https://youtube.com/shorts/meQfr5hOsT4?si=–SvccKUHgJJVjWK
Subscribe ನ್ಯೂಸಿಕ್ಸ್ ಕನ್ನಡ
newsics.com
ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅವರು ಇನ್ನು ಕೆಲವೇ ದಿನಗಳಲ್ಲಿ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಫೆಬ್ರವರಿ 26ರಂದು ಇವರ ಮದುವೆ ನಡೆಯುತ್ತಿದೆ. ಈ ವಿವಾಹದ ಬಗ್ಗೆ ಅವರು ಈವರೆಗೆ ಅಧಿಕೃತ ಮಾಹಿತಿ ನೀಡಿರಲಿಲ್ಲ. ಈಗ ರಶ್ಮಿಕಾ ಮಂದಣ್ಣ ಅವರು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ.
ಅವರಿಗೆ ಕಳುಹಿಸಿದ ಸಂದೇಶಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸಿ, ಮದುವೆ ಒಪ್ಪಿಕೊಂಡಿದ್ದಾರೆ.
ಬಾಲಿವುಡ್ ಹಂಗಾಮ ತಂಡದವರು ರಶ್ಮಿಕಾ ಮಂದಣ್ಣಗೆ ‘ಅಭಿನಂದನೆಗಳು’ ಎಂಬ ಸಂದೇಶ ಕಳುಹಿಸಿತ್ತಂತೆ. ಸಾಮಾನ್ಯವಾಗಿ ಗಾಸಿಪ್ ಆದರೆ, ಈ ವಿಷಯದಲ್ಲಿ ಸೈಲೆಂಟ್ ಆಗುತ್ತಾರೆ. ಆದರೆ, ರಶ್ಮಿಕಾ ಹಾಗೆ ಮಾಡಿಲ್ಲ. ಅವರು ‘ಧನ್ಯವಾದಗಳು’ ಎಂದು ಉತ್ತರಿಸಿದ್ದಾರೆ. ಇದಕ್ಕೆ ನಗುವ ಎಮೋಜಿ ಕೂಡ ಹಾಕಿದ್ದಾರಂತೆ. ಈ ಮೂಲಕ ವಿವಾಹ ವಿಷಯ ಖಚಿತಪಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉದಯಪುರದಲ್ಲಿ ಮದುವೆ ಆಗುತ್ತಿದ್ದಾರೆ. ಇದಕ್ಕೆ ಐಷಾರಾಮಿ ಹೋಟೆಲ್ ಬುಕ್ ಆಗಿದ್ದು, ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ದಂಪತಿಯ ಆಮಂತ್ರಣಪತ್ರ ವೈರಲ್ ಆಗಿ ಗಮನ ಸೆಳೆಯಿತು. ವಿವಾಹದ ಬಳಿಕ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ಆಯೋಜನೆ ಮಾಡಲಾಗಿದೆ. ಮಾರ್ಚ್ 4ರಂದು ಈ ಆರತಕ್ಷತೆ ನಿಗದಿ ಆಗಿದೆ. ಡೆಸ್ಟಿನೇಷನ್ ವೆಡ್ಡಿಂಗ್ಗೆ ಉದಯಪುರ ಒಳ್ಳೆಯ ಜಾಗ. ಅನೇಕ ಸೆಲೆಬ್ರಿಟಿಗಳು ಇಲ್ಲಿ ವಿವಾಹ ಆಗಿದ್ದಾರೆ. ಈ ಸಾಲಿಗೆ ರಶ್ಮಿಕಾ ಕೂಡ ಸೇರುತ್ತಿದ್ದಾರೆ.