https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ಬೀಜಿಂಗ್: ಬಯಕೆ ಈಡೇರಿಸುವ ಕ್ಯಾಂಡಲ್ ಎಂದು ಹೇಳಿ ಆನ್‌ಲೈನ್ ಮೂಲಕ ಮೇಣದಬತ್ತಿ ಮಾರಾಟ ಮಾಡುತ್ತಿದ್ದ ಚೀನಾದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿ ಜುಫಾನ್‌ಳನ್ನು ಪೊಲೀಸರು ಬಂಧಿಸಿದ್ದಾರೆ.
ಕ್ಯಾಂಡಲ್ ಮಾರಾಟ ಮೂಲಕ ಸುಮಾರು 63 ಕೋಟಿ ರೂಪಾಯಿ ಗಳಿಸಿದ್ದಲ್ಲದೆ, ಜನರಿಗೆ ಮೋಸ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಲಿ ಜುಫಾನ್ ರಷ್ಯಾದ ರಿಯಾಲಿಟಿ ಶೋ The Battle of Psychics ನಲ್ಲಿ ಕಾಣಿಸಿಕೊಂಡ ಬಳಿಕ ಜನಪ್ರಿಯರಾಗಿದ್ದರು. ನಂತರ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳಿಸಿ, ತನ್ನ ಕ್ಯಾಂಡಲ್‌ಗಳನ್ನು ಪ್ರೀತಿ, ಹಣ, ಆರೋಗ್ಯ ಸಂಬಂಧಿ ಬೇಡಿಕೆಗಳನ್ನು ಈ ಕ್ಯಾಂಡಲ್‌ಗಳು ಈಡೇರಿಸುತ್ತವೆ ಎಂದು ಹೇಳಿಕೊಂಡಿದ್ದರು.
ಹರಳು, ಒಣಗಿದ ಹೂಗಳು ಮತ್ತು ಸುಗಂಧ ತೈಲಗಳನ್ನು ಬಳಸಿ ತಯಾರಿಸಿದ ಈ ಕ್ಯಾಂಡಲ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಒಬ್ಬ ವ್ಯಾಪಾರಿ 5,888 ಯುವಾನ್ ನೀಡಿ ಕ್ಯಾಂಡಲ್ ಖರೀದಿಸಿದ್ದರೂ ಯಾವುದೇ ಫಲಿತಾಂಶ ಕಾಣದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಿ ಜುಫಾನ್‌ಳನ್ನು ಬಂಧಿಸಿದ್ದಾರೆ. ಆರೋಪಗಳು ಸಾಬೀತಾದರೆ ಜುಫಾನ್‌ಗೆ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
https://www.newsics.com/2026/02/28/three-killed-on-the-spot-after-truck-collides-with-bike/