Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > T20 World Cup 2026: ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಐತಿಹಾಸಿಕ ದಾಖಲೆ ಮಾಡಿದ ಟೀಂ ಇಂಡಿಯಾ
ಕರ್ನಾಟಕದೇಶಪ್ರಮುಖ

T20 World Cup 2026: ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಐತಿಹಾಸಿಕ ದಾಖಲೆ ಮಾಡಿದ ಟೀಂ ಇಂಡಿಯಾ

Share
2 Min Read
SHARE

newsics.com

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಸಾಧನೆಯನ್ನು ಮಾಡಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ 2026 ಫೈನಲ್ ಪಂದ್ಯದಲ್ಲಿ ಭಾರತ ತಂಡವು ಅತ್ಯಧಿಕ ಸ್ಕೋರ್ ಗಳಿಸಿದೆ. ಇದರೊಂದಿಗೆ, ಟಿ20 ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ನ್ಯೂಜಿಲೆಂಡ್ ವಿರುದ್ಧದ ಈ ನಿರ್ಣಾಯಕ ಹಣಾಹಣಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ರನ್ ಮಳೆ ಸುರಿಸಿದ್ದಾರೆ. ನಿಗದಿತ 20 ಓವರ್‌ಗಳಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದ್ದು ಎದುರಾಳಿ ತಂಡಕ್ಕೆ ಕಠಿಣ ಗುರಿಯನ್ನು ನೀಡಿದೆ. ಇಡೀ ಟೂರ್ನಿಯುದ್ದಕ್ಕೂ ಸಿಕ್ಸರ್‌ಗಳ ಸುರಿಮಳೆಗೈದಿರುವ ಭಾರತ ಈಗ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆದಿದೆ.

ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯವೊಂದರಲ್ಲೇ ಭಾರತೀಯ ಬ್ಯಾಟ್ಸ್‌ಮನ್‌ಗಳು ಒಟ್ಟು 18 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಇದರಲ್ಲಿ ಸಂಜು ಸ್ಯಾಮ್ಸನ್ ಒಬ್ಬರೇ 8 ಸಿಕ್ಸರ್ ಸಿಡಿಸಿದರೆ ಜೊತೆಗೆ ಇಶಾನ್ ಕಿಶನ್ ಕೂಡ 4 ಬಾರಿ ಬಾಲ್ ಅನ್ನು ಬೌಂಡರಿ ಗೆರೆಯಿಂದ ಆಚೆ ಅಟ್ಟಿದರು. ಈ ಮೂಲಕ ಟಿ20 ವಿಶ್ವಕಪ್ 2026 ರ ಆವೃತ್ತಿಯಲ್ಲಿ ಭಾರತ ಒಟ್ಟು 106 ಸಿಕ್ಸರ್‌ಗಳನ್ನು ಪೂರೈಸಿದಂತಾಗಿದೆ.

ಇದೇ ವೇಳೆ, ಅಂತರಾಷ್ಟ್ರೀಯ ಟಿ20 ಸರಣಿಯೊಂದರಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಇದಕ್ಕೂ ಮೊದಲು 2025 ರಲ್ಲಿ ಬಲ್ಗೇರಿಯಾ ತಂಡ ಟ್ರೈ ಸೀರಿಸ್‌ನಲ್ಲಿ 78 ಸಿಕ್ಸರ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಕಳೆದ ಕೆಲವು ವರ್ಷಗಳಿಂದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಹಲವಾರು ಪ್ರಮುಖ ಸೋಲುಗಳನ್ನು ಅನುಭವಿಸಿತ್ತು. ಈ ಸೋಲುಗಳಲ್ಲಿ ಒಂದನ್ನು ಯಾವುದೇ ಭಾರತೀಯ ಎಂದಿಗೂ ಮರೆಯುವುದಿಲ್ಲ. 2023 ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಇದೇ ಮೈದಾನದಲ್ಲಿ ಭಾರತವನ್ನು ಸೋಲಿಸಿತು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಸುತ್ತಿನ ಪಂದ್ಯದಲ್ಲೂ ಭಾರತ ಸೋಲನ್ನು ಎದುರಿಸಬೇಕಾಯಿತು.

ಈ ಎಲ್ಲಾ ಕಾರಣಗಳಿಂದ ನರೇಂದ್ರ ಮೋದಿ ಸ್ಟೇಡಿಯಂಗೆ ಪನೌತಿ ಮೈದಾನ ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿತ್ತು. ಈಗ ಟೀಮ್ ಇಂಡಿಯಾ ತವರಿನಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಪನೌತಿ ಮೈದಾನ ಎಂಬ ಹಣೆಪಟ್ಟಿಯನ್ನು ಕಳಚಿ ಹಾಕಿದೆ. 2023 ರಲ್ಲಿ ಇದೇ ಮೈದಾನದಲ್ಲಿ ಅಭಿಮಾನಿಗಳಿಗೆ ಕಣ್ಣೀರು ಹಾಕುವಂತೆ ಮಾಡಿದ್ದ ಟೀಮ್ ಇಂಡಿಯಾ, ಇಂದು ಅವರನ್ನು ಸಂತೋಷದಿಂದ ಮನೆಗೆ ಹೋಗುವಂತೆ ಮಾಡಿದೆ.

ಟೆಹ್ರಾನ್‌ನಲ್ಲಿ ಕಪ್ಪು ಮಳೆ! ವಿಷಕಾರಿ ಪರಿಣಾಮದ ಎಚ್ಚರಿಕೆ

TAGGED:T20 World Cup 2026: Team India creates historic record in T20 World Cup final
Share This Article
Facebook Twitter Copy Link Print
Previous Article ಟೆಹ್ರಾನ್‌ನಲ್ಲಿ ಕಪ್ಪು ಮಳೆ! ವಿಷಕಾರಿ ಪರಿಣಾಮದ ಎಚ್ಚರಿಕೆ
Next Article ಮೊಬೈಲ್ ಕೊಡದಿದ್ದಕ್ಕೆ ಬೆಂಗಳೂರು ಬಾಲಕನ ವಿಚಿತ್ರ ವರ್ತನೆ: ಪೋಷಕರು ಕಂಗಾಲು

Popular Posts

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

1 Min Read

ಜೂನ್ 12ಕ್ಕೆ ರಾಗಿಣಿ ದ್ವಿವೇದಿ, ವರಲಕ್ಷ್ಮೀ ನಟನೆಯ ಪೊಲೀಸ್ ಕಂಪ್ಲೈಂಟ್ ರಿಲೀಸ್

1 Min Read

ICC ODI World Cup 2027ರ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ

1 Min Read

You Might Also Like

ಕರ್ನಾಟಕದೇಶಪ್ರಮುಖ

ನಾಳೆ ಈ ಸಮಯದಲ್ಲಿ ಸಾರ್ವಜನಿಕರಿಗೆ ಕೊಲ್ಲೂರು ಮೂಕಾಂಬಿಕೆ ದರ್ಶನವಿಲ್ಲ

1 Min Read
ಕರ್ನಾಟಕದೇಶಪ್ರಮುಖ

Rajya sabha election ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ

1 Min Read
ಕರ್ನಾಟಕಪ್ರಮುಖ

ದ್ವಿತೀಯ ಪಿಯುಸಿಯಲ್ಲಿ 4ನೇ ರ್‍ಯಾಂಕ್ ವಿಜೇತೆ ಅಭಿಜ್ಞಾ ಭಟ್ ಅನಾರೋಗ್ಯದಿಂದ ನಿಧನ

1 Min Read
ದೇಶಪ್ರಮುಖಮನರಂಜನೆ

ಶ್ರೀ ಕಲ್ಯಾಣ್ ಕುಮಾರ್ ಪವನ್ ಆಗಿದ್ದು ಹೇಗೆ? ಪವರ್ ಸ್ಟಾರ್ ಹೆಸರಿನ ಹಿಂದಿನ ಅಸಲಿ ಮ್ಯಾಜಿಕ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?