Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್
ಪ್ರಮುಖವಿದೇಶ

750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಇರಾನ್ ಮೇಲಿನ ದಾಳಿ ಇದೀಗ ಮದ್ಯಪ್ರಾಚ್ಯ ದೇಶಗಳ ಆತಂಕ ಹೆಚ್ಚಿಸಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯಾದ ಬೆನ್ನಲ್ಲೇ ಇರಾನ್ ಕೆರಳಿದೆ. ಇತ್ತ ದುಬೈ, ಅದುಧಾಬಿ, ಬಹ್ರೈನ್, ಸೌದಿ ಅರೇಬಿಯಾ ಸೇರಿದಂತೆ ಮದ್ಯಪ್ರಾಚ್ಯ ದೇಶಗಳ ಅಮೆರಿಕ ಸೇನಾ ನೆಲೆ, ಅಮೆರಿಕ ಕಚೇರಿಗಳ ಮೇಲೆ ದಾಳಿಮಾಡುತ್ತಿದೆ.
ಸೌದಿ ಅರೆಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ ನೆಡೆಸಿದೆ. ಈ ದಾಳಿಯಿಂದ ಸೌದಿ ಅರೆಬಿಯಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಜನ ಆತಂಕಗೊಂಡಿದ್ದಾರೆ. ರಿಯಾದ್‌ನಲ್ಲಿನ ದಾಳಿ ಬೆನ್ನಲ್ಲೇ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೋನಾಲ್ಡೋ ಸೌದ ಅರೆಬಿಯಾ ತೊರೆದಿದ್ದಾರೆ. ತಮ್ಮ 750 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಮೂಲಕ ಸೌದಿ ತೊರೆದೆ ಯೂರೋಪ್ ಸೇರಿಕೊಂಡಿದ್ದಾರೆ.
ಕುಟುಂಬ ಸಮೇತ ಸೌದಿ ತೊರೆದೆ ಕ್ರಿಸ್ಟಿಯಾನೋ
ಕ್ರಿಸ್ಟಿಯಾನೋ ರೋನಾಲ್ಡೋ ತಮ್ಮ ಕುಟುಂಬ ಸಮೇತ ಸೌದಿ ಅರೆಬಿಯಾ ತೊರೆದಿದ್ದಾರೆ. ಇರಾನ್ ಪ್ರತಿದಾಳಿಯಿಂದ ಯುನೈಟೆಡ್ ಅರಬ್ ಎಮಿರೈಟ್ಸ್ ದೇಶದಲ್ಲಿ ಅಸುರಕ್ಷಿತ ಆತಂಕ ಸೃಷ್ಟಿಯಾಗಿದೆ. ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ ಎಂದೇ ಗುರುತಿಸಿಕೊಂಡಿದ್ದ ದುಬೈ ಸೇರಿದಂತೆ ಯುಎಇ ಮೇಲೆ ಸತತ ದಾಳಿ ನಡೆಯುತ್ತಿದೆ.
2023ರಿಂದ ಸೌದಿಯಲ್ಲಿ ರೋನಾಲ್ಡೋ ವಾಸ
41 ವರ್ಷದ ಕ್ರಿಸ್ಟಿಯಾನೋ ರೋನಾಲ್ಡೋ 2023ರಿಂದ ಸೌದಿ ಅರೆಬಿಯಾದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಲ್ ನಾಸರ್ ಫುಟ್ಬಾಲ್ ಕ್ಲಬ್. 2023ರಲ್ಲಿ ರೋನಾಲ್ಡೋ ಅಲ್ ನಾಸರ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಸೌದಿ ಲೀಗ್‌ನಲ್ಲಿ ಆಡುತ್ತಿರುವ ಕಾರಣ ರೋನಾಲ್ಡೋ ಸೌದಿಯಲ್ಲೇ ಬೀಡು ಬಿಟ್ಟಿದ್ದಾರೆ. ಇದೀಗ ಅಲ್ ನಾಸರ್ ಕ್ಲಬ್‌ಗೆ ತಾತ್ಕಾಲಿಕ ಬ್ರೇಕ್ ನೀಡಿ ಯೂರೋಪ್‌ಗೆ ಹಾರಿದ್ದಾರೆ. ಈ ಬೆಳವಣಿಗೆಯು ಸೌದಿ ಪ್ರೊ ಲೀಗ್‌ನಲ್ಲಿ ಆಡುತ್ತಿರುವ ಅಂತರಾಷ್ಟ್ರೀಯ ಆಟಗಾರರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ. ರೊನಾಲ್ಡೊ ಮಾತ್ರವಲ್ಲದೆ, ಸಾದಿಯೊ ಮಾನೆ, ಜೋ ಫೆಲಿಕ್ಸ್ ಮತ್ತು ಕರೀಂ ಬೆಂಜೆಮಾ ಅವರಂತಹ ದಿಗ್ಗಜ ಆಟಗಾರರು ಕೂಡ ಸೌದಿ ಲೀಗ್‌ನಲ್ಲಿದ್ದಾರೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಫೆಬ್ರವರಿ 28 ರಂದು ರಿಯಾದ್‌ನಲ್ಲಿ ಹಲವು ಸ್ಫೋಟಗಳು ನಡೆದಿದ್ದವು. ಇರಾನ್, ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ಘಟನೆಗಳ ನಂತರ ರೊನಾಲ್ಡೊ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ರೋನಾಲ್ಡೋ ಸೌದಿ ಫುಟ್‌ಬಾಲ್‌ನ ಜಾಗತಿಕ ರಾಯಭಾರಿಯೂ ಹೌದು. ಇದೀಗ ಅವರು ತಮ್ಮ ಗಲ್ಫ್‌ಸ್ಟ್ರೀಮ್ G650 ಮಾಡೆಲ್‌ನ ಖಾಸಗಿ ಜೆಟ್‌ನಲ್ಲಿ ಸೌದಿ ಬಿಟ್ಟಿದ್ದಾರೆ. ಈ ಜೆಟ್‌ನ ಬೆಲೆ ಬರೋಬ್ಬರಿ 67 ಮಿಲಿಯನ್ ಪೌಂಡ್, ಅಂದರೆ ಸುಮಾರು 750 ಕೋಟಿ ರೂಪಾಯಿ. ‘ಹಾರುವ ಅರಮನೆ’ ಎಂದೇ ಖ್ಯಾತಿಯಾಗಿರುವ ಈ ಜೆಟ್, ವಿಶ್ವದ ಅತ್ಯಂತ ಐಷಾರಾಮಿ ಖಾಸಗಿ ವಿಮಾನಗಳಲ್ಲಿ ಒಂದು. ಇದರಲ್ಲಿ ಒಟ್ಟು 19 ಮಂದಿ ಪ್ರಯಾಣಿಸಬಹುದು. ತಡೆ ರಹಿತ 7,000 ಮೈಲಿಗಳಿಗಿಂತ ಹೆಚ್ಚು ದೂರ ಹಾರುವ ಸಾಮರ್ಥ್ಯ ಹೊಂದಿದೆ.

ಹೊರಗೆ ಬಂದರೆ ಅಪಾಯ ತಪ್ಪಿದ್ದಲ್ಲ, ಈ ಸಂಸ್ಥೆ ಕೊಟ್ಟಿದೆ ಅತೀದೊಡ್ಡ ವಾರ್ನಿಂಗ್!

TAGGED:Cristiano Ronaldo leaves Saudi Arabia in Rs 750 crore private jet after attack
Share This Article
Facebook Twitter Copy Link Print
Previous Article ಹೊರಗೆ ಬಂದರೆ ಅಪಾಯ ತಪ್ಪಿದ್ದಲ್ಲ, ಈ ಸಂಸ್ಥೆ ಕೊಟ್ಟಿದೆ ಅತೀದೊಡ್ಡ ವಾರ್ನಿಂಗ್!
Next Article ‘ಟಾಕ್ಸಿಕ್’ ಸಿನಿಮಾ ರಿಲೀಸ್ ಮುಂದಕ್ಕೆ: ಯಶ್ ಅಭಿಮಾನಿಗಳಿಗೆ ಶಾಕ್

Popular Posts

ವೆಂಕಟೇಶ್-ಕಲ್ಯಾಣ್ ರಾಮ್ ಜೊತೆ ಅನಿಲ್ ರವಿಪುಡಿ ಹೊಸ ಸಿನಿಮಾ ಆರಂಭ; ಕೀರ್ತಿ ಸುರೇಶ್ ಎಂಟ್ರಿ

1 Min Read

ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ: ಪೊಲೀಸ್ ಠಾಣೆಗೆ ಮುತ್ತಿಗೆ, ತೀವ್ರ ಪ್ರತಿಭಟನೆ

1 Min Read

ಪಶ್ಚಿಮ ಏಷ್ಯಾ ಯುದ್ಧಕ್ಕೆ ಅಂತ್ಯ? ಟ್ರಂಪ್–ಇರಾನ್ ಅಧ್ಯಕ್ಷರ ಐತಿಹಾಸಿಕ ಒಪ್ಪಂದ

1 Min Read

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read

You Might Also Like

ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read
ವಿದೇಶದೇಶ

ಫಿಫಾ ವಿಶ್ವಕಪ್: ಎಂಬಾಪೆ ದಾಖಲೆಯ ಬೇಟೆ, ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ ಭರ್ಜರಿ ಜಯ – Newsics

1 Min Read
ಕರ್ನಾಟಕಪ್ರಮುಖ

ಚಿನ್ನದ ಬೆಲೆ 13,875 ರೂ; ಬೆಳ್ಳಿ ಮತ್ತಷ್ಟು ಅಗ್ಗ; ಇಂದಿನ ಬೆಲೆ ಎಷ್ಟು?

1 Min Read
ಪ್ರಮುಖ

ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?