಗೆ ಮಾಡಿ
ಕರ್ನಾಟಕಪ್ರಮುಖ

ಕ್ಷಣಾರ್ಧದಲ್ಲಿಯೇ ಗ್ಯಾಸ್ ಸಿಲಿಂಡರ್’ ಬುಕ್ ಮಾಡಲು ಜಸ್ಟ್ ಹೀಗೆ ಮಾಡಿ

Share
2 Min Read
SHARE

newsics.com

ಸರ್ಕಾರದ ಕಡೆಯಿಂದ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯದ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರು ಮುನ್ನೆಚ್ಚರಿಕಾ ಕ್ರಮವಾಗಿ ಅಡ್ವಾನ್ಸ್ ಎಲ್‌ಪಿಜಿ (LPG) ಬುಕಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ.

ಸಾಮಾನ್ಯವಾಗಿ ಜನರು ಫೋನ್ ಕರೆ ಮೂಲಕ ಗ್ಯಾಸ್ ಬುಕ್ ಮಾಡಲು ಇಷ್ಟಪಡುತ್ತಾರೆ. ಆದರೆ ಏಕಾಏಕಿ ಬುಕಿಂಗ್ ಸಂಖ್ಯೆ ಹೆಚ್ಚಾದ ಕಾರಣ ಫೋನ್ ಲೈನ್‌ಗಳು ಸದಾ ಬ್ಯುಸಿ ಬರುತ್ತಿವೆ. ಹಲವೆಡೆ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ಉದ್ದನೆಯ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಒಂದು ವೇಳೆ ನಿಮಗೂ ಫೋನ್ ಕರೆ ಮೂಲಕ ಬುಕಿಂಗ್ ಮಾಡಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ.

ಕ್ಷಣಾರ್ಧದಲ್ಲಿ ಬುಕಿಂಗ್ ಮಾಡಲು ಇಲ್ಲಿವೆ 4 ಸರಳ ವಿಧಾನಗಳು:
1 ವಾಟ್ಸಾಪ್ (WhatsApp) ಮೂಲಕ ಬುಕಿಂಗ್:
ಇದು ಅತ್ಯಂತ ಸುಲಭದ ದಾರಿ. ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಬುಕಿಂಗ್ ಮಾಡಬಹುದು:
Indane Gas: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7588888824 ಕ್ಕೆ ‘REFILL’ ಎಂದು ಟೈಪ್ ಮಾಡಿ ಕಳುಹಿಸಿ.
HP Gas: 9222201122 ಸಂಖ್ಯೆಗೆ ‘Hi’ ಅಥವಾ ‘Book’ ಎಂದು ಮೆಸೇಜ್ ಮಾಡಿ.
Bharat Gas: ಗ್ರಾಹಕರು 1800224344 ಸಂಖ್ಯೆಗೆ ‘Hi’ ಅಥವಾ ‘Book’ ಎಂದು ಕಳುಹಿಸುವ ಮೂಲಕ ಬುಕಿಂಗ್ ಖಚಿತಪಡಿಸಿಕೊಳ್ಳಬಹುದು.
SMS ಮೂಲಕ ಬುಕಿಂಗ್ (ಇಂಟರ್ನೆಟ್ ಇಲ್ಲದಿದ್ದರೂ ಸಾಧ್ಯ):
2 ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದರೆ ಸಾಮಾನ್ಯ SMS ಮೂಲಕ ಬುಕ್ ಮಾಡಿ:
Indane Gas: ನಿಮ್ಮ ನಂಬರ್‌ನಿಂದ 7718955555 ಕ್ಕೆ ‘REFILL’ ಎಂದು ಕಳುಹಿಸಿ.
Bharat Gas: ನೋಂದಾಯಿತ ಸಂಖ್ಯೆಯಿಂದ 7715012345 ಅಥವಾ 7718012345 ಕ್ಕೆ ‘LPG’ ಎಂದು ಟೈಪ್ ಮಾಡಿ ಕಳುಹಿಸಿ.
3 ಮಿಸ್ಡ್ ಕಾಲ್ (Missed Call) ಮೂಲಕ:
ಟೈಪಿಂಗ್ ಮಾಡಲು ಇಷ್ಟಪಡದವರಿಗೆ ಅಥವಾ ಹಿರಿಯ ನಾಗರಿಕರಿಗೆ ಇದು ಅತ್ಯುತ್ತಮ ಆಯ್ಕೆ:
Indane Gas: ಗ್ರಾಹಕರು 8454955555 ಕ್ಕೆ ಮಿಸ್ಡ್ ಕಾಲ್ ನೀಡಬಹುದು.
HP Gas: ಗ್ರಾಹಕರು 9493602222 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಆರ್ಡರ್ ಬುಕ್ ಮಾಡಬಹುದು.
4 ಮೊಬೈಲ್ ಆಯಪ್‌ಗಳು ಮತ್ತು ಪೇಮೆಂಟ್ ಗೇಟ್‌ವೇ:
ಸರ್ಕಾರದ UMANG ಆಯಪ್ ಮೂಲಕವೂ ಸೇವೆ ಪಡೆಯಬಹುದು. ಇದಲ್ಲದೆ Paytm, PhonePe, Google Pay ಮತ್ತು Amazon Pay ನಂತಹ ಆಯಪ್‌ಗಳಲ್ಲಿ ‘LPG Booking’ ಆಯ್ಕೆ ಇರುತ್ತದೆ. ಇಲ್ಲಿ ನೀವು ಬುಕಿಂಗ್ ಮಾಡುವುದರ ಜೊತೆಗೆ ಆನ್‌ಲೈನ್ ಪಾವತಿಯನ್ನೂ ಮಾಡಬಹುದು, ಇದರಿಂದ ಸಿಲಿಂಡರ್ ಬಂದಾಗ ಹಣ ನೀಡುವ ಕಿರಿಕಿರಿ ಇರುವುದಿಲ್ಲ.
ಎಚ್ಚರಿಕೆ: ಗ್ಯಾಸ್ ಬುಕಿಂಗ್ ಮಾಡುವಾಗ ಯಾವಾಗಲೂ ಕಂಪನಿಯ ಅಧಿಕೃತ ಸಂಖ್ಯೆಗಳನ್ನೇ ಬಳಸಿ. ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ವದಂತಿಗಳಿಗೆ ಕಿವಿಗೊಟ್ಟು ಪ್ಯಾನಿಕ್ ಬುಕಿಂಗ್ ಮಾಡುವ ಬದಲು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಮಾತ್ರ ಸಿಲಿಂಡರ್ ಆರ್ಡರ್ ಮಾಡಿ.

ಹಾರ್ಮುಜ್ ಜಲಸಂಧಿ ದಾಟಿ ಬಂತು ಭಾರತದ 2 ಗ್ಯಾಸ್ ಟ್ಯಾಂಕರ್

TAGGED:Just do this to book a gas cylinder in an instant!
Share This Article
Facebook Twitter Copy Link Print
Previous Article ಹಾರ್ಮುಜ್ ಜಲಸಂಧಿ ದಾಟಿ ಬಂತು ಭಾರತದ 2 ಗ್ಯಾಸ್ ಟ್ಯಾಂಕರ್
Next Article Health care ಈ ಸಸ್ಯದಿಂದ ಹೆಚ್ಚತ್ತೆ ಪುರುಷರ ಲೈಂಗಿಕ ಶಕ್ತಿ! ಸ್ತ್ರೀಯರಿಗೂ ಸಹಕಾರಿ

Popular Posts

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

You Might Also Like

ಪ್ರಮುಖ

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?