https://youtube.com/shorts/meQfr5hOsT4?si=1cvA5_5VnaGbyPSw
Subscribe ನ್ಯೂಸಿಕ್ಸ್ ಕನ್ನಡ
newsics.com
ಮದುವೆಯಾಗಲೆಂದು ಹೊರಟಿದ್ದ ಪ್ರೇಮಿಗಳ ಕಾರೊಂದು ಅಪಘಾತಕ್ಕೀಡಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ಬಳಿ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹಿರೇಕೆರೂರಿನ ಜೋಡಿಯೊಂದು ಪ್ರೀತಿಸಿ ಮದುವೆಯಾಗಲು ಹೊರಟಿತ್ತು. ಊರಿಗೆ ಬಂದಿದ್ದ ಯುವತಿಯನ್ನು ಬೆಂಗಳೂರಿಗೆ ಕರೆದೊಯ್ದು ಮದುವೆಯಾಗಲು ಯುವಕ ಇಬ್ಬರು ಸ್ನೇಹಿತರ ಜೊತೆ ಬಂದಿದ್ದನು. ಯುವಕನಿಗೆ ಆತ ಇಬ್ಬರು ಗೆಳೆಯರು ಸಾಥ್ ಕೊಟ್ಟಿದ್ದು, ಯುವತಿಯನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಯುವತಿಯ ಪೋಷಕರು ಹುಡುಕುತ್ತಾ ಬರಬಹುದು ಎಂಬ ಭಯದಲ್ಲಿ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಚನ್ನಹಳ್ಳಿ ತಾಂಡಾ ಬಳಿ ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ.
ಅಪಘಾತದ ತೀವ್ರತೆಗೆ ಕಾರಿನೊಳಗಿದ್ದ ಮೂವರು ಯುವಕರಿಗೂ ಗಂಭೀರ ಗಾಯಗಳಾಗಿವೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವತಿ ಮಾತ್ರ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಕೆಗೆ ದೊಡ್ಡ ಮಟ್ಟಿನ ಗಾಯವಾಗಿರಲಿಲ್ಲ ಎಂದು ಹೇಳಲಾಗಿದೆ. ಊರ ಬಳಿಯೇ ಕಾರು ಪಲ್ಟಿಯಾದ ಕಾರಣ ರಕ್ಷಣೆಗೆ ಜನ ಸೇರಿದ್ದಾರೆ. ಸಹಜವಾಗಿಯೇ ಯಾರು ಏನು ಎತ್ತ ಎಂದು ವಿಚಾರಿಸತೊಡಗಿದ್ದಾರೆ. ಈ ವೇಳೆ ಪ್ರಿಯಕರ ಮತ್ತು ಅವರ ಉಳಿದ ಗೆಳೆಯರು ಆಸ್ಪತ್ರೆಯ ಕಡೆಗೆ ತೆರಳಿದರೆ ಯುವತಿ ಮಾತ್ರ ಮರ್ಯಾದೆಗೆ ಅಂಜಿ ಅಲ್ಲಿಂದ ಹೊರಡಲು ತೀರ್ಮಾನಿಸಿದರು. ಬಳಿಕ ಅವರಿವರ ಬಳಿ ಡ್ರಾಪ್ ಪಡೆದು ಬೆಂಗಳೂರಿಗೆ ತೆರಳುವ ಬಸ್ ಹಿಡಿದು ಮನೆ ಸೇರಿದ್ದಾಳೆ.
https://www.newsics.com/2026/02/20/us-cancels-trump-imposed-tariffs-globally/